ಬೆಲೆ ಕಡಿಮೆ ಆದರೆ ಉತ್ತಮ ಮೈಲೇಜ್ ನೀಡಬಲ್ಲ ಬೈಕ್ ಲಭ್ಯವಿದೆ. ನಗರ, ಪಟ್ಟಣ, ಹಳ್ಳಿ ಸೇರಿದಂತೆ ಯಾವುದೇ ರಸ್ತೆಗೂ ಈ ಬೈಕ್ ಸೈ ಎನಿಸಿಕೊಂಡಿದೆ. ಹೀಗೆ ಕೇವಲ 58,000 ರೂ ಬೆಲೆಯಿಂದ ಆರಂಭಗೊಳ್ಳುವ ಟಾಪ್ 5 ಬೈಕ್ ಇಲ್ಲಿದೆ.
ಕರ್ನಾಟಕ ಸೇರಿದಂತೆ ಭಾರತದಲ್ಲಿ ದ್ವಿಚಕ್ರ ವಾಹನ ಅತೀ ದೊಡ್ಡ ಮಾರುಕಟ್ಟೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನಗಳ ಮಾರಾಟ ನಡೆಯುತ್ತದೆ. ನಗರ ಪ್ರದೇಶಗಳಲ್ಲಿ ಬಹುತೇಕರೂ ದ್ವಿಚಕ್ರವಾಹನವನ್ನೇ ಅವಲಂಬಿಸಿದ್ದಾರೆ. ಆದರೆ ಸದ್ಯದ ಪೆಟ್ರೋಲ್ ಬೆಲೆ, ನಿರ್ವಹಣೆಗಳ ವೆಚ್ಚದಿಂದ ಬೈಕ್ ಅಥವಾ ಸ್ಕೂಟರ್ ದುಬಾರಿಯಾಗುತ್ತದೆ. ಆದರೆ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ನೀಡಬಲ್ಲ ಹಲವು ಬೈಕ್‌ಗಳು ಲಭ್ಯವಿದೆ.
26
ಟಿವಿಎಸ್ ಸ್ಪೋರ್ಟ್
ಟಿವಿಎಸ್ ಸ್ಪೋರ್ಟ್ ನೋಡಲು 125 , 150 ಬೈಕ್ ರೀತಿ ಕಾಣುತ್ತದೆ. ವಿಶೇಷ ಅಂದರೆ ಈ ಬೈಕ್ ಬೆಲೆ 58,750 ರೂಪಾಯಿ. ಇನ್ನು ಸೆಲ್ಫ್ ಸ್ಟಾರ್ಟ್ ಬೈಕ್ ಬೆಲೆ 59,950 ರೂಪಾಯಿ (ಎಕ್ಸ್ ಶೋ ರೂಂ). ನಾಲ್ಕು ಬಣ್ಣಗಳಲ್ಲಿ ಈ ಬೈಕ್ ಲಭ್ಯವಿದೆ. 109.7cc ಎಂಜಿನ್ ಹೊಂದಿದೆ. ARAI ಪ್ರಕಾರ ಒಂದು ಲೀಟರ್ ಪೆಟ್ರೋಲ್‌ಗೆ 80 ಕಿಲೋಮೀಟರ್ ಮೈಲೇಜ್ ನೀಡಲಿದೆ.
36
ಹೀರೋ HF ಡಿಲಕ್ಸ್
ಭಾರತದಲ್ಲಿ ಲಭ್ಯವಿರುವ ಬೈಕ್ ಪೈಕಿ ಅತೀ ಕಡಿಮೆ ಬೆಲೆ ಅಂದರೆ ಸ್ಕೂಟರ್ ಬೆಲೆಗಿಂತಲೂ ಕಡಿಮೆ ದರದಲ್ಲಿ ಲಭ್ಯವಿರುವ ಬೈಕ್ ಹೀರೋ HF ಡಿಲಕ್ಸ್. 97.2cc ಎಂಜಿನ್ ಹೊಂದಿರುವ ಈ ಬೈಕ್ ಬೆಲೆ 58,977 ರೂಪಾಯಿಗಳಿಂದ ಆರಂಭಗೊಳ್ಳುತ್ತದೆ. ಗರಿಷ್ಠ ಬೆಲೆ 71,470 ರೂಪಾಯಿ. ಈ ಬೈಕ್ ತೂಕ 110-112kg ಹೊಂದಿದೆ. 1235mm ವ್ಹೀಲ್ ಬೇಸ್ ಹೊಂದಿದೆ. ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡುತ್ತೆ.
ಬಜಾಜ್ ಪ್ಲಾಟಿನಾ 100 ಬೈಕ್ 99.59cc ಎಂಜಿನ್ ಹೊಂದಿದೆ. ಈ ಬೈಕ್ ಆರಂಭಿಕ ಬೆಲೆ 68 711 ರೂಪಾಯಿ. 7.90hp ಪವರ್ ಹಾಗೂ 8.34Nm ಟಾರ್ಕ್ ಸಾಮರ್ಥ್ಯ ಹೊಂದಿರುವ ಪ್ಲಾಟಿನ 100, ಎಲೆಕ್ಟ್ರಿಕ್ ಸ್ಟಾರ್ಟ್ಸ, ಎಲ್ಇಡಿ ಡಿಆರ್‌ಎಲ್ ಹೊಂದಿದೆ. 200ಎಂಎ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬಜಾಜ್ ಪ್ಲಾಟಿನಾ 100 ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡಲಿದೆ.
56
ಟಿವಿಎಸ್ ರೆಡಿಯಾನ್
ಟಿವಿಎಸ್ ರೆಡಿಯಾನ್ ಬೈಕ್ ಹೀರೋ ಸ್ಪ್ಲೆಂಡರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಬೈಕ್. ಇದರ ಬೆಲೆ 73346 ರೂಪಾಯಿಯಿಂದ 82897 ರೂಪಾಯಿ. ಒಂದು ಲೀಟರ್ ಪೆಟ್ರೋಲ್‌ಗೆ 73 ಕಿಲೋಮೀಟರ್ ಮೈಲೇಜ್ ನೀಡಲಿದೆ. ಅತ್ಯಂತ ಆಕರ್ಷಕವಾಗಿ ಕಾಣುವ ಈ ಬೈಕ್ ಹಲವು ಬಣ್ಣಗಳಲ್ಲಿ ಲಭ್ಯವಿದೆ. 109.7cc ಎಂಜಿನ್ ಹೊಂದಿದ್ದು, 18 ಇಂಚಿನ ವ್ಹೀಲ್ ನೀಡಲಾಗಿದೆ. ಇನ್ನು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಇತರ ಕೆಲ ಫೀಚರ್ಸ್ ಇದರಲ್ಲಿದೆ.
66
ಟಿವಿಎಸ್ ಸ್ಟಾರ್ ಸಿಟಿ ಪ್ಲಸ್
ಟಿವಿಎಸ್ ಕಡಿಮೆ ಬೆಲೆಯಲ್ಲಿ ಹಲವು ಬೈಕ್ ನೀಡುತ್ತಿದೆ. ಈ ಪೈಕಿ ಸ್ಟಾರ್ ಸಿಟಿ ಪ್ಲಸ್ ಕೂಡ ಒಂದು. ಇದರ ಬೆಲೆ 72,500 ರೂಪಾಯಿ, ಇನ್ನು ಡಿಸ್ಕ್ ಬ್ರೇಕ್ ಬೈಕ್ ಬೆಲೆ 75,200 ರೂಪಾಯಿ (ಎಕ್ಸ್ ಶೋ ರೂಂ). 109.7cc ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಒಂದು ಲೀಟರ್ ಪೆಟ್ರೋಲ್‌ಗೆ 62.71 ಕಿಲೋಮೀಟರ್ ಮೈಲೇಜ್ ನೀಡಲಿದೆ.