ಅಧಿಕಾರದಾಸೆಯಿಂದ ಮುಕ್ತ: ವಿದೇಶಿ ವಿಶ್ವವಿದ್ಯಾಯಲದಲ್ಲಿ ವ್ಯಾಸಂಗ ಮಾಡಿದ್ದ ರತನ್ ಟಾಟಾ, ಐಬಿಎಂನಿಂದ ಬಂದಿದ್ದ ಉದ್ಯೋಗಾವಕಾಶವನ್ನು ತಿರಸ್ಕರಿಸಿದ್ದರು. ತದನಂತರ ಟೆಲ್ಕೋ(ಇಂದಿನ ಟಾಟಾ ಮೋಟಾರ್ಸ್)ದಲ್ಲಿ ಸುಣ್ಣದ ಕಲ್ಲುಗಳಿಗೆ ಸಲಿಕೆ ಹಾಕುವ ಹಾಗೂ ಕುಲುಮೆಗಳನ್ನು ಸ್ಫೋಟಿಸುವ ಕೆಲಸವನ್ನು ಕೈಗೆತ್ತಿಕೊಂಡರು. ಈ ಸಂದರ್ಭದಲ್ಲಿ ಟಾಟಾ ಸಮೂಹದ ವಿವಿಧ ಕಂಪನಿಗಳಲ್ಲಿ ದುಡಿದ ಅವರು, ಸಾಮಾನ್ಯ ಜನರ ಜೀವನವನ್ನು, ಅವರು ಅನುಭವಿಸುವ ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿದರು. ಕ್ರಮೇಣ ಟಾಟಾ ಸಮೂಹದ ನಿರ್ದೇಶಕ ಹುದ್ದೆಯತ್ತ ಹೆಜ್ಜೆ ಹಾಕಿದರು. ಅಷ್ಟಾದರೂ ಪರಿಶ್ರಮ, ಬದ್ಧತೆ, ಸಮರ್ಪಣಾ ಗುಣಗಳನ್ನು ಅವರು ಮರೆಯಲಿಲ್ಲ.