ಯಾವುದೇ ವಸ್ತು ಮಾರಿದರೂ ಕೊಳ್ಳುವವರ ಮನಸ್ಸು ಗೆಲ್ಲಬೇಕು. ಆಗ ಮಾತ್ರ ಒಳ್ಳೆಯ ಬೆಲೆ ಸಿಗುತ್ತದೆ. ಹಳೆ ಮನೆ ಮಾರುವುದಕ್ಕೆ ಈ ಸಲಹೆಗಳು ಉಪಯುಕ್ತ.
ಮೊದಲ ನೋಟದಲ್ಲೇ ಆಕರ್ಷಿಸುವಂತೆ:
ಹಳೆ ಮನೆ ಮಾರಾಟಕ್ಕೆ ಇಟ್ಟಾಗ, ಯಾವುದೇ ಕೊಳ್ಳುವವರು ಮೊದಲು ಮನೆಯ ಹೊರಭಾಗವನ್ನು ನೋಡುತ್ತಾರೆ. ಅಂಗಳವನ್ನು ಸ್ವಚ್ಛವಾಗಿಡುವುದು, ಹೊಸ ಬಣ್ಣ, ಸುಂದರವಾದ ಗಿಡಮರಗಳು ಮನೆಯನ್ನು ಆಕರ್ಷಕವಾಗಿಸುತ್ತವೆ.
ಅಲ್ಲದೆ, ಪೈಪ್‌ಗಳು, ವಿದ್ಯುತ್, ಕಿಟಕಿಗಳು, ಬಾಗಿಲುಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇದು ಕೊಳ್ಳುವವರಿಗೆ ಮನೆಯ ಗುಣಮಟ್ಟದ ಬಗ್ಗೆ ವಿಶ್ವಾಸ ಮೂಡಿಸುತ್ತದೆ.
ಆಧುನೀಕರಣ:
ಅಡುಗೆಮನೆ, ಸ್ನಾನಗೃಹದಂತಹ ಪ್ರಮುಖ ಸ್ಥಳಗಳನ್ನು ಆಧುನಿಕವಾಗಿ ಮಾರ್ಪಡಿಸುವುದರಿಂದ ಕೊಳ್ಳುವವರು ಆಕರ್ಷಿತರಾಗುತ್ತಾರೆ. ಹೊಸ ಟೈಲ್ಸ್, ಲೈಟಿಂಗ್ ಅಥವಾ ಸಾಮಗ್ರಿಗಳು ಮನೆಯ ಮೌಲ್ಯವನ್ನು ಹೆಚ್ಚಿಸುತ್ತವೆ.