ಬೈಕ್ ಖರೀದಿಸುವವರಿಗೆ ಶಾಕ್; ಹೀರೋ ಸ್ಪೆಂಡರ್ ಪ್ಲಸ್ ಬೆಲೆ ಹೆಚ್ಚಳ, ಯಾವ್ಯಾವ ಬೈಕ್‌ ಎಷ್ಟು ಏರಿಕೆ?

Published : Nov 26, 2026, 11:16 AM IST

Hero Splendor Plus Price Hiked in India ಭಾರತದ ಜನಸಾಮಾನ್ಯರ ನೆಚ್ಚಿನ ಬೈಕ್ ಆಗಿರುವ ಹೀರೋ ಸ್ಪೆಂಡರ್ ಪ್ಲಸ್ ಬೆಲೆ ಹೆಚ್ಚಳ ಮಾಡಿ ಜನರಿಗೆ ಶಾಕ್ ನೀಡಿದೆ. ಯಾವ್ಯಾವ ಬೈಕ್ ಬೆಲೆ ಎಷ್ಟು ಹೆಚ್ಚಾಗಿದೆ ಎಂದು ತಿಳಿಯಲು, ಮುಂದೆ ಓದಿ.

PREV
14
ಹೀರೋ ಸ್ಪೆಂಡರ್ ಪ್ಲಸ್ ಬೆಲೆ ಏರಿಕೆ

ಭಾರತದಲ್ಲಿ ಜನಸಾಮಾನ್ಯರ ಜನಪ್ರಿಯ ಬೈಕ್ ಎಂದರೆ ಹೀರೋ. ಹೀರೋ ಬೈಕ್‌ಗಳಿಗೆ ಭಾರತದಲ್ಲಿ ಮೊದಲಿನಿಂದ ತುಂಬಾ ಬೇಡಿಕೆಯಿದೆ. ಭಾರತದ ಗ್ರಾಮೀಣ ಪ್ರದೇಶದ ರೈತರಿಂದ ಹಿಡಿದು, ಪಟ್ಟಣದ ಸಣ್ಣಪುಟ್ಟ ವ್ಯಾಪಾರಿಗಳವರೆಗೂ ಮೊದಲ ಆಯ್ಕೆ ಹೀರೋ ಬೈಕ್ ಆಗಿದೆ. ಇದಕ್ಕೆ ಕಾರಣ ಕಡಿಮೆ ಬೆಲೆ, ಮೈಲೇಜ್ ಹೆಚ್ಚು, ರೈಡಿಂಗ್ ಮಾಡಲು ಸುಲಭವಾಗಿರುವುದರಿಂದ ಸಾಮಾನ್ಯ ಜನರ ನೆಚ್ಚಿನ ಬೈಕ್ ಆಗಿದೆ. ಇದೇ ಕಾರಣಕ್ಕೆ ಇತರೆ ಕಂಪನಿಗಳ ಬೈಕ್‌ಗಳಿಗೆ ಹೋಲಿಸಿದರೆ ಹೀರೋ ಕಂಪನಿಯ ಬೈಕ್‌ಗಳು ಮಾರುಕಟ್ಟೆಯಲ್ಲಿ ಸಿಕ್ಕಪಟ್ಟೆ ಮಾರಾಟವಾಗುತ್ತಿವೆ. ಆದರೆ ಈ ನಡುವೆ ಕಂಪನಿ ತೆಗೆದುಕೊಕೊಂಡಿರುವ ಒಂದು ನಿರ್ಧಾರ ಸಾಮಾನ್ಯ ಜನರಿಗೆ ದೊಡ್ಡ ಶಾಕ್ ನೀಡಿದೆ.

24
ಹೀರೋ ಬೈಕ್ ಬೆಲೆ ಹೆಚ್ಚಳ ಶಾಕ್

ಇತರೆ ಕಂಪನಿಯ ಬೈಕ್‌ಗಳಿಗೆ ಹೋಲಿಸಿದರೆ ಹೀರೋ ಕಂಪನಿಯ ಬೈಕ್‌ಗಳು ಬೆಲೆ ಕಡಿಮೆ. ಹೀಗಾಗಿ ಕಡಿಮೆ ಬಜೆಟ್‌ನ ಉತ್ತಮ ಬೈಕ್‌ಗಳಾದ ಹೀರೋ ಸ್ಪೆಂಡರ್ ಪ್ಲಸ್ ಬೈಕ್‌ ಖರೀದಿಸಲು ಜನರು ಇಷ್ಟಪಡುತ್ತಾರೆ. ಆದರೆ ಕಂಪನಿಯು ಇತ್ತೀಚೆಗೆ ಹೀರೋ ಬೈಕ್‌ಗಳ ಬೆಲೆ ಹೆಚ್ಚಳ ಮಾಡಲು ಮುಂದಾಗಿದೆ. ಯಾವ ವಾಹನಗಳ ಬೆಲೆ ಹೆಚ್ಚಿಸುತ್ತದೆ. ಮೊದಲಿದ್ದ ಬೆಲೆ ಎಷ್ಟು? ಪ್ರಸ್ತುತ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಬೈಕ್ ಹಿಂದೆ ಅಪ್ಪ-ಅಮ್ಮ, ಹೆಂಡ್ತಿ-ಮಕ್ಕಳನ್ನು ಕೂರಿಸಿಕೊಂಡು ಪ್ರಯಾಣಿಸಲು ಕಂಫರ್ಟೆಬಲ್ ಸೀಟು ಇರುವ ಟಾಪ್ 5 ಬೈಕ್‌ಗಳಿವು!

34
ಹೀರೋ ಬೆಲೆ ಹೆಚ್ಚಳ: ಯಾವ ಬೈಕ್‌ಗೆ ಎಷ್ಟು ಹೆಚ್ಚಳ

ಹೀರೋ ಕಂಪನಿಯು ನ್ಯೂ ಎಡಿಷನ್ ಸ್ಪೆಂಡರ್ ಪ್ಲಸ್ ಗೆ ಹೊಸ ಹೆಸರು ನೀಡಿದೆ. ಜೊತೆಗೆ ಈ ಬೈಕ್ ಬೆಲೆ 3,086 ರಷ್ಟು ಹೆಚ್ಚಿಸಿದೆ. ಇದರಿಂದ ಬೈಕ್‌ನ ಬೆಲೆಯು 81,666 ರೂಪಾಯಿಗಳಷ್ಟಾಗಿದೆ. ಇನ್ನು ಹೊಸ ಎಡಿಷನ್ ಬೈಕ್ ಮ್ಯಾಟ್ ಗ್ರೇ, ಕ್ಯಾಂಡಿ ಬ್ಲೇಜಿಂಗ್ ರೆಡ್, ಮ್ಯಾಟ್ ವರ್ನಿಯರ್ ಗ್ರೇ ಎಂಬ 3 ಹೊಸ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಂದಿದ್ದು, ಜನರು ತಮಗೆ ಇಷ್ಟವಾದ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸ್ಪ್ಲೆಂಡರ್ ಪ್ಲಸ್ ಡ್ರಮ್ ಬೆಲೆ ರೂ.78,912, i3S ಬೆಲೆ ರೂ.80,045 ಆಗಿದ್ದರೆ, Hero Splendor+ 125 Million Edition ಬೆಲೆ ರೂ.81,666 ನಿಂದ ರೂ.1,135 ಹೆಚ್ಚಳವಾಗಿದೆ. ಎಕ್ಸ್-ಶೋರೂಂ ಬೆಲೆಗಳ ಹೊರತಾಗಿಯೂ, ಆನ್-ರೋಡ್ ಬೆಲೆಗಳು ಆಯಾ ನಗರ, ರಾಜ್ಯಗಳಿಗೆ ಸಂಬಂಧಿಸಿದಂತೆ ವ್ಯತ್ಯಾಸವಾಗಬಹುದು.

44
ಸ್ಪ್ಲೆಂಡರ್ ಪ್ಲಸ್ ಫ್ಲೆಕ್ಸ್, XTEC ಬೆಲೆ ಎಷ್ಟು?

ಫ್ಲೆಕ್ಸ್-ಇಂಧನ ತಂತ್ರಜ್ಞಾನ(Flex-fuel technology) ಹೊಂದಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಫ್ಲೆಕ್ಸ್(Hero Splendor Plus Flex) ಬೆಲೆ 1,332 ರೂಪಾಯಿಗಳಷ್ಟು ಹೆಚ್ಚಾಗಿದ್ದು, ಈಗ ಎಕ್ಸ್ ಶೋ ರೂಂ ಬೆಲೆ 84,042 ರೂ.ಗಳಿಗೆ ತಲುಪಿದೆ. ಇದರ ಜೊತೆಗೆ, ವಿಶೇಷ ಫೀಚರ್ಸ್ ಹೊಂದಿರುವ ಸ್ಪ್ಲೆಂಡರ್ ಪ್ಲಸ್ XTEC ಡ್ರಮ್ ಬ್ರೇಕ್ ವರಿಯೆಂಟ್ ಬೆಲೆ 82,418 ರೂ.ಗಳಿಗೆ ತಲುಪಿದೆ. ಮುಂಭಾಗದ ಡಿಸ್ಕ್ ಬ್ರೇಕ್ ಇರುವ ಬೈಕ್ ಬೆಲೆ 85,461 ರೂ.ಗಳಿಗೆ ತಲುಪಿದೆ. XTEC 2.0 ಬೆಲೆ 84,549 ರೂ.ಗಳಿಗೆ ಹೆಚ್ಚಿದೆ.

Read more Photos on
click me!

Recommended Stories