ಮುಕೇಶ್ ಅಂಬಾನಿ ತಮ್ಮ ಸಂಪತ್ತಿಗೆ ಪ್ರಸಿದ್ಧರಾಗಿದ್ದಾರೆ. ಮುಖೇಶ್ ಅಂಬಾನಿ ಭಾರತದಲ್ಲಿ ಮಾತ್ರವಲ್ಲದೆ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಅವರು ವಿಶ್ವದ ಅಗ್ರ ಶ್ರೀಮಂತ ವ್ಯಕ್ತಿಗಳಲ್ಲಿ ಕೂಡ ಪರಿಗಣಿಸಲ್ಪಟ್ಟಿದ್ದಾರೆ.
ಮುಖೇಶ್ ಅಂಬಾನಿ ಅವರ ಸಂಪತ್ತಿನ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರ ಮೂವರು ಮಕ್ಕಳಾದ ಮಗಳು ಇಶಾ ಅಂಬಾನಿ ಮತ್ತು ಇಬ್ಬರು ಪುತ್ರರಾದ ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಕೂಡ ತುಂಬಾ ಶ್ರೀಮಂತರಾಗಿದ್ದಾರೆ.
ಮುಕೇಶ್ ಮತ್ತು ನೀತಾ ಅಂಬಾನಿ ಅವರ ಮೂವರೂ ಮಕ್ಕಳ ಬಳಿ ಅಪಾರ ಸಂಪತ್ತು ಇದೆ. ಮೂವರು ಅಂಬಾನಿ ಮಕ್ಕಳಲ್ಲಿ ಯಾರು ಶ್ರೀಮಂತರು ಎಂದು ತಿಳಿಯೋಣ. ಮೂವರೂ ಈಗ ಯಾವ ಕೆಲಸ ಮಾಡುತ್ತಿದ್ದಾರೆ ಮತ್ತು ಯಾವ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ?
ಆಕಾಶ್ ಅಂಬಾನಿ ಶಿಕ್ಷಣ
ಮುಕೇಶ್ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿಗೆ 33 ವರ್ಷ. ಆಕಾಶ್ ತಮ್ಮ ಶಾಲಾ ಶಿಕ್ಷಣವನ್ನು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ಮುಂಬೈನ ಕ್ಯಾಂಪಿಯನ್ ಸ್ಕೂಲ್‌ನಲ್ಲಿ ಮಾಡಿದ್ದಾರೆ. ಆಕಾಶ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ವ್ಯಾಪಾರ-ವಾಣಿಜ್ಯದಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ.
ಆಕಾಶ್ ಅಂಬಾನಿ ನಿವ್ವಳ ಮೌಲ್ಯ
ಆಕಾಶ್ ಅವರು 2022ರಿಂದ ರಿಲಯನ್ಸ್ ಜಿಯೋ ಅಧ್ಯಕ್ಷರಾಗಿದ್ದಾರೆ. ಇದಲ್ಲದೆ, ಅವರು ಜಿಯೋ ಪ್ಲಾಟ್‌ಫಾರ್ಮ್ ಮತ್ತು ರಿಲಯನ್ಸ್ ರಿಟೇಲ್‌ನಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅವರ ವಾರ್ಷಿಕ ವೇತನ 5.4 ಕೋಟಿ ರೂ. StarSunfolded ಪ್ರಕಾರ, ಆಕಾಶ್ ಅವರ ನಿವ್ವಳ ಮೌಲ್ಯ $41 ಬಿಲಿಯನ್ (ರೂ. 3,33,313 ಕೋಟಿ).
ಇಶಾ ಅಂಬಾನಿ ಶಿಕ್ಷಣ
ಇಶಾ ಮತ್ತು ಆಕಾಶ್ ಅಂಬಾನಿ ಅವಳಿ ಮಕ್ಕಳು. ಇಶಾ 23 ಅಕ್ಟೋಬರ್ 1991ರಂದು ಜನಿಸಿದರು. ಇಶಾ ಅಂಬಾನಿ ಅವರು 2018ರಲ್ಲಿ ಉದ್ಯಮಿ ಆನಂದ್ ಪಿರಮಾಳ್ ಅವರನ್ನು ವಿವಾಹವಾದರು, ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಇದಲ್ಲದೆ, ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದರು. ಇದಕ್ಕೂ ಮೊದಲು, ಅವರು ಅಮೆರಿಕದ ಯೇಲ್ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಪದವಿ ಪಡೆದರು.
ಇಶಾ ಅಂಬಾನಿ ನಿವ್ವಳ ಮೌಲ್ಯ
ಇಶಾ ಅಂಬಾನಿ ಕೂಡ ತನ್ನ ತಂದೆಯ ವ್ಯವಹಾರದಲ್ಲಿ ಸಹಾಯ ಮಾಡುತ್ತಾರೆ. ರಿಲಯನ್ಸ್ ಗ್ರೂಪ್‌ನ ಚಿಲ್ಲರೆ ವ್ಯಾಪಾರ(ರಿಲಯನ್ಸ್ ರಿಟೇಲ್)ವನ್ನು ಇಶಾ ನಿರ್ವಹಿಸುತ್ತಿದ್ದಾರೆ. ಇದಲ್ಲದೆ, ಅವರು ರಿಲಯನ್ಸ್ ಮಂಡಳಿಯಲ್ಲಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿದ್ದಾರೆ. ರಿಲಯನ್ಸ್ ರಿಟೇಲ್, ರಿಲಯನ್ಸ್ ಜಿಯೋ, ರಿಲಯನ್ಸ್ ಫೌಂಡೇಶನ್‌ನಲ್ಲಿಯೂ ಅವರು ಪ್ರಮುಖ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಇಂಡಿಯಾ ಟೈಮ್ಸ್ ವರದಿ ಪ್ರಕಾರ ಆಕೆಯ ವಾರ್ಷಿಕ ವೇತನ 4.2 ಕೋಟಿ ರೂ. ಇಶಾ ಅವರ ನಿವ್ವಳ ಮೌಲ್ಯ 100 ಮಿಲಿಯನ್ ಡಾಲರ್ (831 ಕೋಟಿ ರೂ.) ಆಗಿದೆ.
ಅನಂತ್ ಅಂಬಾನಿ ಶಿಕ್ಷಣ
ಅನಂತ್ ಅಂಬಾನಿ ನೀತಾ ಮತ್ತು ಮುಖೇಶ್ ಅಂಬಾನಿ ಅವರ ಕಿರಿಯ ಮಗ. 29 ವರ್ಷದ ಅನಂತ್ 10 ಏಪ್ರಿಲ್ 1995ರಂದು ಜನಿಸಿದರು. ಧೀರೂಭಾಯಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಓದಿದ ನಂತರ, ಅನಂತ್ ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.
ಅನಂತ್ ಅಂಬಾನಿ ನಿವ್ವಳ ಮೌಲ್ಯ
ಅನಂತ್ ಅಂಬಾನಿ ರಿಲಯನ್ಸ್ ಮತ್ತು ಜಿಯೋದಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ. 2022ರಲ್ಲಿ ರಿಲಯನ್ಸ್ ರಿಟೇಲ್‌ನ ನಿರ್ದೇಶಕರ ಮಂಡಳಿಯಲ್ಲಿ ಅನಂತ್ ಅವರನ್ನು ಸೇರಿಸಲಾಯಿತು. ಅದೇ ಸಮಯದಲ್ಲಿ, ಅವರು ರಿಲಯನ್ಸ್‌ನಲ್ಲಿ ಹಸಿರು ಮತ್ತು ನವೀಕರಿಸಬಹುದಾದ ಶಕ್ತಿಯ ಜಾಗತಿಕ ಕಾರ್ಯಾಚರಣೆಗಳನ್ನು ಸಹ ನಿರ್ವಹಿಸುತ್ತಾರೆ. ಇಂಡಿಯಾ ಟೈಮ್ಸ್ ಪ್ರಕಾರ, ಅವರ ವಾರ್ಷಿಕ ವೇತನ 4.2 ಕೋಟಿ ರೂ. ಅನಂತ್ ಅಂಬಾನಿಯವರ ನಿವ್ವಳ ಮೌಲ್ಯ 3,44,000 ಕೋಟಿ ರೂ.