120 ಕಿ.ಮೀ ಮೈಲೇಜ್, ಕೇವಲ 999 ರೂಪಾಯಿಗೆ ಮನೆಗೆ ತನ್ನಿ ಹೊಚ್ಚ ಹೊಸ ಇ ಬೈಕ್!

First Published | Jan 2, 2024, 3:44 PM IST

ಗರಿಷ್ಠ ಮೈಲೇದ್, ಕಡಿಮೆ ಬೆಲೆ, ಅತ್ಯಾಕರ್ಷಕ ಸೇರಿದಂತೆ ಹಲವು ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಲಭ್ಯವಿದೆ. ಇದೀಗ ಅತೀ ಕಡಿಮೆ ದರದಲ್ಲಿ ಎಲಕ್ಟ್ರಿಕ್ ಬೈಕ್ ಬಿಡುಗಡೆಯಾಗಿದೆ. ಕೇವಲ 999 ರೂಪಾಯಿ ಪಾವತಿಸಿ ಇ ಬೈಕ್ ಮನೆಗೆ ತರಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿ.ಮೀ ಮೈಲೇಜ್ ನೀಡಲಿದೆ.

ಎಲೆಕ್ಟ್ರಿಕ್ ವಾಹನದಲ್ಲಿ ಭಾರತದಲ್ಲಿ ಹೊಸ ಕ್ರಾಂತಿಯಾಗಿದೆ. ಪ್ರತಿ ದಿನ ಹೊಸ ಹೊಸ ವಾಹನ ಬಿಡುಗಡೆಯಾಗುತ್ತಿದೆ. ಇದೀಗ ಭಾರತದ ಇವಿ ಸೆಕ್ಟರ್‌ನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಇ ಬೈಕ್ ಬಿಡುಗಡೆಯಾಗಿದೆ. ಹೌದು, ಮೋಟೋವೋಲ್ಟ್ ಕಂಪನಿ ಹೊಚ್ಚ ಹೊಸ ಇ ಬೈಕ್ ಬಿಡುಗಡೆ ಮಾಡಿದೆ.
 

ಮೋಟೋವೋಲ್ಟ್ ಕಂಪನಿ ಇದೀಗ URBN e bike(ಯುಆರ್‌ಬಿಎನ್ ಇ ಬೈಕ್) ಬಿಡುಗಡೆ ಮಾಡಿದೆ.  URBN e bike ಹಲವು ವಿಶೇಷತೆ ಹೊಂದಿದೆ. ಈ ಪೈಕಿ ಇದರ ಬೆಲೆಯೂ ಅತ್ಯಂತ ಆಕರ್ಷವಾಗಿದೆ.
 

Tap to resize

URBN e bike ಬೈಕ್‌ನ್ನು ಕೇವಲ 999 ರೂಪಾಯಿ ಡೌನ್‌ ಪೇಮೆಂಟ್ ನೀಡಿ ಮನೆಗೆ ತರಲು ಸಾಧ್ಯವಿದೆ. ಇ ಬೈಕ್ ಬೆಲೆ 49,999 ರೂಪಾಯಿಂದ 54,999 ರೂಪಾಯಿ.

 URBN e bike ಬೈಕ್ ರೈಡ್ ಮಾಡಲು ಲೈಸೆನ್ಸ್ ಅಗತ್ಯವಿಲ್ಲ. ಕಾರಣ ಇದು ಗಂಟೆಗೆ 25 ಕಿಲೋಮೀಟರ್ ಗರಿಷ್ಠ ವೇಗ ಹೊಂದಿದೆ. ಪರಿಸರ ಪೂರಕವಾಗಿರುವ ನೂತನ ಬೈಕ್ ಹೊಸ ಸಂಚಲನ ಸೃಷ್ಟಿಸಿದೆ.

ಇ ಬೈಕ್ ರೀತಿಯಲ್ಲಿ ಮಾತ್ರವಲ್ಲ, ಸೈಕಲ್ ರೀತಿಯಲ್ಲೂ ಬಳಸಬಹುದು. ಪೆಡಲ್ ಮಾಡುತ್ತಾ ಸಾಮಾನ್ಯ ಸೈಕಲ್ ರೀತಿಯಲ್ಲೂ ಬಳಸುವ ಮಲ್ಟಿ ಮೋಡ್ ಇ ಬೈಕ್ ಇದಾಗಿದೆ

URBN e bike ಸಂಪೂರ್ಣ ಚಾರ್ಜ್ ಮಾಡಲು 4 ಗಂಟೆ ಸಮಯ ತೆಗೆದುಕೊಳ್ಳಲಿದೆ.  ಇ ಬೈಕ್ ಖರೀದಿ ಬಳಿಕ ಇದರ ರಿಜಿಸ್ಟ್ರೇಶನ್ ಅಗತ್ಯವಿಲ್ಲ. ಹೀಗಾಗಿ ಬಹುತೇಕ ಶೋ ರೂಂ ಬೆಲೆಯಲ್ಲೇ ಇ ಬೈಕ್ ಕೈಸೇರಲಿದೆ.

ಸ್ಮಾರ್ಟ್‌ಫೋನ್ ಆ್ಯಪ್ಲೀಕೇಶನ್, ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ವಿಶೇಷತೆಗಳು ಇದರಲ್ಲಿದೆ. ಕೈಗೆಟುಕುವ ದರ, ಸುಲಭ ಡೌನ್‌ಪೇಮೆಂಟ್ ಮೂಲಕ ಎಲ್ಲರ ಕೈಗೆಟುಕುವಂತೆ ಮೋಟೋವೋಲ್ಟ್ ಕಂಪನಿ ಇ ಬೈಕ್ ಬಿಡುಗಡೆ ಮಾಡಿದೆ. 
 

Latest Videos

click me!