ಈ ಯೋಜನೆಯ ಪ್ರಕಾರ ಪ್ರತಿದಿನ 3GB ಡೇಟಾ ಸಿಗುತ್ತದೆ. ಜೊತೆಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯವೂ ಲಭ್ಯವಿದೆ. ಇದಲ್ಲದೆ ಪ್ರತಿದಿನ 100 ಉಚಿತ SMS ಸೌಲಭ್ಯವನ್ನೂ ಪಡೆಯಬಹುದು. ಈ ಯೋಜನೆಯಲ್ಲಿ 3GB ಡೇಟಾ ಮುಗಿದರೂ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ ದೈನಂದಿನ ಡೇಟಾ ಮುಗಿದರೂ 40Kbps ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾ ಸೇವೆಯನ್ನು ಪಡೆಯಬಹುದು.
ಈ 2,999 ರೂ. ಯೋಜನೆಯ ಪ್ರಮುಖ ಅಂಶವೆಂದರೆ ಇದು ಕಡಿಮೆ ಬೆಲೆಯದ್ದಾಗಿದೆ. ಇದೇ ರೀತಿಯ ಒಂದು ವರ್ಷದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು 3,500 ರೂ.ಗಿಂತ ಹೆಚ್ಚು ಶುಲ್ಕ ವಿಧಿಸುತ್ತಿವೆ.