ಒಳ್ಳೇ ಕ್ವಾಲಿಟಿಯೇ ಮುಳುವಾಯ್ತು Tupperwareಗೆ, ಕಂಪನಿ ಮುಚ್ಚಿದ್ಯಾಕೆ?

Published : Aug 23, 2025, 05:58 PM IST

ಉತ್ತಮ ಗುಣಮಟ್ಟದ ಉತ್ಪನ್ನಗಳಿಂದಲೇ ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಿದೆ. ಬದಲಾದ ಮಾರುಕಟ್ಟೆಗೆ ಹೊಂದಿಕೊಳ್ಳದೆ, ಡಿಜಿಟಲ್ ಯುಗದಲ್ಲಿ ಹಿಂದುಳಿದಿರುವುದು ಕಂಪನಿಯ ನಷ್ಟಕ್ಕೆ ಕಾರಣ.

PREV
17
ದಿವಾಳಿಯಾದ ಕಂಪನಿಯ ಅಚ್ಚರಿ ಕಥೆ

ಬ್ಯುಸಿನೆಸ್‌ನಲ್ಲಿ ಅತಿಯಾದ ಪ್ರಾಮಾಣಿಕತೆ ಇರಬಾರದು ಎಂದು ಕೆಲವರು ಹೇಳುತ್ತಿರುತ್ತಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ಮಾತನ್ನು ಕೇಳಿರುತ್ತೀರಿ. ಈ ಮಾತುಗಳಿಗೆ ಸಾಕ್ಷಿಯಾಗಿದೆ ಟಪ್ಪರ್‌ವೇರ್ ಕಂಪನಿಯಾಗಿದೆ. ಮಾರುಕಟ್ಟೆಗೆ ಅತ್ಯಂತ ಉತ್ತಮ ಕ್ವಾಲಿಟಿ ಉತ್ಪನ್ನಗಳನ್ನು ತಂದಿರೋದು ಕಂಪನಿ ನಷ್ಟಕ್ಕೆ ಕಾರಣವಾಯ್ತುಅಂದ್ರೆ ನೀವು ನಂಬಲೇಬೇಕು.

27
ಕಂಪನಿ ನಷ್ಟಕ್ಕೆ ಕಾರಣ ಏನು?

ಅಡುಗೆಮನೆಗಳಲ್ಲಿ ಟಪ್ಪರ್‌ವೇರ್ ಬಾಕ್ಸ್, ಬಾಟೆಲ್ ಸೇರಿದಂತೆ ಇನ್ನಿತರ ಉಪಕರಣಗಳನ್ನು ನೋಡಿರುತ್ತೀರಿ ಮತ್ತು ಬಳಸುತ್ತಿರುತ್ತೀರಿ. ಆದರೆ ಈ ಕಂಪನಿ ದಿವಾಳಿಯಾಗಲು ಕಾರಣ ಇದರ ಉತ್ತಮ ಕ್ವಾಲಿಟಿ. ಸೆಪ್ಟೆಂಬರ್ 2024ರಂದು ತನ್ನ ದಿವಾಳಿತನದ ಕುರಿತು ಅಧಿಕೃತ ಹೇಳಿಕೆಯನ್ನು ನೀಡಿತ್ತು. ಒಂದು ಕಾಲದಲ್ಲಿ ನಂಬರ್ ಒನ್ ಸೇಲ್ ಹೊಂದಿದ ಕಂಪನಿಯಾಗಿದ್ದ ಟಪ್ಪರ್ ವೇರ್ ಹಂತ ಹಂತವಾಗಿ ಕುಸಿತ ಕಂಡಿದೆ.

37
ಉತ್ತಮ ಕ್ವಾಲಿಟಿ

ಟಪ್ಪರ್‌ವೇರ್ ಉತ್ಪನ್ನಗಳು ಉತ್ತಮ ಕ್ವಾಲಿಟಿಯ ಉತ್ಪನ್ನಗಳಾಗಿದ್ದರಿಂದ ಗ್ರಾಹಕರು ಪುನಾರ್ವತಿತ ಅಂದ್ರೆ ರಿಪೀಟ್ ಆಗಲಿಲ್ಲ. ಒಮ್ಮೆ ಖರೀದಿಸಿದ ಗ್ರಾಹಕರು ಟಪ್ಪರ್‌ವೇರ್‌ನತ್ತ ಮುಖ ಮಾಡಲಿಲ್ಲ. ಕಂಪನಿ ದಿವಾಳಿತನಕ್ಕೆ ಇದು ಪ್ರಮುಖ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.

47
ಕೋವಿಡ್ ಕಾಲಘಟ್ಟ

ಕೋವಿಡ್ ಎಂಬ ಸಾಂಕ್ರಾಮಿಕ ರೋಗ ಹಲವು ಕಂಪನಿಗಳನ್ನು ನುಗ್ಗಿದೆ. ಕೋವಿಡ್ ಬಳಿಕ ಟಪ್ಪರ್‌ವೇರ್ ಉತ್ಪನ್ನಗಳ ಮಾರಾಟ ಗಣನೀಯವಾಗಿ ಕುಸಿತ ಕಾಣಲಾರಂಭಿಸಿತು. ಬೇಡಿಕೆ ಕುಸಿತ ಕಂಡು ಮಾರುಕಟ್ಟೆಯಿಂದ ದೂರ ಉಳಿಯಲು ಟಪ್ಪರ್‌ವೇರ್ ಉತ್ಪನ್ನಗಳು ಮುಂದಾದವು.

57
ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕ ಶೈಲಿಯ ಮಾರಾಟ

ಟಪ್ಪರ್‌ವೇರ್ ಡಿಜಿಟಲ್ ಮಾರುಕಟ್ಟೆ ಅಳವಡಿಸಿಕೊಳ್ಳಲು ವಿಫಲವಾಯ್ತು ಮತ್ತು ಅಳವಡಿಸಿಕೊಳ್ಳುವಲ್ಲಿ ಬೇರೆ ಕಂಪನಿಗಳು ಆನ್‌ಲೈನ್ ಮಾರುಕಟ್ಟೆಯಲ್ಲಿ ತಮ್ಮದೇ ಟ್ರೆಂಡ್ ಸೃಷ್ಟಿಸಿದ್ದವು. ಡಿಜಿಟಲ್ ಮಾರ್ಕೆಟಿಂಗ್ ಸ್ಪರ್ಧಾತ್ಮಕತೆಯಲ್ಲಿ ಟಪ್ಪರ್‌ವೇರ್ ಹಿಂದುಳಿಯಿತು.

67
ಬೆಲೆ ಮತ್ತು ಸ್ಪರ್ಧೆ

ಉತ್ತಮ ಗುಣಮಟ್ಟ ಹೊಂದಿರುವ ಕಾರಣ ಟಪ್ಪರ್‌ವೇರ್ ಉತ್ಪನ್ನಗಳ ಬೆಲೆ ಕೊಂಚ ಹೆಚ್ಚಳವಾಗಿತ್ತು. ಇದೇ ಮಾದರಿಯ ಕಡಿಮೆ ಬೆಲೆಯ ಉತ್ಪನ್ನಗಳು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡವು. ಇದು ಸಹ ಟಪ್ಪರ್‌ವೇರ್ ನಷ್ಟಕ್ಕೆ ಕಾರಣವಾಯ್ತು. ಇತ್ತೀಚೆಗೆ ಜನರು ನೋ ಪ್ಲಾಸ್ಟಿಕ್ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಾ ಪರಿಸರ ಸ್ನೇಹಿ ಉತ್ಪನ್ನಗಳತ್ತ ಆಕರ್ಷಿತರಾಗುತ್ತಿದ್ದಾರೆ.

77
ಮಾರುಕಟ್ಟೆ ಅರ್ಥೈಸಿಕೊಳ್ಳಲು ವಿಫಲವಾದ ಕಂಪನಿ

ಟಪ್ಪರ್‌ವೇರ್ ಬದಲಾದ ಗ್ರಾಹಕರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳಲು ವಿಫಲವಾಯ್ತು. ಮಾರುಕಟ್ಟೆ ಮತ್ತು ಗ್ರಾಹಕರಿಗೆ ತಕ್ಕಂತೆ ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ವಿಫಲವಾಯ್ತು. ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕಳೆದುಕೊಳ್ಳಲಾರಂಭಿಸಿತು. ಕಚ್ಚಾ ವಸ್ತು, ಕಾರ್ಮಿಕರು ಮತ್ತು ಸರಕು ಸಾಗಣೆ ವೆಚ್ಚಗಳು ಅಧಿಕವಾಗಿ ಕಂಪನಿ ನಷ್ಟವನ್ನು ಅನುಭವಿಸಿತು.

Read more Photos on
click me!

Recommended Stories