ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್, ಇದೇ ತಿಂಗಳ ಕೊನೆಯ ವಾರದಲ್ಲಿ ಕೈನೆಟಿಕ್ ಡಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ಆರಂಭಗೊಳ್ಳುತ್ತಿದೆ. ಇದರ ಬೆಲೆ, ಮೈಲೇಜ್ ಎಷ್ಟು
ಒಂದು ಕಾಲದಲ್ಲಿ ಭಾರತದಲ್ಲಿ ಕೈನೆಟಿಕ್ ಸ್ಕೂಟರ್ ಅತ್ಯಂತ ಜನಪ್ರಿಯವಾಗಿತ್ತು. ಬಜಾತ್ ಚೇತರ್ ಬಳಿಕ ಭಾರತದಲ್ಲಿ ಸ್ಕೂಟರ್ ಯುಗ ಆರಂಭವಾಗಿದ್ದೇ ಕೈನೆಟಿಕ್ ಮೂಲಕ. ಗೇರ್ ಜಂಜಾಟದ ಬದಲು ಕೈನೆಟಿಕ್ ಗೇರ್ ಇಲ್ಲದೆ ಸ್ಕೂಟರ್ ಲಾಂಚ್ ಮಾಡಿ ಜನಪ್ರಿಯವಾಗಿತ್ತು. ಆದರೆ ಬಳಿಕ ಹಲವು ಪೈಪೋಟಿ, ಪ್ರತಿಸ್ಪರ್ಧೆಯಿಂದ ಕೈನೆಟಿಕ್ ಮಾರುಕಟ್ಟೆಯಿಂದ ದೂರ ಉಳಿದಿತ್ತು. ಇದೀಗ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುತ್ತಿದೆ.
25
ಕೇವಲ 1,000 ರೂಪಾಯಿ ನೀಡಿ ಬುಕ್ ಮಾಡಿ
ಕೈನೆಟಿಕ್ ಡಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೊಂದು ವಿಶೇಷ ಅಂದರೆ ,ಕೇವಲ 1,000 ರೂಪಾಯಿ ನೀಡಿ ಸ್ಕೂಟರ್ ಬುಕಿಂಗ್ ಮಾಡಲು ಸಾಧ್ಯವಿದೆ. ಅತೀ ಕಡಿಮೆ ಬೆಲೆಯ ಬುಕಿಂಗ್ ಆಫರ್ ನೀಡಿದೆ. ಈ ಮೂಲಕ ಕೈನೆಟಿಕ್ ಪ್ರಿಯರು ಅಡೆ ತಡೆ ಇಲ್ಲದೆ ಸ್ಕೂಟರ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
35
ಕೈನೆಟಿಕ್ ಡಿಎಸ್ ಎಲೆಕ್ಟ್ರಿಕ್ ಸ್ಕೂಟರ್
ಕೈನೆಟಿಕ್ ಜುಲೈ ತಿಂಗಳಲ್ಲಿ ಡಿಎಸ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಇದೀಗ ಇದೇ ತಿಂಗಳ ಕೊನೆಯ ವಾರದಲ್ಲಿ ಡೆಲಿವರಿ ಆರಂಭಗೊಳ್ಳಲಿದೆ. 200ಕ್ಕೂ ಹೆಚ್ಚು ಡೀಲರ್‌ಶಿಪ್ ಮೂಲಕ ಕೈನೆಟಿಕ್ ಸ್ಕೂಟರ್ ಡೆಲಿವರಿ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬುಕಿಂಗ್ ಮಾಡಿ ಕಾಯುತ್ತಿರುವ ಗ್ರಾಹಕರಿಗೆ ಶೀಘ್ರದಲ್ಲೇ ಸ್ಕೂಟರ್ ಕೈಸೇರಲಿದೆ.
ಹಲವು ವರ್ಷಗಳ ಬಳಿಕ ಕೈನೆಟಿಕ್ ಸ್ಕೂಟರ್ ಮರಳಿ ಭಾರತದ ರಸ್ತೆಗಿಳಿಯುತ್ತಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 116 ಕಿಲೋಮೀಟರ್ ಮೈಲೇಜ್ ನೀಡಲಿದೆ. ಗರಿಷ್ಠ ಸ್ಪೀಡ್ 90 ಕಿಲೋಮೀಟರ್ ಪ್ರತಿ ಗಂಟೆಗೆ. 2.6 kWh LFP ಬ್ಯಾಟರಿ ಬ್ಯಾಕ್ ಬಳಕೆ ಮಾಡಲಾಗಿದೆ.
116 ಕಿಲೋಮೀಟರ್ ಮೈಲೇಜ್
55
ಕೆೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್ ಎರಡು ವೇರಿಯೆಂಟ್‌ನಲ್ಲಿ ಲಭ್ಯವಿದೆ. ಕೈನೆಟಿಕ್ DX ಹಾಗೂ DX+ ವೇರಿಯೆಂಟ್‌ನಲ್ಲಿ ಲಭ್ಯವಿದೆ. ಡಿಎಕ್ಸ್ ಬೆಲೆ 1,11,499 ರೂಪಾಯಿ ಹಾಗೂ ಡಿಎಕ್ಸ್ ಪ್ಲಸ್ ಬೆಲೆ 1,17,499 ರೂಪಾಯಿ (ಎಕ್ಸ್ ಶೋ ರೂಂ).