ಬೆಂಗಳೂರಿನಲ್ಲಿ ಮಾಲಿನ್ಯ ಮಕ್ತ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ ಮಾಡಿದ ಇಜೀ ಸೈಕಲ್!

First Published Feb 17, 2024, 6:09 PM IST

ಮಾಲಿನ್ಯ ಮುಕ್ತ ಹಾಗೂ ಸುಲಭ ಸಾರಿಗೆಗೆ ಇಜೀ ಸೈಕಲ್ ಇದೀಗ ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ ಮಾಡಿದೆ. ಇದರ ವಿಶೇಷ ಅಂದರೆ ನೀವು ಪೆಡಲ್ ಕೂಡ ಮಾಡಬಹುದು, ಅಥವಾ ಎಲೆಕ್ಟ್ರಿಕ್ ಮೋಟಾರ್ ಮೂಲಕ ಪ್ರಯಾಣ ಮಾಡಬಹುದು. ಸಂಪೂರ್ಣ ಮೇಡ್ ಇನ್ ಇಂಡಿಯಾ ಈ ಎಲೆಕ್ಟ್ರಿಕ್ ಬೈಸಿಕಲ್ ಭಾರಿ ಸಂಚಲನ ಸೃಷ್ಟಿಸಿದೆ.
 

ಸಂಪೂರ್ಣವಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಎಲೆಕ್ಟ್ರಿಕ್ ಬೈಸಿಕಲನ್ನು ಇಜಿ ಸೈಕಲ್ ಸಂಸ್ಥೆ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಮಾಲಿನ್ಯ ಮುಕ್ತ, ಸುಲಭ ಸಾರಿಗೆ ಹಾಗೂ ಕೈಗೆಟುಕುವ ದರದಲ್ಲಿ ಈ ಎಲೆಕ್ಟ್ರಿಕ್ ಬೈಸಿಕಲ್ ಲಭ್ಯವಿದೆ.
 

 ನಗರ ಪ್ರದೇಶದಲ್ಲಿನ ಟ್ರಾಫಿಕ್ ಕಿರಿಕಿರಿ, ಮಾಲಿನ್ಯಗಳಿಂದ ಓಡಾಟ ಕಷ್ಟ. ಆದರೆ ಇಜೀ ಸೈಕಲ್ ಎಲೆಕ್ಟ್ರಿಕ್ ಸೈಕಲ್‌ಗಳಲ್ಲಿ ಸುಲಭವಾಗಿ ಪ್ರಯಾಣ ಮಾಡಬಹುದು.

ಸದೃಢವಾದ ಫ್ರೇಮ್ ಗಳು, ಸುಧಾರಿತ ಬ್ಯಾಟರಿ ತಂತ್ರಜ್ಞಾನ ಮತ್ತು ಶಕ್ತಿಯುತ ಮೋಟಾರ್ ಗಳನ್ನು ಹೊಂದಿರುವ ನಮ್ಮ ಎಲೆಕ್ಟ್ರಿಕ್ ಸೈಕಲ್ ಗಳು ಸರಿಸಾಟಿ ಇರದ ರೈಡಿಂಗ್ ಅನುಭವ ನೀಡುತ್ತವೆ.
 

ಸವಾಲಿನ ಪ್ರದೇಶಗಳಲ್ಲಿ ಸಂಚರಿಸುವುದರೊಂದಿಗೆ ನಗರದ ಬೀದಿಗಳಲ್ಲಿ ಪ್ರಯತ್ನರಹಿತವಾಗಿ ಸಂಚರಿಸಲು ಇಡೀ ಸೈಕಲ್ ಎಲೆಕ್ಟ್ರಿಕ್ ಸೈಕಲ್ ಗಳು  ಉತ್ತಮ ಸಾರಿಗೆಯಾಗಿದೆ.

ಈ ಸೈಕಲ್ ಗಳ ಪ್ರಮುಖ ವಿಶೇಷತೆ ಎಂದರೆ ಲಿ-ಅಯಾನ್ ರೀಚಾರ್ಜಬಲ್ ಬ್ಯಾಟರಿ ಬಳಸಿದ್ದು ಚಾರ್ಜಿಂಗ್‌ಗಾಗಿ ಹೊರ ತೆಗೆದು ಚಾರ್ಜ್ ಮಾಡಹುದು. ಅವು 50 ಕಿ.ಮೀ. ಶ್ರೇಣಿಯಲ್ಲಿ 30-40 ಎನ್.ಎಂ. ಟಾರ್ಕ್ ಉತ್ಪಾದಿಸುತ್ತಿದ್ದು ಪೂರ್ಣ ಚಾರ್ಜ್ ಆದಾಗ 50 ಕಿ.ಮೀ. ನೀಡುತ್ತವೆ .

ಪ್ರಯಾಣದ ನಡುವೆ ನೀವು ಪೆಡಲ್ ಮಾಡಿದರೆ 70 ಕಿ.ಮೀ.ವರೆಗೆ ಮೈಲೇಜ್ ನೀಡುತ್ತವೆ. ರಾಲ್ಸನ್ ಬಲೂನ್ ಟೈರ್ ಗಳು ಸಸ್ಪೆನ್ಷನ್ ನಲ್ಲಿ ಹೆಚ್ಚುವರಿ ಬೆಂಬಲ ನೀಡುತ್ತಿದ್ದು ನಿಮ್ಮ ರೈಡ್ ಅನ್ನು ಸುಲಭಗೊಳಿಸುತ್ತದೆ. 

ಈಜಿ ಸೈಕಲ್ ಎಲೆಕ್ಟ್ರಿಕ್ ಬೈಸಿಕಲ್ ಉತ್ತಮ ರೈಡ್ ಪರಿಸ್ಥಿತಿಗಳಿಗೆ ಎಕನಾಮಿಕಲ್, ಸ್ಟಾಂಡರ್ಡ್ ಮತ್ತು ಪವರ್ ಮೋಡ್ ಗಳಲ್ಲಿ 7 ಗೇರ್ ಗಳನ್ನು ಹೊಂದಿದೆ. ಹೀಗಾಗಿ ಪ್ರಯಾಣ ಆನಂದದಾಯಕ.

ನಮ್ಮ ಎಲೆಕ್ಟ್ರಿಕ್ ಸೈಕಲ್ ಗಳು ಶಬ್ದ ಮಾಲಿನ್ಯ ರಹಿತ,   ಶೂನ್ಯ ಎಮಿಷನ್ ಗಳನ್ನು ಉತ್ಪಾದಿಸುತ್ತವೆ, ಇದರಿಂದ ಸ್ವಚ್ಛ ಗಾಳಿ ಮತ್ತು ಆರೋಗ್ಯಕರ ಭೂಗ್ರಹಕ್ಕೆ ಕೊಡುಗೆ ನೀಡುತ್ತವೆ. ನಮ್ಮ ವಿದ್ಯುತ್ ಸೈಕಲ್ ಗಳು ಪರಿಸರ ಸ್ನೇಹಿ ಮಾತ್ರವೇ ಅಲ್ಲದೆ ಅವುಗಳನ್ನು ಎಲ್ಲರ ಗಮನ ಸೆಳೆಯುವಂತೆ ವಿನ್ಯಾಸಗೊಳಿಸಲಾಗಿದ್ದು, ವಿಸ್ತಾರ ಆದ್ಯತೆಗಳು ಮತ್ತು ಜೀವನಶೈಲಿಗಳಿಗೆ ಪೂರೈಕೆಗೆ ವಿನ್ಯಾಸಗೊಳಿಸಲಾಗಿದೆ. ಎಂದು ಇಜೀ ಸೈಕಲ್ಸ್ ಸಂಸ್ಥಾಪಕ ಪುರುಷೋತ್ತಮ್ ನಾಯಕ್ ಹೇಳಿದ್ದಾರೆ.

click me!