ATMನಿಂದ 10 ಸಾವಿರ ತೆಗೆಯಲು ಹೋಗಿ 3 ಲಕ್ಷ ರೂ ಪಡೆದ ಗ್ರಾಹಕ, ದಿಕ್ಕು ತೋಚದೆ ಕುಳಿತ ಬ್ಯಾಂಕ್

Published : Mar 20, 2026, 12:40 PM IST

ATMನಿಂದ 10 ಸಾವಿರ ತೆಗೆಯಲು ಹೋಗಿ 3 ಲಕ್ಷ ರೂ ಪಡೆದ ಗ್ರಾಹಕ, ದಿಕ್ಕು ತೋಚದೆ ಕುಳಿತ ಬ್ಯಾಂಕ್, ಎಟಿಎಂ ಮೂಲಕ ನಡೆದ ಅತೀ ದೊಡ್ಡ ಮಿಸ್ಟೇಕ್ ಇದು. ಇತ್ತ ಬ್ಯಾಂಕ್ ಏನೂ ಮಾಡಲು ಸಾಧ್ಯವಾಗದೇ ತಲೆ ಮೇಲೆ ಕೈಹೊತ್ತು ಕುಳಿತಿದೆ. 

PREV
16
ಎಟಿಎಂನಿಂದ 10,000 ರೂ ಪಡೆಯಲು ಹೋದ ವ್ಯಕ್ತಿ

ಗುಜರಾತ್‌ನ ಸೂರತ್‌ನ ವ್ಯಕ್ತಿಯೊಬ್ಬರು ಎಟಿಎಂನಿಂದ ನಗದು ಹಣ ಪಡೆಯಲು ತೆರಳಿದ್ದಾರೆ. ಸಾಮಾನ್ಯವಾಗಿ ಎಟಿಎಂ ನೀಡುವ ಹಣ ಎಷ್ಟು ಬಾರಿ ಲೆಕ್ಕ ಹಾಕಿದರೂ ಒಂದು ನೋಟು ಹೆಚ್ಚಿಗೆ ಇರುವುದಿಲ್ಲ. ಹಲವರು ಕೆಲ ತಾಂತ್ರಿಕ ಸಮಸ್ಯೆ ಎದುರಿಸಿದ ಉದಾಹರಣೆಗಳಿವೆ. ಹಣ ಬರಲಿಲ್ಲ ಹೀಗೆ ಹಲವು ದೂರುಗಳಿವೆ. ಇದೀಗ ಗುಜರಾತ್ ವ್ಯಕ್ತಿ 10,000 ರೂಪಾಯಿ ತೆಗೆಯಲು ಹೋಗಿ 3 ಲಕ್ಷ ರೂಪಾ ಪಡೆದ ರೋಚಕ ಘಟನೆ ಇಲ್ಲಿದೆ.

26
ಏನಿದು ಘಟನೆ, 3 ಲಕ್ಷ ರೂ ಪಡೆದಿದ್ದು ಹೇಗೆ?

ಸೂರತ್‌ನ ಉಧಾನಾ ನಿವಾಸಿ ಇದೀಗ 3,28,800 ರೂಪಾಯಿ ಪಡೆದಿದ್ದಾರೆ. ಇದು ಹಲವರ ಅಚ್ಚರಿಗೆ ಕಾರಣವಾಗಿದೆ. ಹಾಗಂತ ಈತನಿಗೆ ಎಟಿಎಂ ಇಷ್ಟು ಹಣ ನೀಡಿಲ್ಲ. ಬದಲಾಗಿ ಬ್ಯಾಂಕ್ ಈತನಿಗೆ ನಾಲ್ಕು ಬಾರಿ ಎಣಿಸಿ ಎಣಿಸಿ ಈ ಹಣ ನೀಡಿದೆ. ಈತ ಹಣ ಪಡೆದಿದ್ದು ಈಗ, ಆದರೆ ಹಣ ತೆಗೆಯಲು ಹೋಗಿದ್ದು 2017ರಲ್ಲಿ. ಎಟಿಎಂ ಮಶಿನ್‌ನಲ್ಲಿ ಕಾರ್ಡ್ ಹಾಕಿ 10,000 ನಮೂದಿಸಿದ ಬಳಿಕ ಹಣ ಬರಲೇ ಇಲ್ಲ. ಆದರೆ 10 ಸಾವಿರ ಕಡಿತವಾಗಿದೆ ಎಂದು ಮೆಸೇಜ್ ಬಂದಿದೆ.

36
9 ವರ್ಷಗಳ ಸತತ ಹೋರಾಟ

ಬ್ಯಾಂಕ್ ಆಫ್ ಬರೋಡ ಗ್ರಾಹಕ, ಎಸ್‌ಬಿಐ ಎಟಿಂನಲ್ಲಿ ಹಣ ಪಡೆಯು ಪ್ರಯತ್ನ ಮಾಡಿ ವಿಫಲವಾಗಿದೆ. ಬಳಿಕ ಬರೋಡ ಬ್ಯಾಂಕ್‌ನಲ್ಲಿ ದೂರು ನೀಡಿದ್ದಾನೆ. ಲಿಖಿತ ದೂರಿನ ಬಳಿಕ ಇಮೇಲ್ ಮೂಲಕ ಬರೋಡಾ ಬ್ಯಾಂಕ್ ಅಧಿಕಾರಿಗಳಲ್ಲಿ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಆರ್‌ಬಿಐ ಕಚೇರಿ ಸಂಪರ್ಕಿಸಿದರೂ ನೆರವು ಸಿಗಲಿಲ್ಲ. ಕೊನೆಗೆ ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.

46
ವಿಚಾರಣೆಯಲ್ಲ ಹೊಸ ವಾದ ಮಂಡಿಸಿದ ಬರೋಡಾ

ವಿಚಾರಣೆ ವೇಳೆ ಗ್ರಾಹಕ ಎಸ್‌ಬಿಐ ಎಟಿಂ ಬಳಸಿದ್ದಾರೆ. ನಮ್ಮ ದಾಖಲೆ ಸರಿಯಾಗಿದೆ. ಅದು ಎಸ್‌ಬಿಐ ಎಟಿಎಂ ಸಮಸ್ಯೆ ಎಂದು ವಾದ ಮಂಡಿಸಿದೆ. ಆದರೆ ಈ ವಾದವನ್ನು ಗ್ರಾಹಕರ ನ್ಯಾಯಾಲಯ ತಳ್ಳಿಹಾಕಿದೆ. ಸರಿಯಾದ ದಾಖಲೆ ನೀಡಿ ಮಾತನಾಡಿ, ಒಂದು ವೇಳೆ ಹಣ ಸಿಗದಿದ್ರೆ ಆರ್‌ಬಿಐ ನಿಯಮದ ಪ್ರಕಾರ 5 ದಿನದಲ್ಲಿ ರೀಫಂಡ್ ಮಾಡಬೇಕಿತ್ತು. ಆದರೆ ಬ್ಯಾಂಕ್ 9 ವರ್ಷವಾದರೂ ಮಾಡಿಲ್ಲ ಎಂದು ಗರಂ ಆಗಿದೆ.

56
ದಂಡ ಜೊತೆ ಒಟ್ಟು 3.28 ಲಕ್ಷ ರೂ

ಗ್ರಾಹಕರ ವೇದಿಕೆ ನ್ಯಾಯಲ ಗ್ರಾಹಕನಿಗೆ 10,000 ರೂಪಾಯಿಗೆ ಪ್ರತಿ ವರ್ಷ ವಾರ್ಷಿಕ 9 ರೂಪಾಯಿ ಬಡ್ಡಿ ಹಾಗೂ ವಿಳಂಬ ಮಾಡಿದ್ದಕ್ಕೆ ಪ್ರತಿ ದಿನ 100 ರೂಪಾಯಂತೆ ಪರಿಹಾರ ನೀಡಲು ಸೂಚಿಸಿದೆ. ಇದರಂತೆ ಒಟ್ಟು 3288 ದಿನ , ಬಡ್ಡಿ ಸೇರಿ 3,28,800 ರೂಪಾಯಿ ಹಣವನ್ನು ಗ್ರಾಹಕನಿಗೆ ನೀಡಲು ಬರೋಡ್ ಬ್ಯಾಂಕ್ ಒಪ್ಪಿಕೊಂಡಿದೆ.

66
ಮಾನಸಿಕ ಕಿರುಕಳ, ಕಾನೂನು ಹೋರಾಟದ ವೆಚ್ಚ

ಇಷ್ಟಕ್ಕೆ ಈ ಪ್ರಕರಣ ಮುಗಿದಿಲ್ಲ. ಗ್ರಾಹಕನಿಗೆ ಮಾನಸಿಕ ಕಿರುಕುಳ ನೀಡಿದ್ದಕ್ಕೆ 3000 ರೂಪಾಯಿ ಹಾಗೂ ಕಾನೂನು ಹೋರಾಟಕ್ಕೆ 2000 ರೂಪಾಯಿ ಪರಿಹಾರ ನೀಡಲು ಸೂಚಿಸಿದೆ. ಈ ಪ್ರಕರಣದಿಂದ ಬ್ಯಾಂಕ್ ಆಫರ್ ಬರೋಡ ಕಂಗಾಲಾಗಿದೆ.

ಮಾನಸಿಕ ಕಿರುಕಳ, ಕಾನೂನು ಹೋರಾಟದ ವೆಚ್ಚ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories