ಡಿ ಮಾರ್ಟ್‌ನಲ್ಲಿ ಸರ್ಪ್ರೈಸ್ ಆಫರ್; ಹಲವು ರೀತಿಯ ಆಫರ್, ಗೃಹಿಣಿಯರು ಫುಲ್ ಖುಷ್!

Published : Jul 15, 2025, 06:18 PM ISTUpdated : Jul 15, 2025, 06:20 PM IST

ಡಿಮಾರ್ಟ್ ತನ್ನ ಗ್ರಾಹಕರಿಗೆ, ವಿಶೇಷವಾಗಿ ಗೃಹಿಣಿಯರಿಗೆ ಸರ್ಪ್ರೈಸ್ ಆಫರ್‌ಗಳನ್ನು ನೀಡುತ್ತಿದೆ. ಕಿರಾಣಿ, ಬಟ್ಟೆ ಸೇರಿದಂತೆ ಹಲವು ವಸ್ತುಗಳ ಮೇಲೆ ರಿಯಾಯಿತಿ ಮತ್ತು ಉಚಿತ ಕೊಡುಗೆಗಳನ್ನು ಒಳಗೊಂಡ ಈ ಆಫರ್‌ಗಳು ವಾರಾಂತ್ಯದಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುತ್ತಿವೆ.

PREV
16

ಡಿ ಮಾರ್ಟ್ ಶಾಪಿಂಗ್ ಸೆಂಟರ್ ಇಂದು ದೇಶದ ಟಯರ್ 2 ಮತ್ತು ಟಯರ್ 3 ಸಿಟಿಗಳಲ್ಲಿಯೂ ತನ್ನ ಸ್ಟೋರ್‌ಗಳನ್ನು ಆರಂಭಿಸುತ್ತಿದೆ. ಡಿ ಮಾರ್ಟ್ ತನ್ನ ಗ್ರಾಹಕರಿಗೆ ವಿವಿಧ ಆಫರ್‌ಗಳನ್ನು ನೀಡುತ್ತಿರುತ್ತದೆ. ಇದೀಗ ಡಿ ಮಾರ್ಟ್ ಸರ್ಪೈಸ್ ಆಫರ್ ನೀಡುತ್ತಿದ್ದು, ಮಹಿಳಾ ಗ್ರಾಹಕರ ಸಂಖ್ಯೆ ಏರಿಕೆಯಾಗಿದೆ.

26

ಡಿ ಮಾರ್ಟ್‌ಗೆ ಆಗಮಿಸುತ್ತಿರುವ ಗೃಹಿಣಿಯರು ಹೆಚ್ಚು ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಕಳೆದ ಶುಕ್ರವಾರದಿಂದ ಡಿ ಮಾರ್ಟ್ ಗ್ರಾಹಕರ ಸಂಖ್ಯೆ ಏರಿಕೆಯಾಗಿದ್ದು, ಇದಕ್ಕೆ ಕಾರಣ ಸರ್ಪೈಸ್ ಆಫರ್. ಡಿ ಮಾರ್ಟ್ ಸೂಪರ್ ಮಾರ್ಕೆಟ್ ಕಡಿಮೆ ಬೆಲೆಯಲ್ಲಿ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಡಿ ಮಾರ್ಟ್‌ನಲ್ಲಿ ನಿಮಗೆ ಕಿರಾಣಿ ಸಾಮಾಗ್ರಿ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳು ಸಿಗುತ್ತವೆ.

36

ದೇಶದಲ್ಲಿ 375ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಡಿ ಮಾರ್ಟ್ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಯಾಗುತ್ತಿದೆ. ಪ್ರತಿಸ್ಪರ್ಧಿಗಳಿಗಿಂತ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತೇವೆ ಎಂದು ಡಿ ಮಾರ್ಟ್ ಹೇಳಿಕೊಂಡಿದೆ. ಹಾಗೆ ರಶೀದಿಯಲ್ಲಿ ಗ್ರಾಹಕರು ತಾವು ಮಾಡಿದ ಶಾಪಿಂಗ್‌ನಿಂದ ಎಷ್ಟು ಹಣ ಉಳಿಸಿದ್ದಾರೆ ಎಂಬ ಮಾಹಿತಿಯನ್ನು ಸಹ ಡಿ ಮಾರ್ಟ್ ನೀಡುತ್ತದೆ. ಈ ಮೂಲಕವೂ ಡಿ ಮಾರ್ಟ್ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತದೆ.

46

ಈ ರೀತಿಯಾಗಿ ಡಿ ಮಾರ್ಟ್ ಶನಿವಾರ ಮತ್ತು ಭಾನುವಾರ ವಿಶೇಷ ಆಫರ್ ಗಳನ್ನು ನೀಡುತ್ತಿದೆ. ವಿಶೇಷವಾಗಿ ಗೃಹಿಣಿಯರು ಡಿ ಮಾರ್ಟ್‌ನಲ್ಲಿ ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ. ಅಡುಗೆಯ ಮಸಾಲೆಯಿಂದ ಹಿಡಿದು ಬಟ್ಟೆಯವರೆಗೂ ಬೇಕಾಗುವ ಎಲ್ಲಾ ಸಾಮಾಗ್ರಿಗಳು ಬಜೆಟ್ ದರದಲ್ಲಿ ಸಿಗುತ್ತವೆ ಎಂಬ ಕಾರಣದಿಂದ ಗೃಹಿಣಿಯರು ಡಿ ಮಾರ್ಟ್ ಶಾಪಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ.

56

ಇದೀಗ ಡಿ ಮಾರ್ಟ್ ಕೆಲವು ವಸ್ತುಗಳ ಮೇಲೆ ಶೇ.50ರಷ್ಟು ರಿಯಾಯ್ತಿಯನ್ನು ನೀಡುತ್ತಿದೆ. ಇಷ್ಟು ಮಾತ್ರವಲ್ಲ ಕೆಲವೊಂದು ವಸ್ತುಗಳನ್ನು ಖರೀದಿಸಿದ್ರೆ, ಅದರ ಜೊತೆ ಮತ್ತೊಂದು ವಸ್ತುವನ್ನು ಉಚಿತವಾಗಿಯೂ ನೀಡುತ್ತಿದೆ. ಹಾಗಾಗಿ ನಿಮಗೆ ಒಂದು ವಸ್ತು ಉಚಿತವಾಗಿ ಸಿಗುತ್ತದೆ. ಕಳೆದ ಶುಕ್ರವಾರದಿಂದ ಈವರೆಗೆ ಗ್ರಾಹಕರು ವಿಶೇಷ ಆಫರ್‌ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

66

ವಾರಾಂತ್ಯದಲ್ಲಿ ಡಿ ಮಾರ್ಟ್‌ ತನ್ನ ಸ್ಟಾಕ್‌ನಲ್ಲಿರುವ ಹೆಚ್ಚಿನ ವಸ್ತುಗಳನ್ನು ಕ್ಲಿಯರ್ ಮಾಡುತ್ತದೆ. ಸೋಮವಾರವೂ ಈ ಮಾರಾಟದ ಪ್ರಮಾಣ ಅಧಿಕವಾಗಿರುತ್ತದೆ ಎಂದು ಹೇಳಲಾಗುತ್ತದೆ. ಗೃಹಿಣಿಯರು ಬೇರೆ ದಿನಗಳಿಗಿಂತ ಸೋಮವಾರದಂದೇ ಹೆಚ್ಚು ಶಾಪಿಂಗ್ ಮಾಡಲು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ.

Read more Photos on
click me!

Recommended Stories