ಒಂದು ರಿಕ್ವೆಸ್ಟ್, ಡಬಲ್ ಆಗುತ್ತೆ ನಿಮ್ಮ PF ಹಣ: ಇಲ್ಲಿದೆ ವಿಧಾನ!

First Published Apr 8, 2020, 1:56 PM IST

ಖಾಸಗಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಕೆಲಸ ಮಾಡುವ ಉದ್ಯೋಗಿಗಳಿಗೆ ತಮ್ಮ PF ಹಣ ದ್ವಿಗುಣಗೊಳಿಸಲು ಏಪ್ರಿಲ್‌ನಲ್ಲಿ ಸುವರ್ಣಾವಕಾಶವಿದೆ. ಖಾಸಗಿ ಕಂಪನಿಗಳು ಏಪ್ರಿಲ್‌ನಲ್ಲಿ ತಮ್ಮ ಉದ್ಯೋಗಿಗಳ ಅಪ್ರೈಸಲ್ ಮಾಡುತ್ತವೆ. ಹೀಗಿರುವಾಗ ಸ್ಯಾಲರಿ ಸ್ಟ್ರಕ್ಚರ್ ಕೂಡಾ ಬದಲಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಕಂಪನಿ ಬಳಿ ನಿಮ್ಮ PF ಹೆಚ್ಚು ಮಾಡಲು ಮನವಿ ಮಾಡಿಕೊಳ್ಳಬಹುದು. ಇದರಿಂದ ಭವಿಷ್ಯಕ್ಕಾಗಿ ನಿಮ್ಮ ಉಳಿತಾಯದಲ್ಲಿ ಬಹುದೊಡ್ಡ ಬದಲಾವಣೆಯಾಗಬಹುದು.
 

PFನಿಂದ ಹೆಚ್ಚಾಗುತ್ತದೆ ಕಾಂಟ್ರಿಬ್ಯೂಷನ್: ಒಂದು ವೇಳೆ ನಿಮ್ಮ ಮನವಿಗೆ ಗ್ರೀನ್ ಸಿಗ್ನಲ್ ಸಿಕ್ಕರೆ ನಿಮ್ಮ ಖಾತೆಗೆ ಪ್ರತಿ ತಿಂಗಳು ಜಮೆಯಾಗುವ ನಿಮ್ಮ ಹಣ ಹೆಚ್ಚಾಗುತ್ತದೆ. ಇದರಿಂದ ನಿವೃತ್ತಿ ವೇಳೆ ನಿಮ್ಮ ಪಿಎಫ್ ಹಣ ಡಬಲ್ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ. ಅಲ್ಲೇ ಬಡ್ಡಿ ದರವೂ ಹೆಚ್ಚಿದೆ. ಸದ್ಯಕ್ಕಿರುವ ಸರ್ಕಾರಿ ಯೋಜನೆಗಳಲ್ಲಿ ಇದು ಅತ್ಯಂತ ಉತ್ತಮ ಹಾಗೂ ಅತಿ ಹೆಚ್ಚು ಬಡ್ಡಿ ನೀಡುವ ಯೋಜನೆಯಾಗಿದೆ. ಹೀಗಿರುವಾಗ ನಿಮ್ಮ ಪಿಎಫ್ ಹಣ ಹೆಚ್ಚಿಸಿ, ಸಿಗುವ ಬಡ್ಡಿಯ ಲಾಭ ಪಡೆಯಬಹುದು.
undefined
ನಿಯಮವೇನು? ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಯನ್ವಯ EPFO ನ ಯಾವುದೇ ಸದಸ್ಯ ಪಿಎಫ್‌ಗೆ ತಾನು ನೀಡುವ ಮಾಸಿಕ ಕೊಡುಗೆ ಹೆಚ್ಚಿಸಬಹುದು. ಪ್ರತಿ ತಿಂಗಳು ಪಿಎಫ್‌ ಖಾತೆಗೆ ಬೇಸಿಕ್ ಸ್ಯಾಲರಿ ಹಾಗೂ ಡಿಎನ ಶೇ. 12 ರಷ್ಟು ಉದ್ಯೋಗಿಗಳ ಕೊಡುಗೆ ಹೋಗುತ್ತದೆ. ಹೀಗಿರುವಾಗ ಶೇ. 12ರಷ್ಟು ಕೊಡುಗೆ ಕಂಪನಿ ನೀಡುತ್ತದೆ. ಹೀಗಿರುವಾಗ ಉದ್ಯೋಗಿಯೊಬ್ಬ ತನ್ನ ಮಾಸಿಕ ಕೊಡುಗೆ ಹೆಚ್ಚಿಸಹುದು. ಇದು ಬೇಸಿಕ್ ಸ್ಯಾಲರಿಯ ಶೇ. 100ರಷ್ಟೂ ಕೊಡುಗೆಯಾಗಿ ನೀಡಬಹುದು.
undefined
EPFO ನಿಯಮವೇನು?: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಮಾಜಿ ಉಪ ಆಯುಕ್ತ ಎ. ಕೆ. ಶುಕ್ಲಾ ಅನ್ವಯ EPFO ನಿಯಮದ ಅನುಸಾರ ಉದ್ಯೋಗಿಯೊಬ್ಬನಿಗೆ ತನ್ನ ಕಂಪನಿಗೆ ತಿಳಿಸಿ ತನ್ನ ಪಿಎಫ್ ಕೊಡುಗೆ ಹೆಚ್ಚಿಸುವ ಅವಕಾಶವಿದೆ. ಕಾರ್ಮಿಕರ ಭವಿಷ್ಯ ನಿಧಿ ಕಾಯ್ದೆಯಡಿಯಲ್ಲಿ ಈ ಅವಕಾಶವಿದೆ. ನಿಯಮದನ್ವಯ ಪಿಎಫ್‌ ಖಾತೆಯಲ್ಲಿ ಉದ್ಯೋಗಿಯ ಬೇಸಿಕ್ ಸ್ಯಾಲರಿ ಹಾಗೂ ಡಿಎನ ಶೇ. 12 ರಷ್ಟು ಜಮೆಯಾಗುತ್ತದೆ. ಹೀಗಿರುವಾಗ ಉದ್ಯೋಗಿ ತನ್ನ ಬೇಸಿಕ್ ಸ್ಯಾಲರಿಯ ಶೇ. 100ರಷ್ಟನ್ನೂ ಪಿಎಫ್‌ ಕೊಡುಗೆಯಾಗಿ ನೀಡಬಹುದು ಎಂದಿದ್ದಾರೆ.
undefined
ಪಿಎಫ್‌ ಡಬಲ್ ಆಗೋದು ಹೇಗೆ? ಒಂದು ವೇಳೆ ಒಬ್ಬ ಉದ್ಯೋಗಿ ತನ್ನ ಮಾಸಿಕ ಕೊಡುಗೆಯನ್ನು ಡಬಲ್ ಮಾಡಿಕೊಂಡರೆ ಆತನ ಪಿಎಫ್ ಖಾತೆಯ ಹಣ ತನ್ನಿಂತಾನಾಗೇ ಡಬಲ್ ಆಗುತ್ತದೆ. ಸದ್ಯಕ್ಕಿರುವ ವ್ಯವಸ್ಥೆಯನ್ವಯ ಬೇಸಿಕ್ ಸ್ಯಾಲರಿಯ ಶೇ. 12 ರಷ್ಟು ಪಿಎಫ್‌ ಖಾತೆಗೆ ಹೋಗುತ್ತದೆ. ಒಂದು ವೇಳೆ ಇದನ್ನು ಶೇ 24ರಷ್ಟು ಮಾಡಿದರೆ ಆ ಉದ್ಯೋಗಿಯ ಪಿಎಫ್‌ ಹಣವೂ ಡಬಲ್ ಆಗುತ್ತದೆ.
undefined
ಚಕ್ರಬಡ್ಡಿಯ ಲಾಭ: ಪಿಎಫ್ ಹಣ ಶೀಘ್ರವಾಗಿ ಡಬಲ್ ಅಗುವುದರೊಂದಿಗೆ ನಿಮಗೆ ಇದರ ಮೇಲೆ ಡಬಲ್ ಬಡ್ಡಿಯ ಲಾಭವೂ ಸಿಗುತ್ತದೆ. ಇನ್ನು ಪಿಎಫ್ ಬಡ್ಡಿಯ ಲೆಕ್ಕ ಚಕ್ರ ಬಡ್ಡಿಯಲ್ಲಿ ಮಾಡಲಾಗುತ್ತದೆ. ಇದನ್ನು ಕಂಪೌಂಡಿಂಗ್ ಇಂಟರೆಸ್ಟ್ ಎಂದೂ ಕರೆಯಲಾಗುತ್ತದೆ. ಇದರಿಂದಾಗಿ ಪಿಎಫ್ ಹಣ ಡಬಲ್ ಜಮೆಯಾಗುವುದರೊಂದಿಗೆ ಪ್ರತಿ ವರ್ಷ ಬಡ್ಡಿಗೆ ಬಡ್ಡಿ ಕೂಡಾ ಸಿಗುತ್ತದೆ. ಈ ಮೂಲಕ ನಿವೃತ್ತಿ ವೇಳೆ ಭಾರೀ ಮೊತ್ತ ಸಿಗುತ್ತದೆ.
undefined
ಇನ್ನು ಕೇಂದ್ರ ಸರ್ಕಾರವು ಕೊರೋನಾ ವೈರಸ್‌ನಿಂದ ಯಾರೆಲ್ಲರ ಆದಾಯದ ಮೇಲೆ ಪ್ರಭಾವ ಬೀರಿದೆಯೋ ಅವರೆಲ್ಲರಿಗೂ ತಮ್ಮ ಪಿಎಫ್‌ ಖಾತೆಯಿಂದ ಮೂರು ತಿಂಗಳ ವೇತನದಷ್ಟು ಹಣ ತೆಗೆಯುವ ಅವಕಾಶ ನೀಡಿದೆ. ಈ ಹಣ ನೀವು ಹಿಂದಿರುಗಿಸಬೇಕಾಗಿಲ್ಲ.
undefined
click me!