ಅದಾನಿ ಗ್ರೂಪ್‌ನಿಂದ ಒಂದೇ ವರ್ಷದಲ್ಲಿ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ತೆರಿಗೆ ಪಾವತಿ!

Published : Jun 05, 2025, 07:07 PM IST

ಅದಾನಿ ಗ್ರೂಪ್ 2024-25ರಲ್ಲಿ ₹74,945 ಕೋಟಿ ತೆರಿಗೆ ಪಾವತಿಸಿದ್ದು, ಹಿಂದಿನ ವರ್ಷಕ್ಕಿಂತ 29% ಹೆಚ್ಚಳವಾಗಿದೆ. ಈ ಮೊತ್ತವು ಮುಂಬೈ ಮೆಟ್ರೋ ನಿರ್ಮಾಣ ವೆಚ್ಚಕ್ಕೆ ಸಮನಾಗಿದ್ದು, ದೇಶದ ಅಭಿವೃದ್ಧಿಯಲ್ಲಿ ಅದಾನಿ ಗ್ರೂಪ್‌ನ ಪಾತ್ರವನ್ನು ಎತ್ತಿ ತೋರಿಸುತ್ತದೆ. 

PREV
16

ಅದಾನಿ ಗ್ರೂಪ್ ತನ್ನ ದೇಶೀಯ ಮತ್ತು ಜಾಗತಿಕ ವ್ಯಾಪಾರದ ಮೂಲಕ ಭಾರತಕ್ಕೆ ಬೃಹತ್ ಆದಾಯ ನೀಡುತ್ತಿರುವ ಉದ್ಯಮ ಸಮೂಹವಾಗಿದ್ದು, 2024-25ನೇ ಹಣಕಾಸು ವರ್ಷದಲ್ಲಿ ಸುಮಾರು ₹74,945 ಕೋಟಿ ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿರುವುದಾಗಿ ಗುರುವಾರ ಪ್ರಕಟಿಸಿದೆ. ಈ ಮೊತ್ತವು ಹಿಂದಿನ ವರ್ಷದ ₹58,104 ಕೋಟಿಗೆ ಹೋಲಿಸಿದರೆ. ಈ ಬಾರಿ ಶೇ. 29 ರಷ್ಟು ಹೆಚ್ಚಳವಾಗಿದೆ.

26

ತೆರಿಗೆ ಪಾವತಿಯು ಮೂರು ರೂಪಗಳಲ್ಲಿ ಪಾವತಿಯಾಗಿದೆ. ನೇರ ತೆರಿಗೆ (Direct Taxes) – ₹28,720 ಕೋಟಿ, ಪರೋಕ್ಷ ತೆರಿಗೆ (Indirect Taxes) – ₹45,407 ಕೋಟಿ, ಇತರ ತೆರಿಗೆ (Other contributions) – ₹818 ಕೋಟಿ ಆಗಿದೆ. ಪರೋಕ್ಷ ತೆರಿಗೆಗಳಲ್ಲಿ ಕಂಪನಿಯು ತನ್ನ ಗ್ರಾಹಕರಿಂದ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸುವ GST, ಇಂಪೋರ್ಟ್ ಡ್ಯೂಟಿ ಮುಂತಾದವು ಸೇರಿವೆ. ಇವುಗಳ ಜೊತೆಗೆ ಉದ್ಯೋಗಿಗಳ ಸಾಮಾಜಿಕ ಭದ್ರತಾ ಕೊಡುಗೆಗಳೂ ಸೇರಿವೆ.

36

ಈ ಮೊತ್ತದ ಮಹತ್ವವೇನು?

₹74,945 ಕೋಟಿ ಮೊತ್ತದ ತೆರಿಗೆ ಪಾವತಿ ಮುಂಬೈನ ಸಂಪೂರ್ಣ ಮೆಟ್ರೋ ಜಾಲ ನಿರ್ಮಾಣ ವೆಚ್ಚದ ಸಮನಾಗಿದೆ . ದಿನಕ್ಕೆ ಲಕ್ಷಾಂತರ ಪ್ರಯಾಣಿಕರ ನಿರ್ವಹಣೆಗಾಗಿ ಅಗತ್ಯವಿರುವ ಮೂಲಸೌಕರ್ಯ, ಇಷ್ಟೇ ಅಲ್ಲ, ಈ ಮೊತ್ತದೊಂದಿಗೆ ಆಧುನಿಕ ಒಲಿಂಪಿಕ್ಸ್‌ ಕಾರ್ಯಕ್ರಮವನ್ನೂ ಆಯೋಜಿಸಬಹುದಾಗಿದೆ. ಇದು ಅದಾನಿ ಗ್ರೂಪ್‌ ನ ಅರ್ಥಿಕ ಶಕ್ತಿ ಮಾತ್ರವಲ್ಲ, ದೇಶದ ಅಭಿವೃದ್ಧಿಯಲ್ಲಿ ಅದರ ನೇರ ಪಾಲು ಎಂಬುದರ ಸಾಕ್ಷಿಯೂ ಹೌದು.

46

ಪಾವತಿಯಲ್ಲಿ ಪ್ರಮುಖ ಪಾತ್ರವಹಿಸಿದ ಅದಾನಿ ನೇತೃತ್ವದ ಅಡಿಯಲ್ಲಿಯಲ್ಲಿರುವ 7 ಕಂಪನಿಗಳಿಂದ ಈ ತೆರಿಗೆ ಪಾವತಿಯಾಗಿದೆ. ಅವುಗಳೆಂದರೆ

  • ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL)
  • ಅದಾನಿ ಪೋರ್ಟ್ಸ್ ಮತ್ತು ಸ್ಪೆಷಲ್ ಎಕನಾಮಿಕ್ ಜೋನ್ ಲಿಮಿಟೆಡ್ (APSEZ)
  • ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL)
  • ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್
  • ಅದಾನಿ ಪವರ್ ಲಿಮಿಟೆಡ್
  • ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್
  • ಅಂಬುಜಾ ಸಿಮೆಂಟ್ಸ್ ಲಿಮಿಟೆಡ್

ಇವುಗಳಿಗೆ ಜೊತೆಗೆ ಮೂರು ಹೆಚ್ಚುವರಿ ಕಂಪನಿಗಳಾದ ಎನ್‌ಡಿಟಿವಿ (NDTV), ಎಸಿಸಿ ಸಿಮೆಂಟ್ಸ್ (ACC), ಮತ್ತು ಸಂಘಿ ಇಂಡಸ್ಟ್ರೀಸ್‌ನ ಆದಾಯಗಳೂ ಈ ಅಂಕಿ ಅಂಶಗಳಲ್ಲಿ ಸೇರಿಸಲಾಗಿದೆ.

56

ಪಾರದರ್ಶಕತೆಗಾಗಿ ವಿಶೇಷ ದಾಖಲೆ

ಅದಾನಿ ಗ್ರೂಪ್ ತನ್ನ ಪಟ್ಟಿ ಮಾಡಲಾದ ಘಟಕಗಳ ವೆಬ್‌ಸೈಟ್‌ನಲ್ಲಿ “ತಯಾರಿ ಮತ್ತು ತೆರಿಗೆಗೆ ವಿಧಾನದ ಆಧಾರದ ಮೇಲೆ” ಎಂಬ ಹೆಸರಿನಲ್ಲಿ ಸ್ಪಷ್ಟ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರತಿ ಕಂಪನಿಯ ತೆರಿಗೆ ಪಾವತಿಗಳ ವಿವರಗಳಿವೆ. ಇದು ಅವರ "ಪಾರದರ್ಶಕತೆ" ಮತ್ತು "ಪಾಲುದಾರರೊಂದಿಗೆ ನೈತಿಕ ಸಂಬಂಧ"ದ ಬದ್ಧತೆಯ ಪ್ರತೀಕವಾಗಿದೆ.

ESG ಚೌಕಟ್ಟಿನಲ್ಲಿ ತೆರಿಗೆ ಪಾರದರ್ಶಕತೆ

ಅದಾನಿ ಗ್ರೂಪ್ ಈ ತೆರಿಗೆ ಪಾವತಿಯನ್ನು ಸಾಮಾಜಿಕ ಜವಾಬ್ದಾರಿ ಮತ್ತು ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಚೌಕಟ್ಟಿನ ಭಾಗವೆಂದು ಪರಿಗಣಿಸುತ್ತಿದೆ. ಇದರಿಂದ ಆರ್ಥಿಕ ಉತ್ಸಾಹದ ಜೊತೆಗೆ ಸಾಮಾಜಿಕ ಜವಾಬ್ದಾರಿಯ ನಡವಳಿಕೆಗೆ ಕಂಪನಿಯ ಒತ್ತಾಯವೂ ವ್ಯಕ್ತವಾಗುತ್ತಿದೆ.

66

ಅದಾನಿ ಗ್ರೂಪ್‌ನ ಈ ತೆರಿಗೆ ಪಾವತಿ ದೇಶದ ಆರ್ಥಿಕತೆಯಲ್ಲಿ ಖಾಸಗಿ ಕಂಪನಿಗಳ ಪಾತ್ರವನ್ನು ವಿಸ್ತೃತವಾಗಿ ಬಿಂಬಿಸುತ್ತದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಹಿಡಿದು, ಪಾರದರ್ಶಕ ಆಡಳಿತದವರೆಗೆ ಈ ಉದ್ದೇಶಗಳು ಭಾರತದ ಬೆಳವಣಿಗೆಗಾಗಿ ಪ್ರಮುಖ ಮೆಟ್ಟಿಲುಗಳು. ಇದೊಂದು ವ್ಯಾಪಾರ ಮಾದರಿ ಮಾತ್ರವಲ್ಲ, ದೇಶದ ಪ್ರಗತಿಗೆ ಸಹಭಾಗಿತ್ವ ನೀಡುವ ನವ ಜವಾಬ್ದಾರಿ ಮಾದರಿ ಎಂಬುದಾಗಿ ಗುರುತಿಸಬಹುದು.

Read more Photos on
click me!

Recommended Stories