ವೆಸ್ಪಾ ಪ್ರಿಮಾವೆರಾ ಸ್ಪೆಷಲ್ ಎಡಿಶನ್ ಬಿಡುಗಡೆ, ಈ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಬ್ರೆಜಾ ಕಾರು ಸಿಗುತ್ತೆ

Published : Jul 22, 2026, 02:34 PM IST

ಭಾರತದಲ್ಲಿ ವೆಸ್ಪಾ ಸ್ಕೂಟರ್ ಅತ್ಯಂತ ಜನಪ್ರಿಯ. ಇದೀಗ ಇಟಾಲಿಯನ್ ಬ್ರ್ಯಾಂಡ್ ವೆಸ್ಪಾ ವಿಶೇಷ ಎಡಿಶನ್ ಪ್ರಿಮಾವೆರಾ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಬೆಲೆಗೆ ಹೊಸ ಮಾರುತಿ ಬ್ರೆಜಾ ಫೇಸ್‌ಲಿಫ್ಟ್ ಕಾರು ಮನೆಗೆ ತರಬಹುದು.

PREV
16
ವೆಸ್ಪಾ ಪ್ರಿಮಾವೆರಾ ಸ್ಪೆಷಲ್ ಎಡಿಶನ್ ಸ್ಕೂಟರ್

ಭಾರತದಲ್ಲಿ ಸ್ಕೂಟರ್ ಹೆಚ್ಚು ಬಳಕೆ ವಾಹನ. ನಗರದ ಟ್ರಾಫಿಕ್‌ನಲ್ಲಿ, ಹಳ್ಳಿಯ ರಸ್ತೆಗಳಲ್ಲಿ ಯಾವುದೇ ಅಡೆ ತಡೆ ಇಲ್ಲದೆ ಸ್ಕೂಟರ್ ಸವಾರಿ ಮಾಡಲು ಸಾಧ್ಯ. ಗೇರ್ ಬದಲಾಯಿಸಬೇಕಿಲ್ಲ, ಕ್ಲಚ್ ಹಿಡಿಯಬೇಕಿಲ್ಲ. ಜೊತೆಗೆ ಲಗೇಜ್ ಕೊಂಡೊಯ್ಯಲು ಸುಲಭ. ಹೀಗಾಗಿ ಸ್ಕೂಟರ್ ಬೇಡಿಕೆ ಹೆಚ್ಚು. ಇದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಹಲವು ಸ್ಕೂಟರ್ ಇವೆ. ಈ ಪೈಕಿ ಇಟಲಿಯನ್ ಬ್ರ್ಯಾಂಡ್ ವೆಸ್ಪಾ ರೆಟ್ರೋ ಶೈಲಿಯಲ್ಲಿ ಮೋಡಿ ಮಾಡಿದೆ. ಸ್ಟೈಲೀಶ್ ಲುಕ್ ಎಲ್ಲರನ್ನು ಆಕರ್ಷಿಸುತ್ತದೆ. ಇದೀಗ ಸ್ಪೆಷಲ್ ಎಡಿಶನ್ ವೆಸ್ಪಾ ಪ್ರಿಮಾವೆರಾ ಸ್ಕೂಟರ್ ಬಿಡುಗಡೆಯಾಗಿದೆ.

26
ಕೇವಲ 100 ಸ್ಕೂಟರ್ ಮಾತ್ರ ಲಭ್ಯ

ಪಿಯಾಜಿಯೋ ಮಾಲೀಕತ್ವದ ವೆಸ್ಪಾ ಸ್ಕೂಟರ್ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಲಭ್ಯವಿದೆ. ಹಳೇ ಶೈಲಿ, ಹೊಸತನ, ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಸ್ಕೂಟರ್ ಬಿಡುಗಡೆಯಾಗಿ ಮನಗೆದ್ದಿದೆ. ಹಲವು ಬಣ್ಣಗಳಲ್ಲಿ ಈ ಸ್ಕೂಟರ್ ಲಭ್ಯವಿದೆ. ಇದೀಗ ಪ್ರಿಮೆವೆರಾ ಎಡಿಶನ್ ಹಲವು ವಿಶೇಷತೆಯ ಸ್ಕೂಟರ್. ಇದು ವಿಶ್ವದಲ್ಲಿ ಕೇವಲ 100 ಸ್ಕೂಟರ್ ಮಾತ್ರ ಲಭ್ಯವಿದೆ. ಮೊದಲು ಬುಕ್ ಮಾಡಿದವರಿಗೆ ಮಾತ್ರ ಸ್ಕೂಟರ್ ಲಭ್ಯವಾಗಲಿದೆ.

36
ಈ ಸ್ಕೂಟರ್ ಬೆಲೆಗೆ ಕಾರು ಖರೀದಿಸಬಹುದು

ವೆಸ್ಪಾ ಪ್ರಿಮಾವೆರಾ 125 ಸ್ಕೂಟರ್ ಬೆಲೆ ಕೇಳಿದರೆ ದಂಗಾಗುವುದು ಖಚಿತ. ಇದರ ಬೆಲೆ 12,000 ಯೂರೋ. ಭಾರತೀಯ ರೂಪಾಯಿಗಳಲ್ಲಿ 10.8 ಲಕ್ಷ ರೂಪಾಯಿ. ಅತ್ಯಂತ ದುಬಾರಿ ಸ್ಕೂಟರ್ ಅನ್ನೋ ಹಣೆಪಟ್ಟಿ ಹೊತ್ತುಕೊಂಡಿದೆ. ಭಾರತದಲ್ಲಿ ಜುಲೈ 24 ರಂದು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ಬ್ರೆಜಾ ಫೇಸ್‌ಲಿಫ್ಟ್ ಆರಂಭಿಕ 8.26 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

46
ಲಕ್ಷುರಿ ಲೈಫ್‌ಸ್ಟೈಲ್‌ಗಾಗಿ ಸ್ಕೂಟರ್

ವೆಸ್ಪಾ ಪ್ರಿಮಾವೆರಾ 125 ಸ್ಪೆಷಲ್ ಸ್ಕೂಟರ್ ದಿನನಿತ್ಯದ ಬಳಕೆದಾರರಿಗಿಂತ ಲಕ್ಷುರಿ ಲೈಫ್ ಸ್ಟೈಲ್ ಪ್ರಿಯರಿಗಾಗಿ ತಯಾರಿಸಲಾಗಿದೆ. ಇದು ವಿಶೇಷ ಹಾಗೂ ಅಪರೂಪದ ವಸ್ತುಗಳನ್ನು ಸಂಗ್ರಹಿಸುವ ವಾಹನ ಪ್ರಿಯರಿ ಗಮನದಲ್ಲಿಟ್ಟು ತಯಾರಸಿಲಾಗಿದೆ.ಹೀಗಾಗಿ ಕೇವಲ 100 ಸ್ಕೂಟರ್ ಮಾತ್ರ ಲಭ್ಯವಿದೆ. ಹಳದಿ ಬಣ್ಣ, ಕ್ರೋಮ್, ಕಾನ್ಯಾಕ್ ಆಕ್ಸೆಂಟ್‌ನಿಂದ ಹೊಸ ಸ್ಪೆಷಲ್ ಎಡಿಶನ್ ವೆಸ್ಪಾ ಗಮನಸೆಳೆಯುತ್ತಿದೆ.

56
ಕರಕುಶಲತೆಯೊಂದಿಗೆ ಸ್ಕೂಟರ್ ನಿರ್ಮಾಣ

ಈ ಸ್ಕೂಟರ್‌ನಲ್ಲಿ ಗುಣಮಟ್ಟದ ಕರಕುಶಲತೆಯೊಂದಿಗೆ ಸ್ಕೂಟರ್ ತಯಾರಿಸಲಾಗಿದೆ. ಪಿಕ್‌ನಿಕ್ ಬಾಸ್ಕೆಟ್, ಐವರಿ ಫಿನೀಶಿಂಗ್ ವ್ಹೀಲ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಆದರೆ ಇವೆಲ್ಲವೂ ಈ ಬೆಲೆಗೆ ಸಮರ್ಥನೀಯವೇ ಅನ್ನೋ ಪ್ರಶ್ನೆಗೆ ಕಂಪನಿ ಉತ್ತರ ಹೇಳಬೇಕು. ಬ್ರ್ಯಾಂಡ್ ಹಾಗೂ ಲಕ್ಷುರಿ ಎರಡೇ ಆಯ್ಕೆ ಮುಂದಿಟ್ಟು ಈ ಸ್ಕೂಟರ್ ನಿರ್ಮಾಣಗೊಂಡಿದೆ.

66
ಭಾರತದಲ್ಲಿ ಲಭ್ಯವಿದೆಯಾ ಈ ಸ್ಕೂಟರ್

ಅತೀ ದುಬಾರಿ ಸ್ಕೂಟರ್ ಇದು. ಸದ್ಯ ಯೂರೋಪ್ ಮಾರುಕಟ್ಟೆಗೆ ಈ ಸ್ಕೂಟರ್ ಬಿಡುಗಡೆಯಾಗಿದೆ. ಜಿಜಿ ರೆಸ್ಟೋರೆಂಟ್‌ನಲ್ಲಿ ಈ ಸ್ಕೂಟರ್ ಪ್ರದರ್ಶನಕ್ಕೆ ಇಡಲಾಗಿದೆ. ಆದರೆ ಭಾರತದಲ್ಲಿ ಈ ಸ್ಕೂಟರ್ ಬಿಡುಗಡೆಯಾಗುತ್ತಿಲ್ಲ. ಭಾರತ ಮಾತ್ರವಲ್ಲ ಅಮೆರಿಕದಲ್ಲೂ ಈ ಸ್ಕೂಟರ್ ಲಭ್ಯವಿಲ್ಲ. ಇಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಈ ಸ್ಕೂಟರ್ ಭಾರತ ಹಾಗೂ ಅಮೆರಿಕ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯಾವುದೇ ಆಲೋಚನೆ ಕಂಪನಿಗಿಲ್ಲ ಎಂದಿದೆ.

Read more Photos on
click me!

Recommended Stories