ಸಂಕ್ರಾಂತಿ ಸಂಭ್ರಮದಲ್ಲಿ ಹೊಸ ಜಾವಾ 350 ಬೈಕ್ ಲಾಂಚ್, ಕ್ಲಾಸ್ ಡಿಸೈನ್-ಗರಿಷ್ಠ ಸುರಕ್ಷತೆ!

First Published | Jan 16, 2024, 6:43 PM IST

ಪರ್ಫಾಮೆನ್ಸ್, ಸುರಕ್ಷತೆ, 178ಮೀ ಗ್ರೌಂಡ್ ಕ್ಲಿಯರೆನ್ಸ್, ಡ್ಯುಯಲ್-ಚಾನೆಲ್ ಎಬಿಎಸ್ ಸೇರಿದಂತೆ ಹಲವು ವಿಶೇಷತೆ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದ ಜಾವಾ 350 ಬೈಕ್ ಬಿಡುಗಡೆಯಾಗಿದೆ. 

ಭಾರತದಲ್ಲಿ ಜಾವಾ ಮೋಟಾರ್ ಬೈಕ್ ಹೊಸ ಸಂಚಲನ ಸೃಷ್ಟಿಸಿದೆ. ಜಾವಾ ರೇಸಿಂಗ್ ಟ್ರಡಿಶನ್‌ಗೆ ಹೊಂದಿಕೊಳ್ಳುವ ಹಾಗೂ ಮರುವಿನ್ಯಾಸ ಮಾಡಿರುವ ಹೊಚ್ಚ ಹೊಸ ಜಾವಾ 350 ಬೈಕ್ ಬಿಡುಗಡೆ ಮಾಡಲಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಮೂಲಕ ಅತ್ಯುತ್ತಮ ಬ್ರೇಕಿಂಗ್, ಹೊಸ ವಿನ್ಯಾಸ, ಅತ್ಯುತ್ತಮ ನಿರ್ವಹಣೆ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.

ನೂತನ ಜಾವಾ 350 ಬೈಕ್  ಮರೂನ್, ಕಪ್ಪು ಮತ್ತು ಹೊಸ ಮಿಸ್ಟಿಕ್ ಆರೆಂಜ್‌ ಬಣ್ಣಗಳಲ್ಲಿ ಲಭ್ಯವಿದೆ. ಅದರ ಪಾಲಿಶ್ ಮಾಡಿದ ಕ್ರೋಮ್ ಮತ್ತು ಗೋಲ್ಡನ್ ಪಿನ್‌ಸ್ಟ್ರೈಪ್‌ಗಳೊಂದಿಗೆ ಸೌಂದರ್ಯ ಮತ್ತಷ್ಟು ಹೆಚ್ಚಿದೆ.ನೂತನ ಬೈಕ್ ಬೆಲೆ 2,14,950 ರೂಪಾಯಿ (ಎಕ್ಸ್ ಶೋ ರೂಂ ದೆಹಲಿ)
 

Tap to resize

ನೂತನ ಬೈಕ್ ಉದ್ದ ವೀಲ್‌ಬೇಸ್ ಮತ್ತು ಕ್ಲಾಸ್-ಲೀಡಿಂಗ್ 178 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಹೊಂದಿದೆ. ಉತ್ತಮ ರೈಡ್ ಗುಣಮಟ್ಟವನ್ನು ಒದಗಿಸುತ್ತದೆ. ಕ್ಲಾಸಿಕ್ ಜಾವಾ ವಿನ್ಯಾಸದ ನೀತಿಗೆ ಅನುಗುಣವಾಗಿ ಆರಾಮ ಮತ್ತು ಅತ್ಯುತ್ತಮ ಶೈಲಿಯ ಸಮತೋಲನವನ್ನು ನೀಡುವಂತೆ ಬೈಕ್‌ ರೂಪಿಸಲಾಗಿದೆ.

240ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಕಾಂಟಿನೆಂಟಲ್ ಡ್ಯುಯಲ್-ಚಾನೆಲ್ ಎಬಿಎಸ್ ಹೊಂದಿದೆ. 34ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿರುವ ಜಾವಾ 350, ಲೋ-ಎಂಡ್ ಮತ್ತು ಮಿಡ್-ರೇಂಜ್ ಪಂಚ್‌ನೊಂದಿಗೆ ತ್ವರಿತವಾದ ಆಫ್-ಲೈನ್ ಆಕ್ಸಲೇಷನ್ ಅನ್ನು ನೀಡುತ್ತದೆ.

28.2ಎನ್ಎಂ ಟಾರ್ಕ್ ರೆವ್ ರೇಂಜ್‌ ಮತ್ತು 22.5 ಪಿಎಸ್ ಪವರ್ ಉತ್ಪಾದಿಸುತ್ತದೆ. ಅಸಿಸ್ಟ್ ಮತ್ತು ಸ್ಲಿಪ್ (ಎ&ಎಸ್) ಕ್ಲಚ್  ಹೊಂದಿದೆ. ಇದರಿಂದ ಸುಲಭ ರೈಡಿಂಗ್ ಹಾಗೂ ಅಡೆತಡೆ ಇಲ್ಲದ ಪ್ರಯಾಣ ನೀಡಲಿದೆ.  

ಆಧುನಿಕ ಇಂಜಿನಿಯರಿಂಗ್,  ಉತ್ಸಾಹಭರಿತ ಕಾರ್ಯಕ್ಷಮತೆ, ಪವರ್ ಫುಲ್, ರಗಡ್ ಹಾಗೂ  ಥ್ರಿಲ್ಲಿಂಗ್ ರೈಡಿಂಗ್ ಅನುಭವವನ್ನು ಹೊಚ್ಚ ಹೊಸ ಜಾವಾ 350 ಬೈಕ್ ನೀಡಲಿದೆ.  

ಭವಿಷ್ಯದ ಕಡೆಗೆ ಸಾಗುವಾಗ ಅದರ ಲೆಜೆಂಡರಿ ಪರಂಪರೆಯನ್ನು ಗೌರವಿಸುವ ಮೆಶಿನ್ ಅನ್ನು ನಾವು ರಚಿಸಿದ್ದೇವೆ. ಕ್ಲಾಸಿಕ್ ನೋಟ ಮತ್ತು ಆಧುನಿಕ ಕ್ರಿಯಾತ್ಮಕತೆಯ ಮಿಶ್ರಣ ಹೊಂದಿದೆ ಎಂದು ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಸಿಇಓ ಆಶಿಶ್ ಸಿಂಗ್ ಜೋಶಿ ಹೇಳಿದ್ದಾರೆ.

ಭಾರತದಲ್ಲಿ ಜಾವಾ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ.  ಜಾವಾ ಪೋರ್ಟ್‌ಫೋಲಿಯೊದಲ್ಲಿ ಜಾವಾ 350, ಜಾವಾ 42, ಜಾವಾ 42 ಬಾಬರ್ ಮತ್ತು ಜಾವಾ ಪೆರಾಕ್ ಬೈಕ್‌ಗಳು ಲಭ್ಯವಿದೆ. 

Latest Videos

click me!