ಹೆಚ್ಚಿನ ಆದಾಯ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಯೋಗಿಯ ಉತ್ತರ ಪ್ರದೇಶ ನಂ.1, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

Published : Sep 23, 2025, 11:14 AM IST

Revenue Surplus States CAG Report ಮಹಾಲೇಖಪಾಲರ (ಸಿಎಜಿ) 2022-23ರ ವರದಿಯ ಪ್ರಕಾರ, ದೇಶದ 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ. ಈ ಪಟ್ಟಿಯಲ್ಲಿ ಕರ್ನಾಟಕವು ₹13,496 ಕೋಟಿ ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ.

PREV
15

ಮಹಾಲೇಖಪಾಲರು (ಸಿಎಜಿ) ಇದೇ ಮೊದಲ ಬಾರಿಗೆ ರಾಜ್ಯಗಳ ಹಣಕಾಸು ಸ್ಥಿತಿಗತಿಯ ಕುರಿತು ವರದಿ ಬಿಡುಗಡೆ ಮಾಡಿದ್ದು, 2022-23ರ ಸಾಲಿನಲ್ಲಿ ದೇಶದ ಒಟ್ಟು 16 ರಾಜ್ಯಗಳು ತಮ್ಮ ವೆಚ್ಚಕ್ಕಿಂತ ಹೆಚ್ಚಿನ ಆದಾಯ ಗಳಿಸಿವೆ ಎಂದು ತಿಳಿಸಿದೆ. ಈ ಪೈಕಿ ಕರ್ನಾಟಕವು 13,496 ಕೋಟಿ ರೂ. ಹೆಚ್ಚುವರಿ ಆದಾಯದೊಂದಿಗೆ 5ನೇ ಸ್ಥಾನದಲ್ಲಿದೆ.

25

ಅಗ್ರಸ್ಥಾನದಲ್ಲಿ ಉತ್ತರ ಪ್ರದೇಶ: 37,000 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುವ ಮೂಲಕ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ (19,865 ಕೋಟಿ ರೂ.) ಮತ್ತು ಒಡಿಶಾ (19,456 ಕೋಟಿ ರೂ.) ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. 13,564 ಕೋಟಿ ರೂಪಾಯಿ ಆದಾಯದೊಂದಿಗೆ ಜಾರ್ಖಂಡ್‌ ನಾಲ್ಕನೇ ಸ್ಥಾನದಲ್ಲಿದೆ.

35

ಹೆಚ್ಚುವರಿ ಆದಾಯ ಗಳಿಸಿದ ಪ್ರಮುಖ ರಾಜ್ಯಗಳು: ಕರ್ನಾಟಕದ ನಂತರ ಛತ್ತೀಸ್‌ಗಢ (8,592 ಕೋಟಿ ರೂ), ತೆಲಂಗಾಣ (5,944 ಕೋಟಿ ರೂ.), ಉತ್ತರಾಖಂಡ (5310 ಕೋಟಿ ರೂ.), ಮಧ್ಯಪ್ರದೇಶ (4091 ಕೋಟಿ ರೂ.) ಮತ್ತು ಗೋವಾ (2,399 ಕೋಟಿ ರೂ.) ಸ್ಥಾನ ಪಡೆದಿವೆ. ಈ 16 ರಾಜ್ಯಗಳಲ್ಲಿ 10 ರಾಜ್ಯಗಳು ಬಿಜೆಪಿ ಆಡಳಿತದಲ್ಲಿವೆ.

45

ಹಿಂದುಳಿದ ರಾಜ್ಯಗಳ ಪ್ರಗತಿ: ಹಿಂದೆ 'ಬಿಮಾರು' ಎಂದು ಕರೆಯಲ್ಪಡುತ್ತಿದ್ದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಈ ಪಟ್ಟಿಯಲ್ಲಿ ಮೇಲಿದ್ದು, ಅವುಗಳ ಪ್ರಗತಿಯನ್ನು ವರದಿ ಎತ್ತಿ ತೋರಿಸಿದೆ.

55

ಆದಾಯ ಕೊರತೆ ಎದುರಿಸುತ್ತಿರುವ ರಾಜ್ಯಗಳು: ಕೈಗಾರಿಕಾ ಪ್ರಗತಿಯನ್ನು ಹೊಂದಿದ್ದರೂ ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 12 ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಪಂಜಾಬ್, ಕೇರಳ ಮತ್ತು ಬಿಹಾರದಂತಹ ರಾಜ್ಯಗಳು ಸೇರಿವೆ.

Read more Photos on
click me!

Recommended Stories