ಬುರ್ಜ್ ಖಲೀಫಾದಲ್ಲಿ ಮಹಡಿ ಹೊಂದಿದ್ದ ಕರಾವಳಿ ಉದ್ಯಮಿ, ಬಿಸಿನೆಸ್ ಲಾಸ್ ಆಗಿ ಸಂಸ್ಥೆ ಕೇವಲ 74 ರೂ.ಗೆ ಮಾರಾಟ!

Published : Oct 21, 2023, 05:13 PM ISTUpdated : Oct 21, 2023, 05:19 PM IST

ಕರಾವಳಿ ಮೂಲದ, ಮಾಜಿ ಬಿಲಿಯನೇರ್ ಉದ್ಯಮಿ ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿದ್ದರು. ಐಷಾರಾಮಿ ಕಾರುಗಳು, ಖಾಸಗಿ ಜೆಟ್‌ ಅಷ್ಟೇ ಯಾಕೆ ಬುರ್ಜ್ ಖಲೀಫಾದ ಮಹಡಿಗಳನ್ನು ಹೊಂದಿದ್ದ ಹಿರಿಮೆಯೂ ಅವರಿಗಿತ್ತು. ಆದರೆ ಬಿಸಿನೆಸ್‌ನಲ್ಲಾದ ದಿಢೀರ್ ನಷ್ಟದಿಂದ ತಮ್ಮ ಸಂಸ್ಥೆಯನ್ನು ಕೇವಲ 74 ರೂ.ಗೆ ಮಾರಾಟ ಮಾಡಿದರು.

PREV
110
ಬುರ್ಜ್ ಖಲೀಫಾದಲ್ಲಿ ಮಹಡಿ ಹೊಂದಿದ್ದ ಕರಾವಳಿ ಉದ್ಯಮಿ, ಬಿಸಿನೆಸ್ ಲಾಸ್ ಆಗಿ ಸಂಸ್ಥೆ ಕೇವಲ 74 ರೂ.ಗೆ ಮಾರಾಟ!

ಮಾಜಿ ಬಿಲಿಯನೇರ್ ಉದ್ಯಮಿ ಬಿ.ಆರ್ ಶೆಟ್ಟಿಯವರ ಬೃಹತ್ ಉದ್ಯಮದ ಏಕಾಏಕಿ ಕುಸಿತವು ಕಳೆದ ದಶಕದಲ್ಲಿ ಕಾರ್ಪೊರೇಟ್ ವಲಯದಲ್ಲಿ ಅತೀ ದೊಡ್ಡ ಫೈಲ್ಯೂರ್‌ಗಲ್ಲಿ ಒಂದಾಗಿದೆ. ಬಹುತೇಕ ಏನೂ ಇಲ್ಲದೆ ಬಿಸಿನೆಸ್ ಪ್ರಾರಂಭಿಸಿದ ಬಿ.ಆರ್ ಶೆಟ್ಟಿಯವರು ಕಠಿಣ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೆ ತಲುಪಿದ ವ್ಯಕ್ತಿ.

210

ಬಿ.ಆರ್ ಶೆಟ್ಟಿ ತಮ್ಮ ಯಶಸ್ವೀ ಉದ್ಯಮದಿಂದ ಬರೋಬ್ಬರಿ 18000 ಕೋಟಿ ರೂ.ಗಿಂತ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿದ್ದರು. ದುಬೈನಲ್ಲಿ ಐಷಾರಾಮಿ ವಿಲ್ಲಾಗಳು ಮತ್ತು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದರು. ಖಾಸಗಿ ಜೆಟ್‌ನ ಒಡೆತನವೂ ಇವರದ್ದಾಗಿತ್ತು. ಮಾತ್ರವಲ್ಲ, ರೋಲ್ಸ್ ರಾಯ್ಸ್ ಮತ್ತು ಮೇಬ್ಯಾಕ್‌ನಂತಹ ಹಲವಾರು ಐಷಾರಾಮಿ ಕಾರುಗಳನ್ನು ಸಹ ಹೊಂದಿದ್ದರು. 

310

ಬಿ.ಆರ್ ಶೆಟ್ಟಿಯವರ ಬೃಹತ್‌ ಉದ್ಯಮವು ಏಕಾಏಕಿ ಕುಸಿದು ಬಿತ್ತು. ಕೋಟಿಗಟ್ಟಲೆ ನಷ್ಟಕ್ಕೆ ಒಳಗಾಯತು. ತಮ್ಮ ಕಂಪನಿಯನ್ನು ಮಾರಾಟ ಮಾಡಬೇಕಾಗಿ ಬಂತು. ಸಂಕಷ್ಟದ ಸಮಯದಲ್ಲಿ ಬಿ.ಆರ್ ಶೆಟ್ಟಿ ತಮ್ಮ ಸಂಸ್ಥೆಯೊಂದನ್ನು ಕೇವಲ 2 ಬಿಲಿಯನ್ ಮೌಲ್ಯಕ್ಕೆ ಮಾರಾಟ ಮಾಡಿದರು. ಅಂದರೆ ಆ ಸಮಯದಲ್ಲಿ ಸುಮಾರು 74 ರೂ. ಗೆ ಮಾರಾಟ ಮಾಡಲಾಯಿತು.

410

ಬಿ.ಆರ್ ಶೆಟ್ಟಿ ಎಂಬ ಹೆಸರಿನ ಬಾವಗುತ್ತು ರಘುರಾಮ ಶೆಟ್ಟಿ ಕೇವಲ 8 ಡಾಲರ್‌ಗಳೊಂದಿಗೆ ಗಲ್ಫ್‌ಗೆ ಆಗಮಿಸಿದ್ದರು. ಅವರು UAEಯ ಅತಿದೊಡ್ಡ ಖಾಸಗಿ ಹೆಲ್ತ್‌ ಕೇರ್ ನಿರ್ಮಿಸಿದರು. ಇದರ ಯಶಸ್ಸು ಅವರನ್ನು ವಿಶ್ವದ ಶ್ರೀಮಂತ ಬಿಲಿಯನೇರ್‌ಗಳ ಪಟ್ಟಿಗೆ ಸೇರಿಸಿತು.

510

ಈ ಯಶಸ್ಸಿನ ಸಮಯದಲ್ಲೇ ಅವರು, ದುಬೈನ ಅತ್ಯುನ್ನತ ಹಿರಿಮೆ ಬುರ್ಜ್ ಖಲೀಫಾದಲ್ಲಿ ಎರಡು ಸಂಪೂರ್ಣ ಮಹಡಿಗಳನ್ನು ಹೊಂದಿದ್ದರು. ಬುರ್ಜ್ ಖಲೀಫಾದ ಈ ಮಹಡಿಗಳನ್ನು ಅವರು  25 ಮಿಲಿಯನ್‌ಗೆ ಸ್ವಾಧೀನಪಡಿಸಿಕೊಂಡರು. ಅ

610

ದ್ದೂರಿ ಪಾರ್ಟಿಗಳನ್ನು ಮಾಡಲು ಈ ಮಹಡಿಗಳನ್ನು ಬಳಸುತ್ತಿದ್ದರು. ಮಾತ್ರವಲ್ಲ ಬಿ.ಆರ್ ಶೆಟ್ಟಿ, ದುಬೈನ ವರ್ಲ್ಡ್ ಟ್ರೇಡ್ ಸೆಂಟರ್ ಮತ್ತು ಪಾಮ್ ಜುಮೇರಾದಲ್ಲಿ ಆಸ್ತಿಯನ್ನು ಹೊಂದಿದ್ದರು.

710

ಶೆಟ್ಟಿ ವೇಗದ ಕಾರುಗಳು ಮತ್ತು ವಿಂಟೇಜ್ ವಾಹನಗಳನ್ನು ಪ್ರೀತಿಸುತ್ತಿದ್ದರು. ಅವರ ಬಹು-ಕೋಟಿ ಗ್ಯಾರೇಜ್‌ನಲ್ಲಿ ಮೋರಿಸ್ ಮೈನರ್ 1000, ಸಿಲ್ವರ್ ಸ್ಪಿರಿಟ್ ಮತ್ತು ಫ್ಯಾಂಟಮ್ ಸೇರಿದಂತೆ ಏಳು ರೋಲ್ಸ್ ರಾಯ್ಸ್ ಐಷಾರಾಮಿ ಕಾರುಗಳಿದ್ದವು.

810

ಐಷಾರಾಮಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್-ಮೇಬ್ಯಾಕ್ M600  ಸಹ ಸೇರಿದೆ. 2014ರಲ್ಲಿ ಅವರು ಗಲ್ಫ್ ಬಿಲಿಯನೇರ್‌ನಿಂದ $4.2 ಮಿಲಿಯನ್‌ಗೆ ಸ್ವಾಧೀನಪಡಿಸಿಕೊಂಡ ಖಾಸಗಿ ಜೆಟ್ ವಿಮಾನದ 50 ಶೇಕಡಾ ಹಕ್ಕುಗಳನ್ನು ಸಹ ಹೊಂದಿದ್ದರು.

910

ಕಾರ್ಸನ್ ಬ್ಲಾಕ್ ಎಂಬ ಸಣ್ಣ ಮಾರಾಟಗಾರರಿಂದ ನಿರ್ವಹಿಸಲ್ಪಡುವ ಯುಕೆ ಮೂಲದ ಹೂಡಿಕೆ ಸಂಶೋಧನಾ ಸಂಸ್ಥೆ ಮಡ್ಡಿ ವಾಟರ್ಸ್‌ನ ಒಂದೇ ಟ್ವೀಟ್‌ನಿಂದಾಗಿ ಬಿ.ಆರ್ ಶೆಟ್ಟಿ, 2019ರಲ್ಲಿ ತೊಂದರೆಗೀಡಾದರು. ನಾಲ್ಕು ತಿಂಗಳ ನಂತರ, 'ಮಡ್ಡಿ ವಾಟರ್ಸ್' ಎನ್‌ಎಂಸಿ ಹೆಲ್ತ್‌ಗೆ ಸಂಬಂಧಿಸಿದ ವರದಿಯನ್ನು ಪ್ರಕಟಿಸಿತು. ಇದು BR ಶೆಟ್ಟಿ ತನ್ನ ಹಣಕಾಸು ಸಂಸ್ಥೆಯಾದ Finablr Plc ಸಂಸ್ಥೆಯ ಮೇಲೆ ಆರೋಪ ಹೊರಿಸಿತು.

1010

ಶೆಟ್ಟಿಯವರ  ಹೆಲ್ತ್ ಕೇರ್ ಸಂಸ್ಥೆಯ ಹಗರಣವು ಹೆಚ್ಚು ಸುದ್ದಿಯಾಯಿತು, NMC ಹೆಲ್ತ್ Plcನ್ನು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 10 ಶತಕೋಟಿಯ ಗರಿಷ್ಠ ಮೌಲ್ಯದ ನಷ್ಟಕ್ಕೆ ಒಳಗಾಯಿತು.

click me!

Recommended Stories