ಪ್ರೇಮಿಗಳ ದಿನಾಚರಣೆ ಡಿಸ್ಕೌಂಟ್ ಆಫರ್ ಘೋಷಿಸಿದ ಒಲಾ, 84,999 ರೂಗೆ ಸ್ಕೂಟರ್ !

Published : Feb 16, 2024, 05:37 PM IST

ಫೆಬ್ರವರಿ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಂಪರ್ ಆಫರ್ ಘೋಷಿಸಿದೆ. ಮೂರು ಮಾಡೆಲ್ ಸ್ಕೂಟರ್ ಮೇಲೆ 25,000 ರೂಪಾಯಿ ಡಿಸ್ಕೌಂಟ್ ಮಾಡಿದೆ. ಇದರಿಂದ ಒಲಾ S1 X+ ಸ್ಕೂಟರ್ 84,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

PREV
18
ಪ್ರೇಮಿಗಳ ದಿನಾಚರಣೆ ಡಿಸ್ಕೌಂಟ್ ಆಫರ್ ಘೋಷಿಸಿದ ಒಲಾ, 84,999 ರೂಗೆ ಸ್ಕೂಟರ್ !

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಹಲವು ಕಂಪನಿಗಳು ಇವಿ ಸ್ಕೂಟರ್ ಉತ್ಪಾದಿಸುತ್ತಿದೆ. ಮುಂಚೂಣಿಯಲ್ಲಿರುವ ಕಂಪನಿಗಳ ಪೈಕಿ ಒಲಾ ಎಲೆಕ್ಟ್ರಿಕ್ ಕೂಡ ಒಂದು. ಇದೀಗ ಒಲಾ ಗ್ರಾಹಕರಿಗೆ ಆಫರ್ ಘೋಷಿಸಿದೆ.
 

28

ಪ್ರೇಮಿಗಳ ದಿನಾಚರಣೆ ತಿಂಗಳಾಗಿರುವ ಫೆಬ್ರವರಿಯಲ್ಲಿ ಒಲಾ ಡಿಸ್ಕೌಂಟ್ ಆಫರ್ ಘೋಷಿಸಿದೆ.ಫೆಬ್ರವರಿ 16 ರಿಂದ ಫೆಬ್ರವರಿ 29ರ ವರೆಗೆ ಡಿಸ್ಕೌಂಟ್ ಆಫರ್ ಚಾಲ್ತಿಯಲ್ಲಿರಲಿದೆ.

38

ಒಲಾ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಒಲಾ S1 Pro,  S1 ಏರ್ ಹಾಗೂ S1 X+ ಮಾಡೆಲ್‌ಗೆ ರಿಯಾಯಿತಿ ಆಫರ್ ಘೋಷಿಸಲಾಗಿದೆ. ಗರಿಷ್ಠ 25,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

48

ಫೆಬ್ರವರಿ ಡಿಸ್ಕೌಂಟ್ ಆಫರ್‌ನಿಂದ ಒಲಾ S1 X+  ಸ್ಕೂಟರ್ ಬೆಲೆ 84,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ(ಎಕ್ಸ್ ಶೋ ರೂಂ). ಡಿಸ್ಕೌಂಟ್ ಆಫರ್‌ಗೂ ಮೊದಲು ಈ ಸ್ಕೂಟರ್ ಬೆಲೆ 1,09,999 ರೂಪಾಯಿ  ಆಗಿತ್ತು.

58

ಒಲಾ  S1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1,19,999 ರೂಪಾಯಿಯಿಂದ ಡಿಸ್ಕೌಂಟ್ ಬಳಿಕ 1,04,999 ರೂಪಾಯಿಗೆ(ಎಕ್ಸ್ ಶೋ ರೂಂ ಬೆಲೆ) ಇಳಿಕೆಯಾಗಿದೆ.

68

ಒಲಾ S1 Pro ಸ್ಕೂಟರ್ ಡಿಸ್ಕೌಂಟ್ ಬೆಲೆ 1,29,999 ರೂಪಾಯಿ(ಎಕ್ಸ್ ಶೋರೂಂ). ಡಿಸ್ಕೌಂಟ್ ಆಫರ್‌ಗೂ ಮೊದಲು ಈ ಸ್ಕೂಟರ್ ಬೆಲೆ 1,47,499 ರೂಪಾಯಿ ಆಗಿತ್ತು.

78

ಈ ಆಫರ್ ಜೊತೆಗೆ ಸುಲಭ ಕಂತು, ಅತೀ ಕಡಿಮೆ ಬಡ್ಡಿದರ ಶೇಕಡಾ 7.99ರಲ್ಲಿ ಸಾಲ ಸೌಲಭ್ಯ, ಶೂನ್ಯ ಪ್ರೊಸೆಸಿಂಗ್ ಶುಲ್ಕ ಸೇರಿದಂತೆ ಹಲವು ಇತರ ಸೌಲಭ್ಯಗಳಳನ್ನು ಓಲಾ ನೀಡುತ್ತಿದೆ.

88

ಜನವರಿ ತಿಂಗಳಲ್ಲಿ ಒಲಾ S1 X+  ಸ್ಕೂಟರ್ ಮೇಲೆ ಇದೇ ರೀತಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿತ್ತು. 20,000 ರೂಪಾಯಿ ಡಿಸ್ಕೌಂಟ್ ಹಾಗೂ ವಾರೆಂಟ್ ಆಫರ್ ಘೋಷಿಸಿತ್ತು.

click me!

Recommended Stories