ಅತಿಹೆಚ್ಚು ಕಚ್ಚಾ ತೈಲ ರಫ್ತು ಮಾಡುವ ಟಾಪ್ 10 ದೇಶಗಳಿವು..! ಮೊದಲ ಸ್ಥಾನ ಯಾರಿಗೆ?

Published : Aug 26, 2023, 03:56 PM IST

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳಿಲ್ಲದ ಜಗತ್ತನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ತೈಲ ಇಂಧನ ಜಗತ್ತಿನಲ್ಲಿ ಅತಿಹೆಚ್ಚು ವ್ಯಾವಾರ ವಹಿವಾಟು ನಡೆಸುವ ಒಂದು ಉದ್ಯಮವಾಗಿದೆ. ಕಳೆದ ವರ್ಷ ಅಂದರೆ 2022ರಲ್ಲಿ ಅತಿಹೆಚ್ಚು ಮೊತ್ತದ ತೈಲ ಉತ್ಫನ್ನ ರಫ್ತು ಮಾಡಿದ ಟಾಪ್ 10 ದೇಶಗಳ ವಿವರ ಹೀಗಿದೆ ನೋಡಿ.  

PREV
110
ಅತಿಹೆಚ್ಚು ಕಚ್ಚಾ ತೈಲ ರಫ್ತು ಮಾಡುವ ಟಾಪ್ 10 ದೇಶಗಳಿವು..! ಮೊದಲ ಸ್ಥಾನ  ಯಾರಿಗೆ?
1. ಸೌದಿ ಅರೇಬಿಯಾ:

ಜಗತ್ತಿನ ಅತಿದೊಡ್ಡ ಮೊತ್ತದ ಕಚ್ಛಾ ತೈಲ ಉತ್ಫನ್ನ ರಫ್ತು ಮಾಡಿದ ದೇಶವೆಂದರೆ ಅದು ಸೌದಿ ಅರೇಬಿಯಾ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಕಚ್ಚಾ ತೈಲ ರಫ್ತಿನಲ್ಲಿ ಸೌದಿ ಅರೇಬಿಯಾದ ಪಾಲು ಶೇ.14.5%. ಸೌದಿ ಅರೇಬಿಯಾ ಕಳೆದ ವರ್ಷ 224 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ರಫ್ತು ಮಾಡಿದೆ.

210
2. ಕೆನಡಾ:

ಕೆನಡಾ ಜಗತ್ತಿನ ಎರಡನೇ ಅತಿಹೆಚ್ಚು ಕಚ್ಚಾ ತೈಲ ರಫ್ತು ಮಾಡಿದ ದೇಶ ಎನಿಸಿಕೊಂಡಿದೆ. ಕೆನಡಾ 120 ಬಿಲಿಯನ್ ಮೌಲ್ಯದ ಪೆಟ್ರೋಲಿಯಂ ಕಚ್ಛಾ ತೈಲವನ್ನು ರಫ್ತು ಮಾಡಿದೆ.
 

310
3. ರಷ್ಯಾ:

ಉಕ್ರೇನ್‌ ಮೇಲೆ ಯುದ್ದ ಸಾರಿರುವ ರಷ್ಯಾ, ವ್ಯಾಪಕ ಮಟ್ಟದಲ್ಲಿ ಕಚ್ಛಾ ತೈಲ ಮಾರಾಟ ಮಾಡುವತ್ತ ಹೆಜ್ಜೆಯಿಟ್ಟಿದೆ. ರಷ್ಯಾ ಸುಮಾರು 119 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲವನ್ನು ಬೇರೆ ದೇಶಗಳಿಗೆ ರಫ್ತು ಮಾಡಿದೆ.

410
4. ಅಮೆರಿಕ ಸಂಯುಕ್ತ ಸಂಸ್ಥಾನ:

ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಯುಎಸ್‌ಎ, ಇದೀಗ ನಾಲ್ಕನೇ ಅತಿದೊಡ್ಡ ಕಚ್ಚಾ ತೈಲ ರಫ್ತು ಮಾಡುವ ದೇಶ ಎನಿಸಿಕೊಂಡಿದೆ. ಅಮೆರಿಕ ಸಂಯುಕ್ತ ಸಂಸ್ಥಾನವು 117 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ರಫ್ತು ಮಾಡಿದೆ.

510
5. ಯುನೈಟೆಡ್ ಅರಬ್ ಎಮಿರೇಟ್ಸ್:

ದುಬೈ, ಅಬುದಾಬಿ ಹಾಗೂ ಶಾರ್ಜಾ ಒಳಗೊಂಡ ಯುಎಇ ಕಳೆದ ವರ್ಷ 112 ಬಿಲಿಯನ್ ಡಾಲರ್ ಮೊತ್ತದ ಕಚ್ಚಾ ತೈಲವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ 5ನೇ ಸ್ಥಾನ ಪಡೆದುಕೊಂಡಿದೆ. 

610
6. ಇರಾಕ್:

OPEC ದೇಶಗಳ ಪೈಕಿ ಸೌದಿ ಅರೇಬಿಯಾ ಬಳಿಕ ಅತಿಹೆಚ್ಚು ಕಚ್ಚಾ ತೈಲ ಉತ್ಫನ್ನ ರಫ್ತು ಮಾಡುವ ದೇಶವೆಂದರೆ ಅದು ಇರಾಕ್. ಕಳೆದ ವರ್ಷ ಇರಾಕ್ ದೇಶವು 82 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ರಫ್ತು ಮಾಡಿದೆ. 

710
7. ನಾರ್ವೆ:

ಪಶ್ಚಿಮ ಯೂರೋಪ್‌ನ ರಾಷ್ಟ್ರಗಳ ಪೈಕಿ ಅತಿಹೆಚ್ಚು ತೈಲ ಉತ್ಫನ್ನದ ಸ್ಟಾಕ್ ಹೊಂದಿದ ರಾಷ್ಟ್ರ ಎನಿಸಿಕೊಂಡಿರುವ ನಾರ್ವೆ, ತನ್ನ ದೇಶದ ಜಿಡಿಪಿಗೆ 20% ಆದಾಯ ಕಚ್ಛಾ ತೈಲ ಉತ್ಫನ್ನದ ರಫ್ತಿನಿಂದಲೇ ಬರುತ್ತಿದೆ. ಕಳೆದ ವರ್ಷ 57 ಬಿಲಿಯನ್ ಡಾಲರ್ ಕಚ್ಛಾ ತೈಲ ರಫ್ತು ಮಾಡಿದೆ.
 

810
8. ಕುವೈತ್:

ಜಗತ್ತಿನ 7ನೇ ಅತಿಹೆಚ್ಚು ತೈಲ ಸ್ಟಾಕ್ ಹೊಂದಿದ ದೇಶ ಎನಿಸಿಕೊಂಡಿರುವ ಕುವೈತ್ ಕಳೆದ ವರ್ಷ 54 ಬಿಲಿಯನ್ ಡಾಲರ್ ಕಚ್ಛಾ ತೈಲ ರಫ್ತು ಮಾಡುವ ಮೂಲಕ 8ನೇ ಸ್ಥಾನ ಪಡೆದಿದೆ.

910
9. ನೈಜೀರಿಯಾ:

ಆಫ್ರಿಕಾ ಖಂಡದಲ್ಲಿ ಅತಿಹೆಚ್ಚು ತೈಲ ನಿಕ್ಷೇಪ ಹೊಂದಿರುವ ದೇಶ ಎನಿಸಿಕೊಂಡಿರುವ ನೈಜೀರಿಯಾ, ಕಳೆದ ವರ್ಷ 49 ಬಿಲಿಯನ್ ಡಾಲರ್‌ ಮೌಲ್ಯದ ಕಚ್ಛಾ ತೈಲ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
 

1010
10. ಬ್ರೆಜಿಲ್‌:

ಕಳೆದ ವರ್ಷ ಬ್ರೆಜಿಲ್ ದಿನವೊಂದಕ್ಕೆ 3.77 ಮಿಲಿಯನ್ ಬ್ಯಾರೆಲ್‌ ಕಚ್ಚಾ ತೈಲವನ್ನು ಹೊರ ತೆಗೆದಿದೆ. ಕಳೆದ ವರ್ಷ ಬ್ರೆಜಿಲ್‌ 42 ಬಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ರಫ್ತು ಮಾಡಿದೆ.

Read more Photos on
click me!

Recommended Stories