ಬೆಂಗಳೂರಿನ ಸ್ಟಾರ್ಟ್ಅಪ್ ಸಿಂಪಲ್ ಎನರ್ಜಿ ಇದೀಗ ಹೊಚ್ಚ ಹೊಸ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ವಿನ್ಯಾಸ, ಉತ್ತಮ ಫರ್ಮಾಮೆನ್ಸ್ ಹೊಂದಿರುವ ಸಿಂಪಲ್ ಡಾಟ್ ಒನ್ ಇವಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಸಿಂಪಲ್ ಡಾಟ್ ಒನ್ ಇವಿ ಬಿಡುಗಡೆಗೆ ಸಂಭ್ರದಲ್ಲಿರುವ ಸಿಂಪಲ್ ಎನರ್ಜಿ 99,999 ರೂಪಾಯಿಗೆ ಸ್ಕೂಟರ್ ಲಾಂಚ್ ಮಾಡಿದೆ. ಇತರ ಇವಿ ಸ್ಕೂಟರ್‌ಗಳಿಗೆ ಹೋಲಿಸಿದರೆ ಕೈಗೆಟುಕುವ ದರದಲ್ಲಿ ಲಭ್ಯವಿದೆ.
ಆರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ಸ್ಕೂಟರ್ ಲಭ್ಯವಿದೆ. ಶೀಘ್ರದಲ್ಲೇ ಕರ್ನಾಟಕದ ಇತರ ಪಟ್ಟಣಗಳಲ್ಲೂ ಜೊತೆಗೆ ಇತರ ರಾಜ್ಯಗಳ ನಗರ, ಪಟ್ಟಣಗಳಲ್ಲೂ ಬಿಡುಗಡೆಯಾಗಲಿದೆ.
ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಸಿಂಪಲ್ ಡಾಟ್ ಒನ್ ಎಲೆಕ್ಟ್ರಿಕ್ ಸ್ಕೂಟರ್ 160 ಕಿ.ಮೀ ಮೈಲೇಜ್ ನೀಡಲಿದೆ. ಈ ಮೂಲಕ ಈ ಸೆಗ್ಮೆಂಟ್‌ನಲ್ಲಿರುವ ಇತರ ಇವಿ ಸ್ಕೂಟರ್‌ಗೆ ಭಾರಿ ಪೈಪೋಟಿ ನೀಡಿದೆ.
0-40 ಕಿ.ಮೀ ವೇಗವನ್ನು ಕೇವಲ 2.77 ಸೆಕೆಂಡ್‌ನಲ್ಲಿ ಪಡೆಯಲಿದೆ. 12 ಇಂಚಿನ ವ್ಹೀಲ್ ಹೊಂದಿರುಲ ಸಿಂಪಲ್ ಡಾಟ್ ಒನ್ ಇವಿ, 90-90 ಟ್ಯೂಬ್‌ಲೆಸ್ ಟೈಯರ್ ಹೊಂದಿದೆ.
3.7kwh ಬ್ಯಾಟರಿ ಪ್ಯಾಕ್ ಹೊಂದಿದ್ದು, 8.5kw ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಜೊತೆಗೆ 35 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
ನಾಲ್ಕು ಬಣ್ಣಗಳಲ್ಲಿ ಸಿಂಪಲ್ ಒನ್ ಡಾಟ್ ಇವಿ ಲಭ್ಯವಿದೆ. ನಮ್ಮ ರೆಡ್, ಬ್ರೇಜನ್ ಬ್ಲಾಕ್, ಗ್ರೇಸ್ ವೈಟ್ ಹಾಗೂ ಅಜ್ಯುರ್ ಬ್ಲೂ ಬಣ್ಣದಲ್ಲಿ ಸ್ಕೂಟರ್ ಲಭ್ಯವಿದೆ.
ಸ್ಕೂಟರ್ ಖರೀದಿಸುವಾಗ 750W ಚಾರ್ಜರ್ ಕೂಡ ಲಭ್ಯವಾಗಲಿದೆ. ಬಿಡುಗಡೆ ಬಳಿಕ ಮಾತನಾಡಿರುವ ಸಂಸ್ಥಾಪಕ ಹಾಹೂ ಸಿಇಒ ಸುಹಾಸ್ ರಾಜ್‌ಕುಮಾರ್, ಜನರ ಬೇಡಿಕೆಗೆ ತಕ್ಕಂತೆ ಸ್ಕೂಟರ್ ವಿನ್ಯಾಸ ಮಾಡಲಾಗಿದೆ ಎಂದಿದ್ದಾರೆ.