350 ಸಿಸಿ ಬೈಕ್ ಲಿಸ್ಟ್, ಕೇವಲ 1.38 ಲಕ್ಷ ರೂ.ನಿಂದ ಆರಂಭ, ಸ್ಟೈಲಿಶ್ ಜೊತೆ ದಿನನಿತ್ಯ ಬಳಕೆಗೂ ಸೈ

Published : Aug 10, 2026, 11:55 AM IST

350 ಸಿಸಿ ಬೈಕ್ ಎಂದ ತಕ್ಷಣವೇ ರಾಯಲ್ ಎನ್‌ಫೀಲ್ಡ್ ನೆನಪಿಗೆ ಬರುತ್ತದೆ. ಕೇವಲ 1.38 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುವ 350 ಸಿಸಿ ಬೈಕ್ ಲಿಸ್ಟ್ ಇಲ್ಲಿದೆ. ಪ್ರತಿನಿತ್ಯ ಬಳಕೆ, ಲಾಂಗ್ ರೈಡ್‌ಗೂ ಈ ಬೈಕ್ ಬೆಸ್ಟ್ ಎನಿಸಿಕೊಂಡಿದೆ.

PREV
15
ಕಡಿಮೆ ಬೆಲೆಯಲ್ಲಿ 350 ಸಿಸಿ ಬೈಕ್

ಭಾರತದಲ್ಲಿ 350 ಸಿಸಿ ಬೈಕ್‌ ಮೇಲೆ ಯುವ ಸಮೂಹ ಮುಗಿಬೀಳುತ್ತಿದೆ. ಪ್ರತಿ ದಿನ ಕಚೇರಿ ಸೇರಿದಂತೆ ನಿತ್ಯ ಬಳಕೆಗೆ ಹಾಗೂ ವೀಕೆಂಡ್‌ಗಳಲ್ಲಿ ಲಾಂಗ್ ರೈಡ್ ಹೋಗಲು ಒಂದೇ ಬೈಕ್ ಬಳಸುತಿದ್ದಾರೆ. ಜೊತೆಗೆ ಆರಾಮದಾಯಕ ಪ್ರಯಾಣ, ಹೆಚ್ಚು ಸ್ಟೈಲೀಶ್ ಲುಕ್ ಈ ಬೈಕ್ ನೀಡುತ್ತದೆ. ಮೈಲೇಜ್ ಸೇರಿದಂತೆ ನಿರ್ವಹಣೆ ಕೂಡ ಇತರ ಬೈಕ್‌ಗಳಂತೆ ತಲೆನೋವಿಲ್ಲದೆ ಮಾಡಲು ಸಾಧ್ಯವಿದೆ.

25
ರಾಯಲ್ ಎನ್‌ಫೀಲ್ಡ್ ಹಂಟರ್ 350

ರಾಯಲ್ ಎನ್‌ಫೀಲ್ಡ್ 350 ಹಂಟರ್ ಬೈಕ್ ಸಿಟಿ ಹಾಗೂ ಲಾಂಗ್ ರೈಡ್‌ಗ ಹೇಳಿ ಮಾಡಿಸಿದ ಬೈಕ್. ಕ್ಲಾಸಿಕ್‌ನಷ್ಟು ಹೆವಿ ಇಲ್ಲ, ಲೈಟ್ ಹಾಗೂ ಶಾರ್ಟ್ ಆಗಿರುವ ಹಂಟರ್ ಮಹಿಳೆಯರಿಗೂ ರೈಡ್ ಮಾಡಲು ಸಹಕಾರಿಯಾಗಿದೆ. ಹಂಟರ್ 350 ಬೆಲೆ 1.38 ಲಕ್ಷ ರೂಪಾಯಿಯಿಂದ (ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. 36 ಕಿಲೋಮೀಟರ್ ಮೈಲೇಜ್ ನೀಡಲಿದೆ.

35
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‌ಫೀಲ್ಡ್ ಬೈಕ್ ಪೈಕಿ ಅತೀ ಹೆಚ್ಚು ಮಾರಾಟ ದಾಖಲೆ ಹಾಗೂ ಅತೀ ಹೆಚ್ಚು ಮಂದಿ ಇಷ್ಟಪಡುವ ಕ್ಲಾಸಿಕ್ 350 ಬೈಕ್ ಬೆಲೆ 1.81 ಲಕ್ಷರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಟಾಪ್ ಮಾಡೆಲ್ ಬೆಲೆ 2.16 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಪ್ರತಿ ನಿತ್ಯ ಬಳಕೆಗೆ, ಲಾಂಗ್ ರೈಡ್ ಸೇರಿದಂತೆ ಎಲ್ಲಾ ರೀತಿಯಲ್ಲೂ ಕ್ಲಾಸಿಕ್ 350 ಬೈಕ್ ಉತ್ತಮವಾಗಿದೆ. 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡಲಿದೆ.

45
ಹೊಂಡಾ ಹೈನೆಸ್ ಸಿಬಿ 350 ಬೈಕ್

ಹೊಂಡಾ ಹೈನೆಸ್ ಸಿಬಿ 350 ಬೈಕ್ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನಗಳಿಂದ ಹೈನೆಸ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಆರಂಭಿಕ ಬೆಲೆ 1.93 ಲಕ್ಷ ರೂಪಾಯಿಯಿಂದ ಟಾಪ್ ಮಾಡೆಲ್ 1.98 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಸ್ಲಿಪ್ಪರ್ ಕ್ಲಚ್, ಬ್ಲೂಟೂತ್ ವೈಬ್ಪೇಶನ್ ಫ್ರೀ ಎಂಜಿನ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.

55
ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350

ರಾಯಲ್ ಎನ್‌ಫೀಲ್ಡ್ ಪೈಕ್ ಪೈಕಿ ಹೊಸ ರೂಪದಲ್ಲಿ ಅವತರಿಸಿರುವ ಮೆಟಿಯೋರ್ 350 ಬೈಕ್ ಬೆಲೆ 1.96 ಲಕ್ಷ ರೂಪಾಯಿಯಿಂದ ಗರಿಷ್ಠ 2.16 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). 40 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕ್ರೂಸರ್ ಟೈಪ್ ಬೈಕ್ ಇದಾಗಿದ್ದು ಹಲವು ಬಣ್ಣಗಳಲ್ಲಿ ಲಭ್ಯವಿದೆ.

Read more Photos on
click me!

Recommended Stories