ಎಫ್‌ಡಿಯಲ್ಲಿ ಹಣ ಹೂಡಿಕೆ ಮಾಡಬೇಕಾ? ಈ 2 ಬ್ಯಾಂಕ್‌ನಲ್ಲಿದೆ ಹೆಚ್ಚು ಬಡ್ಡಿ ಪಡೆಯೋ ಅತ್ಯುತ್ತಮ ಅವಕಾಶ

First Published | Oct 21, 2023, 3:50 PM IST

ಭಾರತದಲ್ಲಿ ಎರಡು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಈ ವಿಶೇಷ ಎಫ್‌ಡಿ ಯೋಜನೆಗಳು ಹೆಚ್ಚಿನ ಬಡ್ಡಿ ದರ ನೀಡುತ್ತಿದೆ. ಈ ತಿಂಗಳವರೆಗೆ ಮಾತ್ರ ಆಫರ್‌ ಇದ್ದು, ಈ ಬಗ್ಗೆ ಇಲ್ಲಿದೆ ವಿವರ..

ನೀವು ಫಿಕ್ಸೆಡ್ ಡೆಪಾಸಿಟ್ (ಎಫ್‌ಡಿ) ಹೂಡಿಕೆಯನ್ನು ಪರಿಗಣಿಸುತ್ತಿದ್ದರೆ, ಇದೀಗ ಅತ್ಯುತ್ತಮ ಅವಕಾಶವನ್ನು ಪಡೆದುಕೊಳ್ಳುವ ಸಮಯ. ಭಾರತದಲ್ಲಿ ಎರಡು ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಈ ವಿಶೇಷ ಎಫ್‌ಡಿ ಯೋಜನೆಗಳು ಹೆಚ್ಚಿನ ಬಡ್ಡಿ ದರ ನೀಡುತ್ತಿದೆ. 

ಇಂಡಿಯನ್ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ನ ಈ ವಿಶೇಷ ಎಫ್‌ಡಿ ಯೋಜನೆಗಳು  ಅಕ್ಟೋಬರ್ 31 ರಂದು ಹೊಸ ಹೂಡಿಕೆಗಳಿಗೆ ಮುಕ್ತಾಯಗೊಳ್ಳಲಿವೆ. ನಿಯಮಿತ ಅವಧಿಗೆ ಹೋಲಿಸಿದರೆ ಹೆಚ್ಚು ಆಕರ್ಷಕ ಬಡ್ಡಿದರಗಳನ್ನು ಇದು ನೀಡುತ್ತದೆ. ಈ FD ಯೋಜನೆಗಳ ವಿವರಗಳನ್ನು ಪರಿಶೀಲಿಸೋಣ.

Tap to resize

IDBI ಬ್ಯಾಂಕ್ ವಿಶೇಷ FD ಯೋಜನೆ
IDBI ಬ್ಯಾಂಕ್ 375 ಮತ್ತು 444 ದಿನಗಳ ಅವಧಿಯೊಂದಿಗೆ ಎರಡು ಅನನ್ಯ FD ಯೋಜನೆಗಳನ್ನು ನೀಡುತ್ತಿದೆ, ಅಕ್ಟೋಬರ್ 31, 2023 ರವರೆಗೆ ಮಾತ್ರ ಇದು ಹೂಡಿಕೆಗೆ ಲಭ್ಯವಿದೆ. "ಅಮೃತ್ ಮಹೋತ್ಸವ FD ಸ್ಕೀಮ್" ಎಂದು ಕರೆಯಲ್ಪಡುವ 375-ದಿನಗಳ FD, ಸಾಮಾನ್ಯ ಜನತೆಗೆ ಶೇ 7.10 ಪ್ರತಿಶತ ಬಡ್ಡಿ ದರವನ್ನು ನೀಡುತ್ತದೆ. ಹಾಗೂ, ಹಿರಿಯ ನಾಗರಿಕರಿಗೆ ಶೇ 7.60. ಬಡ್ಡಿ ದರ ನೀಡುತ್ತಿದೆ.

ಇನ್ನೊಂದೆಡೆ, 444-ದಿನಗಳ FD ಯೋಜನೆಯಲ್ಲಿ, ಸಾಮಾನ್ಯ ಜನರು ಶೇಕಡಾ 7.15 ಬಡ್ಡಿದರವನ್ನು ಪಡೆಯಬಹುದು. ಜತೆಗೆ,  ಹಿರಿಯ ನಾಗರಿಕರಿಗೆ ಶೇಕಡಾ 7.65 ರಷ್ಟು ಬಡ್ಡಿದರ ನೀಡಲಾಗುತ್ತದೆ.

ಇಂಡಿಯನ್ ಬ್ಯಾಂಕಿನ ವಿಶೇಷ FD ಯೋಜನೆಗಳು
Ind ಸೂಪರ್ 400 ದಿನಗಳ FD ಯೋಜನೆ
"ಇಂಡ್ ಸೂಪರ್ 400 ಡೇಸ್ ಎಫ್‌ಡಿ ಸ್ಕೀಮ್" ಎಂದು ಕರೆಯಲ್ಪಡುವ ಇಂಡಿಯನ್ ಬ್ಯಾಂಕ್‌ನ ವಿಶೇಷ ಎಫ್‌ಡಿ ಯೋಜನೆಯು 400-ದಿನಗಳ ಅವಧಿಯನ್ನು ಹೊಂದಿದೆ. ನೀವು ಈ ಯೋಜನೆಯಲ್ಲಿ 10,000 ರೂಪಾಯಿಗಳಿಂದ 2 ಕೋಟಿ ರೂಪಾಯಿಗಳವರೆಗಿನ ಮೊತ್ತದೊಂದಿಗೆ ಹೂಡಿಕೆ ಮಾಡಬಹುದು.

ಈ ಅವಧಿಯಲ್ಲಿ ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 7.25 ಬಡ್ಡಿದರವನ್ನು ಮತ್ತು ಹಿರಿಯ ನಾಗರಿಕರಿಗೆ ಶೇಕಡಾ 7.75 ರ ಹೆಚ್ಚಿನ ದರವನ್ನು ನೀಡುತ್ತಿದೆ. ಹಾಗೂ, ಸೂಪರ್ ಹಿರಿಯ ನಾಗರಿಕರು ತಮ್ಮ ಠೇವಣಿಯ ಮೇಲೆ 8.00 ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು.

Ind ಸೂಪರ್ 300 ದಿನಗಳ FD ಯೋಜನೆ
400-ದಿನಗಳ FD ಯೋಜನೆ ಜೊತೆಗೆ, ಇಂಡಿಯನ್ ಬ್ಯಾಂಕ್ 300 - ದಿನಗಳ ಅವಧಿಯೊಂದಿಗೆ ವಿಶೇಷ FD ಯೋಜನೆಯನ್ನು ಪರಿಚಯಿಸಿದ್ದು ಜುಲೈ 1 ರಿಂದ ಜಾರಿಗೆ ಬಂದಿದೆ. ಹೂಡಿಕೆದಾರರು 5,000 ರೂ. ನಿಂದ 2 ಕೋಟಿ ರೂ. ವರೆಗಿನ ಮೊತ್ತವನ್ನು ಠೇವಣಿ ಮಾಡಬಹುದು. ಈ FD ಯೋಜನೆಯು ಸಾಮಾನ್ಯ ಗ್ರಾಹಕರಿಗೆ ಆಕರ್ಷಕವಾದ 7.05 ಬಡ್ಡಿದರವನ್ನು ನೀಡುತ್ತದೆ.
 

ಹಾಗೂ, ಹಿರಿಯ ನಾಗರಿಕರು ಶೇಕಡಾ 7.55 ಬಡ್ಡಿ ದರ ಪಡೆಯುತ್ತಾರೆ. ಸೂಪರ್ ಹಿರಿಯ ನಾಗರಿಕರು ಗಣನೀಯ ಶೇಕಡಾ 7.80 ಬಡ್ಡಿ ದರವನ್ನು ಪಡೆಯಬಹುದು. ಈ ಯೋಜನೆಯು ಅಕ್ಟೋಬರ್ 31, 2023 ರವರೆಗೆ ಹೂಡಿಕೆಗೆ ಮುಕ್ತವಾಗಿರುತ್ತದೆ ಎಂದು ತಿಳಿದುಬಂದಿದೆ. 

Latest Videos

click me!