ಒಯೋ ತನ್ನ ಗ್ರಾಹಕರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಆಪ್ ಮೂಲಕ, ಬಜೆಟ್ ಹೋಟೆಲ್‌ಗಳ ಬದಲಾಗಿ ಪ್ರೀಮಿಯಂ ಹೋಟೆಲ್‌ಗಳು, ಐಷಾರಾಮಿ ವಿಲ್ಲಾಗಳು ಮತ್ತು ವಿಶಿಷ್ಟ ಪ್ರಯಾಣದ ಅನುಭವಗಳನ್ನು ಬುಕ್ ಮಾಡಬಹುದು.
ಒಯೋ ಭಾರತದ ಯಶಸ್ವಿ ಸಾರ್ಟ್‌ಅಪ್‌ಗಳಲ್ಲಿ ಒಂದಾಗಿದೆ. ದೇಶದ ಬಹುತೇಕ ನಗರಗಳಲ್ಲಿ ಒಯೋ ತನ್ನ ಶಾಖೆಗಳನ್ನು ಆರಂಭಿಸಿದೆ. ಇದೀಗ ತನ್ನ ಗ್ರಾಹಕರಿಗೆ ಗುಣಮಟ್ಟದ ಸೇವೆಗಳನ್ನು ನೀಡಲು ಒಯೋ ಮುಂದಾಗಿದೆ. ಇದೀಗ ಒಯೋ ಗ್ರಾಹಕರಿಗಾಗಿ ವಿಶೇಷ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
26
ಹೊಸ ಅಪ್ಲಿಕೇಶನ್
ಒಯೋ ಅಂದ್ರೆ ಮಧ್ಯಮ ವರ್ಗದ ಜನತೆಯ ಹೋಟೆಲ್ ಎಂದು ಬಿಂಬಿತವಾಗಿದೆ. ಒಯೋದ ಪೋಷಕ ಸಂಸ್ಥೆಯಾಗಿರುವ PRISM ಹೊಸ ಅಪ್ಲಿಕೇಶನ್ ಪರಿಚಯಿಸಿದೆ. ಪ್ರೀಮಿಯಂ ಹೋಟೆಲ್, ಐಷಾರಾಮಿ ವಿಲ್ಲಾ ಮತ್ತು ವಿಶಿಷ್ಟ ಪ್ರಯಾಣದ ಅನುಭವ ಪಡೆಯಲು "ಚೆಕ್‌ಇನ್" ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಹಿಂದೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ನೀಡುತ್ತಿದ್ದ ಒಯೋ ಇದೀಗ ಈ ಆಪ್ ಮೂಲಕ ಉನ್ನತ ಮಟ್ಟದ ಸೇವೆಳನ್ನು ನೀಡಲು ಮುಂದಾಗಿದೆ.
36
ಚೆಕ್‌ಇನ್ ಅಪ್ಲಿಕೇಶನ್
ಚೆಕ್‌ಇನ್ ಅಪ್ಲಿಕೇಶನ್‌ನಲ್ಲಿರುವ ಎಲ್ಲಾ ಹೋಟೆಲ್ ಮತ್ತು ಹೋಂಸ್ಟೇಗಳು ಪ್ರತಿ ಗುಣಮಟ್ಟ ಸೇವೆಯ ಮಾನದಂಡಗಳನ್ನು ಪಾಲನೆ ಮಾಡಿರುತ್ತವೆ. ಸಂಡೇ ಹೋಟೆಲ್‌ಗಳು, ಕ್ಲಬ್‌ಹೌಸ್ ಮತ್ತು ಪ್ಯಾಲೆಟ್‌ನಂತಹ ಬ್ರ್ಯಾಂಡ್‌ಗಳ ಜೊತೆಗೆ, ಚೆಕ್‌ಮೈಗೆಸ್ಟ್, ಡ್ಯಾನ್‌ಸೆಂಟರ್ ಮತ್ತು ಬೆಲ್ವಿಲ್ಲಾದಂತಹ ಯುರೋಪ್‌ನಲ್ಲಿರುವ ಐಷಾರಾಮಿ ಹಾಲಿಡೇ ಕಳೆಯಲು ಗ್ರಾಹಕರು ಚೆಕ್‌ಇನ್ ಅಪ್ಲಿಕೇಶನ್ ಬಳಸಬಹುದು ಎಂದು ಕಂಪನಿ ಹೇಳಿದೆ. ಈ ಆಪ್ ಮೂಲಕ ಗುಣಮಟ್ಟದ ಸೇವೆ ನೀಡಲಾಗುತ್ತೆ ಎಂದು ಒಯೋ ಹೇಳಿದೆ.
ಚೆಕ್ಇನ್ ಅಪ್ಲಿಕೇಶನ್ ಭಾರತದ ಪ್ರಮುಖ ಹೋಟೆಲ್‌ಗಳ ಚೈನ್ ಲಿಂಕ್ ಆಗಲಿದೆ. ಭಾರತದ ಸುಮಾರು 1300ಕ್ಕೂ ಅಧಿಕ ಪ್ರೀಮಿಯಂ ಹೋಟೆಲ್‌ಗಳನ್ನು ಒಳಗೊಂಡಿದೆ. ಪ್ರತಿಯೊಂದು ಹೋಟೆಲ್‌ಗಳು ನೇರವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಚೆಕ್‌ಇನ್ ಆಪ್‌ನಲ್ಲಿರುವ ಹೋಟೆಲ್‌ಗಳು ತರಬೇತಿ ಪಡೆದ ಸಿಬ್ಬಂದಿ, ಗುಣಮಟ್ಟದ ಆಹಾರ, ಸ್ವಚ್ಛವಾದ ಕೊಠಡಿ ಮತ್ತು ಪ್ರಮಾಣೀಕೃತ ಕಿಟ್‌ಗಳನ್ನು ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
56
ಹೋಟೆಲ್ ಬುಕ್
ಭಾರತದಲ್ಲಿ ಮೂರು ತಿಂಗಳು ಪ್ರಾಯೋಗಿಕ ಯೋಜನೆಗಳನ್ನು ಪರೀಕ್ಷೆ ಮಾಡಲಾಗಿತ್ತು. ಇದೀಗ ದೇಶದಾದ್ಯಂತ ಸಕ್ರಿಯವಾಗಿದ್ದು, ಸೇವೆಯನ್ನು ನೀಡುತ್ತಿದೆ. ಈ ಅಪ್ಲೀಕೇಶನ್ ಸೇವೆ ಮೂಲಕ ಲಂಡನ್, ದುಬೈ ಮತ್ತು ಬಾಲಿಯಂತಹ ಜನಪ್ರಿಯ ಪ್ರವಾಸಿ ತಾಣಗಳಲ್ಲಿನ ಹೋಟೆಲ್ ಬುಕ್ ಮಾಡಬಹುದು. ಈ ಮೂಲಕ ಅಂತರಾಷ್ಟ್ರೀಯಮಟ್ಟದಲ್ಲಿಯೂ ಒಯೋ ಈ ಸೇವೆಯನ್ನು ನೀಡುತ್ತಿದೆ.
ಒಯೋದ ಸಮೀಕ್ಷೆ ಪ್ರಕಾರ, ಸುಮಾರು 45% ಪ್ರಯಾಣಿಕರು ಬಜೆಟ್ ಮತ್ತು 55% ಪ್ರಯಾಣಿಕರು ಐಷಾರಾಮಿ ಅನುಭವದ ಹೋಟೆಲ್ ಬಯಸುತ್ತಾರೆ. ಈ ಸಮೀಕ್ಷೆಯ ಪ್ರಕಾರ, ಒಯೋ ಎರಡು ಪ್ರತ್ಯೇಕ ಅಪ್ಲಿಕೇಶನ್ ನೀಡುತ್ತಿದೆ. ಬಜೆಟ್ ಪ್ರಯಾಣಿಕರು "ಒಯೋ ಅಪ್ಲಿಕೇಶನ್" ಮತ್ತು ಐಷಾರಾಮಿ ಪ್ರಯಾಣಿಕರು "ಚೆಕ್ಇನ್ ಅಪ್ಲಿಕೇಶನ್" ಬಳಸಬಹುದಾಗಿದೆ. ಗ್ರಾಹಕರು ತಮ್ಮ ಅಗತ್ಯಕ್ಕನುಗುಣವಾಗಿ ಅಪ್ಲಿಕೇಶನ್ ಆಯ್ಕೆ ಮಾಡಿಕೊಳ್ಳಬಹುದು.