ಭಾರತದಲ್ಲಿ ಚಿನ್ನ ಖರೀದಿ ಒಂದು ಸಂಪ್ರದಾಯ ಮತ್ತು ಹೂಡಿಕೆಯಾಗಿದೆ. ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ ಹೋಲ್‌ಸೇಲ್ ಮಾರುಕಟ್ಟೆಗಳಿದ್ದು, ಇಲ್ಲಿ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಕಡಿಮೆ ಇರುವುದರಿಂದ ಆಭರಣಗಳು ಅಗ್ಗವಾಗಿ ಸಿಗುತ್ತವೆ.
ಬೆಲೆ ಎಷ್ಟೇ ಏರಿಕೆಯಾದರೂ ನಮ್ಮ ದೇಶದಲ್ಲಿ ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯವಾಗಿದೆ. ಆದ್ರೆ ಇಂದು ಬಹುತೇಕರು ಚಿನ್ನವನ್ನು ಹೂಡಿಕೆಯಾಗಿಯೂ ನೋಡುತ್ತಿರುವ ಕಾರಣ ಬೆಲೆ ಏರಿಕೆ ನಡುವೆಯೂ ಬಂಗಾರ ಬೇಡಿಕೆಯನ್ನು ಹೊಂದಿದೆ. ಆದ್ರೆ ಭಾರತದ ಕೆಲವು ಕಡೆಗಳಲ್ಲಿ ಬೇರೆಡೆಗಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ. ಕಡಿಮೆ ಬೆಲೆಗೆ ಚಿನ್ನ ಸಿಗುವ ಪ್ರಮುಖ ನಗರಗಳ ಮಾಹಿತಿ ಇಲ್ಲಿದೆ.
28
ಮುಂಬೈ
ಮುಂಬೈನ ಜವೇರಿ ಬಜಾರ್ ಭಾರತದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರ. ದೇಶದ ಬಹುತೇಕ ಚಿನ್ನ ಮತ್ತು ಬೆಳ್ಳಿ ವ್ಯಾಪಾರ ಇಲ್ಲಿಂದಲೇ ನಡೆಯುತ್ತದೆ. ಮದುವೆ ಆಭರಣಗಳಿಂದ ಹಿಡಿದು ದೈನಂದಿನ ಬಳಕೆಯ ಡಿಸೈನ್‌ಗಳವರೆಗೆ ಎಲ್ಲವೂ ಇಲ್ಲಿ ಹೋಲ್‌ಸೇಲ್ ದರದಲ್ಲಿ ಲಭ್ಯವಾಗುತ್ತದೆ.
38
ದೆಹಲಿ, ಜೈಪುರ, ಕೋಲ್ಕತ್ತಾ
ದೆಹಲಿಯ ಚಾಂದಿನಿ ಚೌಕ್‌ನಲ್ಲಿ 'ಕೂಚಾ ಮಹಾಜನಿ' ಎಂಬ ಮಾರುಕಟ್ಟೆ ಇದೆ. ಇದು ಉತ್ತರ ಭಾರತದ ಅತಿದೊಡ್ಡ ಚಿನ್ನದ ಮಾರುಕಟ್ಟೆಯಾಗುದೆ. ಇಲ್ಲಿ ಅದ್ಧೂರಿ ಬ್ರೈಡಲ್ ಆಭರಣಗಳು, ಕುಂದನ್ ಕೆಲಸದ ಒಡವೆಗಳು ಸಿಗುತ್ತವೆ. ಕೋಲ್ಕತ್ತಾದ 'ಬೋ ಬಜಾರ್' ಮತ್ತು 'ಬುರ್ರಾ ಬಜಾರ್' ಬೆಂಗಾಲಿ ಫಿಲಿಗ್ರಿ ಕೆಲಸಗಳಿಗೆ ಹೆಸರುವಾಸಿ. ರಾಜಸ್ಥಾನದ ಜೈಪುರದಲ್ಲಿರುವ 'ಜೋಹರಿ ಬಜಾರ್' ಸಾಂಪ್ರದಾಯಿಕ ಕುಂದನ್ ಮತ್ತು ಮೀನಾಕಾರಿ ಆಭರಣಗಳಿಗೆ ಪ್ರಸಿದ್ಧ.
ದಕ್ಷಿಣ ಭಾರತದಲ್ಲಿ ಚಿನ್ನದ ಆಭರಣಗಳಿಗೆ ಯಾವಾಗಲೂ ಬೇಡಿಕೆ ಹೆಚ್ಚು. ಚೆನ್ನೈನ ಜಾರ್ಜ್ ಟೌನ್, ಸಾಂಪ್ರದಾಯಿಕ ಟೆಂಪಲ್ ಮತ್ತು ಆ್ಯಂಟಿಕ್ ಆಭರಣಗಳಿಗೆ ಹೆಸರುವಾಸಿಯಾಗಿದೆ. ಹೈದರಾಬಾದ್‌ನ 'ಪಾಟ್ ಮಾರ್ಕೆಟ್' ಮತ್ತು 'ಬೇಗಂ ಬಜಾರ್' ಪ್ರದೇಶಗಳಲ್ಲೂ ಚಿನ್ನದ ಬೆಲೆ ಕಡಿಮೆ. ತಮಿಳುನಾಡಿನ ಕೊಯಮತ್ತೂರು, ಮೆಷಿನ್ ಚೈನ್‌ಗಳು ಮತ್ತು ಹಗುರವಾದ ಆಭರಣಗಳಿಗೆ ಪ್ರಮುಖ ಕೇಂದ್ರವಾಗಿದೆ.
58
ತ್ರಿಶೂರ್, ಅಹಮಾದಾಬಾದ್
ಕೇರಳದ ತ್ರಿಶೂರ್, ದಕ್ಷಿಣ ಭಾರತದ ಆಭರಣಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸುತ್ತದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ 'ಮಾನೆಕ್ ಚೌಕ್' ಭಾರತದ ಮತ್ತೊಂದು ದೊಡ್ಡ ಚಿನ್ನದ ಹೋಲ್‌ಸೇಲ್ ಕೇಂದ್ರ. ವಿಶೇಷವಾಗಿ ಬಿಸ್ಕತ್ ಚಿನ್ನ (Gold Bars/Coins) ಮತ್ತು ಹಾಲ್‌ಮಾರ್ಕ್ ಮಾಡಿದ ಶುದ್ಧ ಚಿನ್ನದ ಗಟ್ಟಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಇದು ಬಹಳ ಪ್ರಸಿದ್ಧವಾದ ಸ್ಥಳ.
68
ತಯಾರಿಕಾ ಶುಲ್ಕ, ವೇಸ್ಟೇಜ್ ಕಡಿಮೆ
ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಚಿನ್ನದ ಮೂಲ ಬೆಲೆ (Bullion Rate) ಭಾರತದಲ್ಲಿ ಹೆಚ್ಚುಕಡಿಮೆ ಒಂದೇ ರೀತಿ ಇರುತ್ತದೆ. ಆದರೆ, ಇಲ್ಲಿ ಆಭರಣಗಳ ತಯಾರಿಕಾ ಶುಲ್ಕ (Making Charges) ಮತ್ತು ವೇಸ್ಟೇಜ್ (Wastage), ರೀಟೇಲ್ ಶೋರೂಮ್‌ಗಳಿಗಿಂತ ಶೇ. 30 ರಿಂದ 50 ರಷ್ಟು ಕಡಿಮೆ ಇರುತ್ತದೆ. ಇದೇ ಕಾರಣಕ್ಕೆ ಇಲ್ಲಿ ಆಭರಣಗಳು ಅಗ್ಗವಾಗಿ ಸಿಗುತ್ತವೆ.
78
ಮುಂಬೈನ ಜವೇರಿ ಬಜಾರ್
ಭಾರತದಲ್ಲಿ ಪ್ರತಿದಿನದ ಚಿನ್ನದ ಹೋಲ್‌ಸೇಲ್ ಬೆಲೆಯನ್ನು ನಿರ್ಧರಿಸುವಲ್ಲಿ ಮುಂಬೈನ ಜವೇರಿ ಬಜಾರ್‌ನಲ್ಲಿರುವ IBJA (India Bullion and Jewellers Association) ಪ್ರಮುಖ ಪಾತ್ರ ವಹಿಸುತ್ತದೆ. ದೇಶದ ಬಹುತೇಕ ಜ್ಯುವೆಲ್ಲರಿ ಮಳಿಗೆಗಳು IBJA ನಿಗದಿಪಡಿಸಿದ ಬೆಲೆಯ ಆಧಾರದ ಮೇಲೆ ತಮ್ಮ ದೈನಂದಿನ ಮಾರಾಟ ದರವನ್ನು ನಿರ್ಧರಿಸುತ್ತವೆ.
88
ಹೋಲ್‌ಸೇಲ್ ಮಾರುಕಟ್ಟೆ
ಹೋಲ್‌ಸೇಲ್ ಮಾರುಕಟ್ಟೆಗಳಲ್ಲದೆ, ರೀಟೇಲ್ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸಲು IIJS (India International Jewellery Show) ನಂತಹ ಬೃಹತ್ B2B ಪ್ರದರ್ಶನಗಳು ಮುಂಬೈ ಮತ್ತು ನಮ್ಮ ಬೆಂಗಳೂರಿನಲ್ಲಿ ವಾರ್ಷಿಕವಾಗಿ ನಡೆಯುತ್ತವೆ. ಇಲ್ಲಿ ಪ್ರಪಂಚದಾದ್ಯಂತದ ಹೊಚ್ಚಹೊಸ ಡಿಸೈನ್‌ಗಳನ್ನು ಹೋಲ್‌ಸೇಲ್ ದರದಲ್ಲಿ ಪರಿಚಯಿಸಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.