ಮಾಜಿ ಮಿಸ್ ಇಂಡಿಯಾ ಆದಿತಿ ಆರ್ಯಾ ವಿವಾಹವಾಗಿದ್ದಾರೆ. ಬಿಲಿಯನೇರ್ ಉದ್ಯಮಿ ಉದಯ್ ಕೋಟಕ್ ಅವರ ಪುತ್ರ ಜಯ್ ಕೋಟಕ್ ಅವರನ್ನು ವರಿಸಿದ್ದಾರೆ.
ವಿವಾಹ ಸಮಾರಂಭ ಮಂಗಳವಾರ ಮುಂಬೈನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ನಡೆದಿದೆ. ಈ ವೇಳೆ ಉದ್ಯಮ ಕ್ಷೇತ್ರದ ಸಾಕಷ್ಟು ಗಣ್ಯರು ಹಾಜರಿದ್ದರು.
ವಿವಾಹ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಭಾಗವಹಿಸಿದ್ದನ್ನು ಕೂಡ ವಿಡಿಯೋದಲ್ಲಿ ಹಂಚಿಕೊಳ್ಳಲಾಗಿದೆ.
ಆದಿತಿ ಆರ್ಯಾ, 2015 ರಲ್ಲಿ ಮಿಸ್ ಇಂಡಿಯಾ ಕಿರೀಟವನ್ನು ಗೆದ್ದಿದ್ದು ಮಾತ್ರವಲ್ಲದೆ, ವಿಶ್ವ ಸುಂದರಿ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
30 ವರ್ಷದ ಆದಿತಿ ಆರ್ಯಾ ಅವರೊಂದಿಗೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಸುದ್ದಿಯನ್ನೂ ಸಹ ಜಯ್ ಕೋಟಕ್ ಅವರೇ ಟ್ವಿಟರ್‌ನಲ್ಲಿ ತಿಳಿಸಿದ್ದರು.
ಯೇಲ್ ವಿಶ್ವವಿದ್ಯಾಲಯದಿಂದ ನವದೆಹಲಿ ಮೂಲದ ಆದಿತಿ ಆರ್ಯಾ ಪದವಿ ಪಡೆದುಕೊಂಡ ಬೆನ್ನಲ್ಲಿಯೇ ಇಬ್ಬರೂ ಜೊತೆಯಲ್ಲಿದ್ದ ಫೋಟೋವನ್ನು ಹಂಚಿಕೊಂಡಿದ್ದ ಜಯ್ ಕೋಟಕ್ ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನೂ ತಿಳಿಸಿದ್ದರು.
ಇನ್ನು ಮದುವೆಯ ವಿಚಾರ ಕೂಡ ಹೆಚ್ಚಾಗಿ ಗೌಪ್ತವಾಗಿಯೇ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಜಯ್ ಕೋಟಕ್ ಫೋಟೋ ಹಂಚಿಕೊಂಡ ಬಳಿಕವೇ ಮದುವೆಯ ಬಗ್ಗೆ ಮಾಹಿತಿ ಸಿಕ್ಕಿದೆ.
ಮದುವೆಯಲ್ಲಿ ಜಯ್ ಕೋಟಕ್ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದರೆ, ಆದಿತಿ ಆರ್ಯಾ ಕೆಂಪು ಬಣ್ಣದ ಲೆಹೆಂಗಾವನ್ನು ಧರಿಸಿದ್ದರು.
ಜಯ್ ಕೋಟಕ್ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರು ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ತಮ್ಮ ಪದವಿಗಳನ್ನು ಪಡೆದುಕೊಂಡಿದ್ದಾರೆ.
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ MBA ಪದವಿ ಪಡೆದಿರುವ ಜಯ್, ಪ್ರಸ್ತುತ, ಕೋಟಕ್ 811 ನ ಉಪಾಧ್ಯಕ್ಷರಾಗಿದ್ದಾರೆ, ಇದು ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಡಿಜಿಟಲ್ ಬೈಲ್ ಬ್ಯಾಂಕ್ ಆಗಿದೆ.
ಅದಿತಿ ಆರ್ಯ ದೆಹಲಿ ವಿಶ್ವವಿದ್ಯಾನಿಲಯದ ಶಯೀದ್ ಸುಖದೇವ್ ಕಾಲೇಜಿನಲ್ಲಿ ಪದವಿ ಪಡೆದರು ಮತ್ತು ಅರ್ನ್ಸ್ಟ್ ಮತ್ತು ಯಂಗ್ ನಲ್ಲಿ ಸಂಶೋಧನಾ ವಿಶ್ಲೇಷಕರಾಗಿ ಸಂಕ್ಷಿಪ್ತವಾಗಿ ಕೆಲಸ ಮಾಡಿದ್ದರು.
Aditi Arya
ಆದಿತಿ ಆರ್ಯ ಅವರು ರಣವೀರ್ ಸಿಂಗ್ ಅಭಿನಯದ '83' ಸೇರಿದಂತೆ ಕೆಲವು ಹಿಂದಿ ಮತ್ತು ತೆಲುಗು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
2015ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿ ಪುರಸ್ಕೃತೆಯಾಗಿದ್ದ ಆದಿತಿ ಆರ್ಯಾ ಮರು ವರ್ಷವೇ ತೆಲುಗು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಕುಮಾರ್ ಅವರಿಗೆ ಹೀರೋಯಿನ್ ಆಗಿ ಆದಿತಿ ನಟಿಸಿದ್ದರು.
Aditi Arya
ನಂತರ ಎಂಬಿಎ ವ್ಯಾಸಂಗ ಮಾಡಲು ಅಮೆರಿಕಕ್ಕೆ ತೆರಳಿದ್ದ ಆದಿತಿ ಆರ್ಯಾ ಅವರು ಈ ವರ್ಷದ ಮೇ ತಿಂಗಳಲ್ಲಿ ಎಂಬಿಎ ಪದವಿ ಪಡೆದರು.
Aditi Arya
2021ರಲ್ಲಿ ಇವರು ನಟಿಸಲು ಸಹಿ ಹಾಕಿದ್ದ ಕನ್ನಡ ಚಿತ್ರ ತ್ರಿಶೂಲಮ್ ಅರ್ಧ ಚಿತ್ರೀಕರಣ ನಡೆಸಿ ನಿಂತು ಹೋಗಿದೆ. ಪ್ರಸ್ತುತ ಆದಿತಿ ಸಿನಿಮಾ ರಂಗದಿಂದ ದೂರವುಳಿದಿದ್ದಾರೆ.