ಕಾರು, ಬೈಕ್‌ ಆಕ್ಸಿಡೆಂಟ್‌ ಆಯ್ತಾ? ಇನ್ಶೂರೆನ್ಸ್ ಕ್ಲೈಮ್‌ ಮಾಡೋದು ಹೇಗೆ..

First Published | Nov 12, 2024, 12:59 PM IST

ವಾಹನಗಳಲ್ಲಿ ಓಡಾಡುವಾಗ ಯಾವ ಪರಿಸ್ಥಿತಿಗಳು ಬೇಕಾದರೂ ಎದುರಾಗಬಹುದು. ಸುಮ್ಮನೆ ಗಾಡಿಯನ್ನು ಒಂದು ಬದಿ ನಿಲ್ಲಿಸಿದ್ದರೂ ಆಕ್ಸಿಂಡೆಂಟ್‌ ಆಗಬಹುದು. ಆಕ್ಸಿಡೆಂಟ್‌ ಆದ ಬಳಿಕ ನಿಮ್ಮ ವಾಹನದ ಇನ್ಶುರೆನ್ಸ್‌ಅನ್ನು ಕ್ಲೇಮ್‌ ಮಾಡುವ ಪ್ರಕ್ರಿಯೆ ಹೇಗೆ ಅನ್ನೋದನ್ನ ತಿಳಿದುಕೊಳ್ಳಿ.

ಭಾರತದಲ್ಲಿ  ಕಾರು, ಬೈಕ್ ಓಡಿಸೋಕೆ ಇನ್ಶೂರೆನ್ಸ್ ಕಡ್ಡಾಯ. ಇದು ಅಕ್ಸಿಡೆಂಟ್ ನಿಂದ ರಕ್ಷಣೆ ಕೊಡುತ್ತೆ. ವೆಹಿಕಲ್ ನಲ್ಲಿ ಓಡಾಡುವಾಗ ನಿರೀಕ್ಷೆಯೇ ಮಾಡದೇ ಇರುವಂಥೆ  ಅಕ್ಸಿಡೆಂಟ್ ಆಗಬಹುದು. ಅಕ್ಸಿಡೆಂಟ್ ಆದ್ಮೇಲೆ ವೆಹಿಕಲ್ ಇನ್ಶೂರೆನ್ಸ್ ಕ್ಲೈಮ್ ಹೇಗೆ ಮಾಡೋದು ಅನ್ನೋದನ್ನ ತಿಳಿದುಕೊಳ್ಳೋಣ ಕಾರು, ಬೈಕ್ ಇನ್ಶೂರೆನ್ಸ್ ಕ್ಲೈಮ್ ಮಾಡೋ ಪ್ರಕ್ರಿಯೆ ತಿಳಿದುಕೊಳ್ಳುವುದು ವಾಹನದ ಮಾಲೀಕರಿಗೆ ಮುಖ್ಯ.

ಇನ್ಶೂರೆನ್ಸ್ ಕಂಪನಿಗೆ ಕಾಲ್ ಮಾಡಿ

ಸೂಕ್ತ ಪ್ರಮಾಣದ ಇನ್ಶುರೆನ್ಸ್‌ ಇದ್ದಲ್ಲಿ, ನಿಮ್ಮ ಕಾರ್‌-ಬೈಕ್‌ ಎಲ್ಲೇ ಆಕ್ಸಿಡೆಂಟ್‌ ಆದರೂ, ನಿಮ್ಮ ಇನ್ಶೂರೆನ್ಸ್ ಕಂಪನಿಗೆ ಕಾಲ್ ಮಾಡಿ. ವೆಹಿಕಲ್ ಓಡಿಸುವಾಗ ನಿಮ್ಮ ಕಾರ್ ಇನ್ಶೂರೆನ್ಸ್ ಕಂಪನಿ ನಂಬರ್ ಜೊತೆ ಇರಿಸಿಕೊಳ್ಳಿ. ಅಕ್ಸಿಡೆಂಟ್ ಆದ್ರೆ, ಮೊದಲು ಇನ್ಶೂರೆನ್ಸ್ ಕಂಪನಿಗೆ ಕಾಲ್ ಮಾಡಿ ಅಕ್ಸಿಡೆಂಟ್ ಬಗ್ಗೆ ಮಾಹಿತಿ ನೀಡಿ. ಯಾವುದೇ ಮಾಹಿತಿಯನ್ನೂ ಮುಚ್ಚಿಡಬೇಡಿ.

Latest Videos


FIR ಕಾಪಿ

ಪೊಲೀಸ್ ಸ್ಟೇಷನ್ ನಲ್ಲಿ FIR ರಿಜಿಸ್ಟರ್ ಮಾಡಿ. FIR ಅಂದ್ರೆ ಫಸ್ಟ್ ಇನ್ಫರ್ಮೇಷನ್ ರಿಪೋರ್ಟ್. ವೆಹಿಕಲ್ ಕಳ್ಳತನವಾಗಿದ್ದರೆ ಲೀಗಲ್ ಪ್ರೊಟೆಕ್ಷನ್ FIR ನಿಂದ ಸಿಗುತ್ತೆ. ಹತ್ತಿರದ ಪೊಲೀಸ್ ಸ್ಟೇಷನ್ ನಲ್ಲಿ FIR ರಿಜಿಸ್ಟರ್ ಮಾಡಿ FIR ಕಾಪಿ ತಗೊಳ್ಳಿ. ಅಕ್ಸಿಡೆಂಟ್ ನಲ್ಲಿ ಲೀಗಲ್ ಪ್ರಾಬ್ಲಮ್ ಇಲ್ಲ ಅಂದ್ರೆ ಎಫ್‌ಐಆರ್‌ ಅಗತ್ಯವಿರೋದಿಲ್ಲ.

ಅಕ್ಸಿಡೆಂಟ್ ಫೋಟೋ ತೆಗೆದುಕೊಳ್ಳಿ

ಅಕ್ಸಿಡೆಂಟ್ ಆದ ಜಾಗದ ಫೋಟೋ, ವಿಡಿಯೋ ತೆಗೆದುಕೊಳ್ಳಿ. ಇದು ಅಕ್ಸಿಡೆಂಟ್ ಆದ ಪ್ರೂಫ್ ಆಗಿ ಇನ್ಶೂರೆನ್ಸ್ ಕ್ಲೈಮ್ ಮಾಡೋಕೆ ಸಹಾಯ ಆಗುತ್ತೆ. ನಿಮ್ಮ ವೆಹಿಕಲ್ ಮತ್ತು ಅಕ್ಸಿಡೆಂಟ್ ಆದ ಜಾಗದ ಕ್ಲಿಯರ್ ಫೋಟೋ ತೆಗೆದುಕೊಳ್ಳಿ.

ಇನ್ಶೂರೆನ್ಸ್ ಕ್ಲೈಮ್ ಗೆ ಅಪ್ಲೈ ಮಾಡಿ

ಇನ್ಶೂರೆನ್ಸ್ ಕಂಪನಿ ವೆಬ್ಸೈಟ್ ಗೆ ಹೋಗಿ ಕ್ಲೈಮ್ ಪ್ರಕ್ರಿಯೆ ಶುರು ಮಾಡಿ. ಲಾಗಿನ್ ಆಗಿ, ಕ್ಲೈಮ್ ಪೇಜ್ ನಲ್ಲಿ ಡಾಕ್ಯುಮೆಂಟ್ಸ್ ಅಪ್ಲೋಡ್ ಮಾಡಿ. ಪಾಲಿಸಿ ಡೀಟೇಲ್ಸ್, ಡ್ರೈವಿಂಗ್ ಲೈಸೆನ್ಸ್, FIR ಕಾಪಿ, ವೆಹಿಕಲ್ RC ಅಪ್ಲೋಡ್ ಮಾಡಿ. ಕ್ಲೈಮ್ ಫಾರಂ ಫಿಲ್ ಮಾಡಿ ಸಬ್‌ಮಿಟ್‌ ಮಾಡಿ

ಇದನ್ನೂ ಓದಿ: ಡೊನಾಲ್ಡ್‌ ಟ್ರಂಪ್‌ ಗೆಲುವಿನ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಟ್ರಂಪ್‌ ಟವರ್‌!

ವೆಹಿಕಲ್ ಇನ್ಶೂರೆನ್ಸ್

ಅಕ್ಸಿಡೆಂಟ್ ಡ್ಯಾಮೇಜ್ ಚೆಕ್ ಮಾಡೋಕೆ ಆಫೀಸರ್ ಬರ್ತಾರೆ. ಹೆಚ್ಚಿನ ವೆಹಿಕಲ್ ಇನ್ಶೂರೆನ್ಸ್ ಕಂಪನಿಗಳು ಅಕ್ಸಿಡೆಂಟ್ ಜಾಗಕ್ಕೆ ಆಫೀಸರ್ ಕಳಿಸಿ ಕ್ಲೈಮ್ ಚೆಕ್ ಮಾಡ್ತಾರೆ. ಇನ್ಶೂರೆನ್ಸ್ ಕಂಪನಿ ರೂಲ್ಸ್ ಪ್ರಕಾರ ಇದು ಸ್ವಲ್ಪ ಟೈಮ್ ತಗೋಬಹುದು.

ಇದನ್ನೂ ಓದಿ: ಬರೀ 13 ಸಾವಿರ ಕಟ್ಟಿ, ಒಂದು ಚಾರ್ಜ್‌ಗೆ 200 ಕಿ.ಮೀ ಮೈಲೇಜ್‌ ನೀಡುವ ಸ್ಕೂಟರ್‌ ನಿಮ್ಮದಾಗಿಸಿಕೊಳ್ಳಿ!

ಇನ್ಶೂರೆನ್ಸ್

ಇನ್ಶೂರೆನ್ಸ್ ಕ್ಲೈಮ್ ಅಪ್ರೂವ್ ಆದ್ಮೇಲೆ ವೆಹಿಕಲ್ ರಿಪೇರಿ ಮಾಡಿಸಿಕೊಳ್ಳಬಹುದು. ನಿಮ್ಮ ಕಾರ್‌ನ ಸರ್ವೀಸ್‌ ಸ್ಟೇಷನ್‌ನಲ್ಲಿಯೇ ಇದರ ರಿಪೇರಿ ಮಾಡಿಕೊಳ್ಳಬಹುದು. ಅಥವಾ ಬೇರೆ ಗ್ಯಾರೇಜ್ ನಲ್ಲಿ ರಿಪೇರಿ ಮಾಡಿದಲ್ಲಿ ಇನ್ಶೂರೆನ್ಸ್ ಕಂಪನಿ ಇಂದ ಕ್ಲೈಮ್ ಮಾಡ್ಕೊಬಹುದು. ರಿಪೇರಿ ಬಿಲ್ ಕೊಡಬೇಕು.

click me!