ದಿವಾಳಿಯಾಗಿರೋ ಅನಿಲ್ ಅಂಬಾನಿ ಮಕ್ಕಳು ಉದ್ಯಮದಲ್ಲಿ ಸಕ್ಸಸ್ ಆಗಲು ಏನ್ ಮಾಡ್ತಿದ್ದಾರೆ?

First Published | Apr 7, 2024, 4:59 PM IST

ಮುಕೇಶ್ ಅಂಬಾನಿ ಪ್ರಸ್ತುತ ಭಾರತದ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಆದರೆ 2020ರಲ್ಲಿ, ಮುಕೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ, ಯುಕೆ ನ್ಯಾಯಾಲಯದ ಮುಂದೆ ದಿವಾಳಿ ಎಂದು ಘೋಷಿಸಲ್ಪಟ್ಟರು. ಕೋಟ್ಯಾಂತರ ರೂ. ನಷ್ಟಗಳಿಂದ ಸಂಕಷ್ಟದಲ್ಲಿರೋ ಮುಕೇಶ್ ಅಂಬಾನಿ ಮಕ್ಕಳು ಸಕ್ಸಸ್ ಆಗೋಕೆ ಏನ್ ಮಾಡ್ತಿದ್ದಾರೆ?

ಫೋಬ್ಸ್ ಪ್ರಕಾರ, ಮುಕೇಶ್ ಅಂಬಾನಿ ಪ್ರಸ್ತುತ ಭಾರತದ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದಾದ್ಯಂತ ಹನ್ನೊಂದನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. ಆದರೆ, ಫೆಬ್ರವರಿ 2020ರಲ್ಲಿ, ಮುಕೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ, ಯುಕೆ ನ್ಯಾಯಾಲಯದ ಮುಂದೆ ದಿವಾಳಿ ಎಂದು ಘೋಷಿಸಲ್ಪಟ್ಟರು. 

ಅನಿಲ್ ಅಂಬಾನಿಯವರ ಪುತ್ರ ಜೈ ಅನ್ಮೋಲ್ ಸದ್ಯ ಅನಿಲ್ ಅಂಬಾನಿ ಕುಟುಂಬದ ವ್ಯವಹಾರವನ್ನು ಲಾಭದತ್ತ ಕೊಂಡೊಯ್ಯುತ್ತಿದ್ದಾರೆ. ಅನಿಲ್ ಅಂಬಾನಿ ಈ ಹಿಂದೆ ಸುಮಾರು 1.83 ಲಕ್ಷ ಕೋಟಿ ರೂಪಾಯಿಗಳೊಂದಿಗೆ ವಿಶ್ವದ ಆರನೇ ಅತಿ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದರು. ಮಗ ಅನ್ಮೋಲ್ ಅಂಬಾನಿ ಹುಟ್ಟಿನಿಂದಲೇ ಅವರು ಇನ್ನಷ್ಟು ಶ್ರೀಮಂತರಾಗಿದ್ದರು. 

Tap to resize

ಅನ್ಮೋಲ್ ಅಂಬಾನಿ ಮುಂಬೈನ ಜಾನ್ ಕಾನನ್ ಮತ್ತು ಕ್ಯಾಥೆಡ್ರಲ್ ಶಾಲೆಗಳಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಯುಕೆಯ ಸೆವೆನ್ ಓಕ್ಸ್ ಶಾಲೆಗೆ ಸೇರಿಕೊಂಡರು. ಅನ್ಮೋಲ್ ಅಂಬಾನಿ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. 

ಅನ್ಮೋಲ್ ಅಂಬಾನಿ ಶ್ರೀಮಂತ ಕುಟುಂಬದಿಂದ ಬಂದಿದ್ದರೂ ಪರಿಶ್ರಮ, ದೃಢತೆ ಮತ್ತು ಶ್ರೇಷ್ಠತೆಯ ಸಮರ್ಪಣೆಯೊಂದಿಗೆ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕುಟುಂಬದ ವ್ಯವಹಾರಕ್ಕೆ ಸೇರಿಕೊಂಡರು.

ಅನ್ಮೋಲ್ ಅಂಬಾನಿ ನಾಯಕತ್ವಕ್ಕೆ ಏರಿದ ನಂತರ ರಿಲಯನ್ಸ್ ಸಮೂಹದ ಷೇರುಗಳ ಬೆಲೆಗಳು 40% ರಷ್ಟು ಏರಿಕೆ ಕಂಡವು. ಪ್ರಸ್ತುತ ಅನ್ಮೋಲ್ ಅಂಬಾನಿ, 2000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಅನಿಲ್ ಅಂಬಾನಿಯವರ ಹೆಚ್ಚುತ್ತಿರುವ ಆರ್ಥಿಕ ತೊಂದರೆಯನ್ನು ನಿವಾರಿಸಲು ಅನ್ಮೋಲ್ ಅಂಬಾನಿ  ಎಲ್ಲಾ ಪ್ರಯತ್ನ ಮಾಡಿದ್ದಾರೆ. ಜಪಾನಿನ ಬೃಹತ್ ಕಂಪನಿಯಾದ ನಿಪ್ಪಾನ್‌ಗೆ ರಿಲಯನ್ಸ್‌ನಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಮನವೊಲಿಸುವಲ್ಲಿ ಯುವ ಉದ್ಯಮಿ ಯಶಸ್ವಿಯಾದರು. 

ಹೆಚ್ಚುವರಿಯಾಗಿ, ಇದು ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್ಮೆಂಟ್ ಮತ್ತು ರಿಲಯನ್ಸ್ ಲೈಫ್ ಇನ್ಶುರೆನ್ಸ್ ಸ್ಥಾಪನೆಗೆ ನೆರವಾಯಿತು. ಮುಕೇಶ್ ಅಂಬಾನಿಯವರ ಸೋದರಳಿಯ ಮತ್ತು ಅನಿಲ್ ಅಂಬಾನಿಯವರ ಮಗ ಅದ್ದೂರಿ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. 

ರೋಲ್ಸ್ ರಾಯ್ಸ್ ಫ್ಯಾಂಟಮ್ ಮತ್ತು ಲಂಬೋರ್ಘಿನಿ ಗಲ್ಲಾರ್ಡೊ ಸೇರಿದಂತೆ ಹಲವಾರು ಹೆಚ್ಚು ಬೇಡಿಕೆಯಿರುವ ಮತ್ತು ದುಬಾರಿ ವಾಹನಗಳ ಮಾಲೀಕರಾಗಿದ್ದಾರೆ. ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊಂದಿದ್ದಾರೆ.

Latest Videos

click me!