ಬಂಪರ್ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ, S1 Xಪ್ಲಸ್ ಸ್ಕೂಟರ್ ಬೆಲೆ 20,000 ರೂ ಕಡಿತ!

Published : Dec 02, 2023, 05:33 PM ISTUpdated : Dec 02, 2023, 05:35 PM IST

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಬಂಪರ್ ಆಫರ್ ನೀಡಲಾಗಿದೆ. ನಿಗದಿತ ಅವದಿಗೆ ಓಲಾ S1 Xಪ್ಲಸ್ ಬೆಲೆ ಭಾರಿ ಕಡಿತಗೊಂಡಿದೆ. 151 ಕಿ.ಮೀ ಮೈಲೇಜ್ ಹೊಂದಿರುವ S1 Xಪ್ಲಸ್ ಸ್ಕೂಟರ್ ಇದೀಗ ಕೈಗೆಟುಕುವ ದರದಲ್ಲಿ ಲಭ್ಯವಿದೆ.

PREV
18
ಬಂಪರ್ ಡಿಸ್ಕೌಂಟ್ ಆಫರ್ ಘೋಷಿಸಿದ ಓಲಾ, S1 Xಪ್ಲಸ್ ಸ್ಕೂಟರ್ ಬೆಲೆ 20,000 ರೂ ಕಡಿತ!

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಹೊಸ ದಾಖಲೆ ಬರೆದಿದೆ. 2023ರ ನವೆಂಬರ್ ತಿಂಗಳಲ್ಲಿ ಓಲಾ 30,000 ಸ್ಕೂಟರ್ ಮಾರಾಟವಾಗುವ ಮೂಲಕ ಹೊಸ ದಾಖಲೆ ಬರೆದಿದೆ.

28

ಇದೀಗ ಡಿಸೆಂಬರ್ ತಿಂಗಳು ಹಾಗೂ ಹೊಸ ವರ್ಷದ ಮಾರಾಟದಲ್ಲಿ ಮತ್ತಷ್ಟು ಮೈಲಿಗಲ್ಲು ದಾಖಲಿಸಲು ಓಲಾ ಬಂಪರ್ ಡಿಸ್ಕೌಂಟ್ ಆಫರ್ ಘೋಷಿಸಿದೆ. ಓಲಾ S1 Xಪ್ಲಸ್ ಬೆಲೆ ಭಾರಿ ಕಡಿತಗೊಂಡಿದೆ.

38

ಓಲಾ S1 Xಪ್ಲಸ್ ಸ್ಕೂಟರ್ ಬೆಲೆಯಲ್ಲಿ 20,000 ರೂಪಾಯಿ ಕಡಿತಗೊಳಿಸಲಾಗಿದೆ. ಈ ಮೂಲಕ 1,09,999 ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಸ್ಕೂಟರ್ ಇದೀಗ 89,999 ರೂಪಾಯಿ(ಎಕ್ಸ್ ಶೋ ರೂಂ) ಲಭ್ಯವಿದೆ.

48

ಈ ರಿಯಾಯಿತಿ ಆಫರ್ ಡಿಸೆಂಬರ್ ತಿಂಗಳಲ್ಲಿ ಮಾತ್ರ ಲಭ್ಯವಿದೆ. ಹೀಗಾಗಿ ಈ ತಿಂಗಳು ಓಲಾ S1 Xಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸ್ಕೂಟರ್ ಲಭ್ಯವಾಗಲಿದೆ.
 

58

ಓಲಾ S1 Xಪ್ಲಸ್ ಸ್ಕೂಟರ್ 3kWH ಬ್ಯಾಟರಿ ಪ್ಯಾಕ್ ಹೊಂದಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 151 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
 

68

ಮನೆಯ 500 kW ಪ್ಲಗ್ ಸಾಕೆಟ್ ಮೂಲಕ ಓಲಾ S1 Xಪ್ಲಸ್ ಸ್ಕೂಟರ್ ಚಾರ್ಜ್ ಮಾಡುವುದಾದರೆ 7.4 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಒಲಾ ಇದೀಗ ದೇಶದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ.

78

ಓಲಾ S1 Xಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ ವೇಗ 90 ಕಿ.ಮಿ ಪ್ರತಿ ಗಂಟೆಗೆ. ಇನ್ನು 0-40 ಕಿ.ಮೀ ವೇಗವನ್ನು 3.3 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. 0-60 ಕಿ.ಮೀ ವೇಗವನ್ನು 5.5 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ.

88

ರೈಡಿಂಗ್‌ಗೆ ನಾರ್ಮಲ್, ಇಕೋ ಹಾಗೂ ಸ್ಪೋರ್ಟ್ಸ್ ಮೊಡ್ ಆಯ್ಕೆಗಳು ಲಭ್ಯವಿದೆ. 5 ಇಂಚಿನ ಎಲ್‌ಸಿಡಿ ಡಿಸ್‌ಪ್ಲೆ, ರಿಮೂಟ್ ಬೂಟ್ ಅನ್‌ಲಾಕ್, ಬ್ಲೂಟೂತ್, ಜಿಪಿಎಸ್ ಕೆನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ.

Read more Photos on
click me!

Recommended Stories