ಬಜೆಟ್‌ ಸ್ನೇಹಿ ಎಲೆಕ್ಟ್ರಿಕ್‌ ಸ್ಕೂಟರ್‌ ಬಯಸುವವರಿಗೆ ಒಳ್ಳೆಯ ಆಯ್ಕೆ ಟಿವಿಎಸ್ ಆರ್ಬಿಟರ್

Chethan Kumar   | Kannada Prabha
Published : Jan 06, 2026, 03:09 PM IST

ಬಜೆಟ್‌ ಸ್ನೇಹಿ ಎಲೆಕ್ಟ್ರಿಕ್‌ ಸ್ಕೂಟರ್‌ ಬಯಸುವವರಿಗೆ ಒಳ್ಳೆಯ ಆಯ್ಕೆ ಟಿವಿಎಸ್ ಆರ್ಬಿಟರ್, i ಕ್ಯೂಬ್‌ನಿಂದ ಆರ್ಬಿಟರ್‌ವರೆಗೆ ಬರುವಲ್ಲಿಗೆ ಟಿವಿಎಸ್‌ ತನ್ನ ಎಲೆಕ್ಟ್ರಿಕ್‌ ಸ್ಕೂಟರ್‌ ವಿಭಾಗದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ ಮೊದಲನೆಯದು ವಿನ್ಯಾಸ. ಎರಡನೆಯದು ತಂತ್ರಜ್ಞಾನ. 

PREV
15
ಟಿವಿಎಸ್ ಆರ್ಬಿಟರ್

ವಿನ್ಯಾಸದಲ್ಲಿ ಬಹಳಷ್ಟು ಹೊಸತುಗಳನ್ನು ಪರಿಚಯಿಸುತ್ತಿರುವ ಟಿವಿಎಸ್‌ ಇಲ್ಲಿ ಬಾಕ್ಸಿ ಮತ್ತು ಮಿನಿಮಲಿಸ್ಟಿಕ್ ವಿನ್ಯಾಸದ ಕಡೆಗೆ ವಾಲಿದೆ. ಇದರ ಮುಂಭಾಗದಲ್ಲಿ ಮನಮೋಹಕ ಎಲ್‌ಇಡಿ ಲೈಟ್ ಸ್ಟ್ರಿಪ್ ಬಳಸಿದ್ದು, ಸೊಗಸಾಗಿ ಕಾಣುತ್ತದೆ. ಟಿವಿಎಸ್ ಯಾವಾಗಲೂ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದ್ದು, ಇದರಲ್ಲಿಯೂ ಸಾಕಷ್ಟು ರೈಡರ್‌ ಸ್ನೇಹಿ ಫೀಚರ್‌ಗಳನ್ನು ಒದಗಿಸಿದೆ.

25
ಅತ್ಯಾಧುನಿಕ ಫೀಚರ್

ಬ್ಲೂಟೂತ್ ಮೂಲಕ ನ್ಯಾವಿಗೇಷನ್, ಕಾಲ್ ಅಲರ್ಟ್ ಫೀಚರ್‌ ದೊರೆಯುತ್ತದೆ. ಎತ್ತರದ ರಸ್ತೆಯಲ್ಲಿ ಹೋಗಿ ನಿಲ್ಲಿಸಿದರೆ ಬ್ರೇಕ್‌ ಹಿಡಿಯುವ ಅಗತ್ಯವಿಲ್ಲ, ಹಿಲ್-ಹೋಲ್ಡ್ ಅಸಿಸ್ಟ್ ಫೀಚರ್‌ ಇರುವುದರಿಂದ ಸ್ಕೂಟರ್‌ ಮುಂದೆ ಅಥವಾ ಹಿಂದೆ ಚಲಿಸುವುದಿಲ್ಲ. ರಿವರ್ಸ್ ಪಾರ್ಕಿಂಗ್ ಅಸಿಸ್ಟ್ ಇದರ ಮತ್ತೊಂದು ಹೆಚ್ಚುಗಾರಿಕೆ.

35
ಟಿವಿಎಸ್ ಆರ್ಬಿಟರ್ ಮೋಡ್

3.1 ಕೆಡಬ್ಲ್ಯೂ ಸಾಮರ್ಥ್ಯದ ಲೀಥಿಯಂ-ಐಯಾನ್ ಬ್ಯಾಟರಿ ಹೊಂದಿರುವ ಈ ಸ್ಕೂಟರ್‌ ಪೂರ್ಣ ಚಾರ್ಜ್‌ ಮಾಡುವುದಕ್ಕೆ ಆಸುಪಾಸು ಆರು ಗಂಟೆ ಸಾಕು. ಅರ್ಜೆಂಟಿಗೆ ಶೇ.80ರಷ್ಟು ಚಾರ್ಜ್‌ ಮಾಡುವುದಾದರೆ 4 ಗಂಟೆ ಬೇಕು. ಇದು ಭಯಂಕರ ವೇಗ ಬಯಸುವವರಿಗೆ ಅಲ್ಲ. ಇದರಲ್ಲಿ ಇಕೋ ಮತ್ತು ಸಿಟಿ ಎಂಬ ಎರಡು ಮೋಡ್‌ಗಳಿವೆ. ಇಕೋದಲ್ಲಿ 45 ಕಿಮೀನಷ್ಟು ವೇಗದಲ್ಲಿ ಸಾಗುತ್ತದೆ. ಅದಕ್ಕಿಂತ ಜಾಸ್ತಿ ವೇಗ ಮತ್ತು ಪವರ್‌ ಬೇಕಿದ್ದರೆ ಸಿಟಿ ಮೋಡ್‌ ಬಳಸಬೇಕು. ಆ ಮೋಡ್‌ನಲ್ಲಿ ಗರಿಷ್ಠ ವೇಗ ಗಂಟೆಗೆ 65 ಕಿಮೀ. ದಕ್ಕುತ್ತದೆ. ಇದೊಂದು ಶಾಂತವಾದ ಸ್ಕೂಟರ್‌. ಹಾಗಾಗಿ ಶಾಂತ ಮನಸ್ಥಿತಿಯವರ ಜೊತೆ ಬೇಗ ಹೊಂದಿಕೊಳ್ಳುತ್ತದೆ.

45
ಸ್ಟೋರೇಜ್ ಸೌಲಭ್ಯ

ಸೀಟ್‌ ಕೆಳಗೆ 34 ಲೀ ಸ್ಟೋರೇಜ್‌ ಸೌಲಭ್ಯವಿದ್ದು, ಎರಡು ಹೆಲ್ಮೆಟ್‌ ಇಡಬಹುದು. ತರಕಾರಿ ತುಂಬಿಕೊಂಡು ಕೊಂಡೊಯ್ಯಬಹುದು. ಹಾಗಾಗಿ ದೈನಂದಿನ ಬಳಕೆಗೆ, ಫ್ಯಾಮಿಲಿಗೆ ಹೆಚ್ಚು ಸೂಕ್ತ. ಒಂದು ಬಾರಿ ಚಾರ್ಜ್ ಮಾಡಿದರೆ 158 ಕಿ.ಮೀ (ಐಡಿಸಿ) ರೇಂಜ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸ್ಟೋರೇಜ್ ಸೌಲಭ್ಯ

55
ಆರ್ಬಿಟರ್ ಮೈಲೇಜ್

ರಸ್ತೆ ಮತ್ತು ರೈಡಿಂಗ್‌ ಶೈಲಿಗೆ ಅನುಗುಣವಾಗಿ ಈ ಕಿಮೀ ಬದಲಾಗುತ್ತದೆ. ಕನಿಷ್ಠ 120 ರಿಂದ 130 ಕಿಮೀ ರೇಂಜ್‌ ದೊರೆಯುತ್ತದೆ.ಅಷ್ಟೇನೂ ಭಾರವಿರದ, ಸೊಗಸಾದ ವಿನ್ಯಾಸದ, ಆಕರ್ಷಕ ತಂತ್ರಜ್ಞಾನ ಹೊಂದಿರುವ ಈ ಸ್ಕೂಟರ್‌ನ ಆನ್‌ರೋಡ್‌ ಬೆಲೆ ರೂ.1,06,251. ಬಜೆಟ್ ಸ್ನೇಹಿ ಎಲೆಕ್ಟ್ರಿಕ್‌ ಸ್ಕೂಟರ್‌ ಹುಡುಕುವವರಿಗೆ ಬೆಸ್ಟು.

ಆರ್ಬಿಟರ್ ಮೈಲೇಜ್

Read more Photos on
click me!

Recommended Stories