ಒಂದು ಲೀಟರ್‌ಗೆ 75 ಕಿ.ಮೀ, ಇಲ್ಲಿವೆ ನಿಮ್ಮ ಖರ್ಚು ಕಡಿಮೆ ಮಾಡುವ ಕಡಿಮೆ ಬೆಲೆ ಬೈಕ್

Published : Jan 28, 2026, 06:33 PM IST

ಒಂದು ಲೀಟರ್‌ಗೆ 75 ಕಿ.ಮೀ, ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್ ನಿಮ್ಮ ಪೆಟ್ರೋಲ್ ಖರ್ಚು ಉಳಿಸುತ್ತದೆ. ಭಾರತದಲ್ಲಿ ಈ ರೀತಿ 75 ಕಿ.ಮಿ ಮೈಲೇಜ್ ನೀಡುವ ಕೈಗೆಟುಕುವ ದರದ ಬೈಕ್ ವಿವರ ಇಲ್ಲಿದೆ. 

PREV
15
ಅತೀ ಕಡಿಮೆ ನಿರ್ವಹಣಾ ವೆಚ್ಚದ ಬೈಕ್

ದಿನನಿತ್ಯದ ಓಡಾಟಕ್ಕೆ ಬೈಕ್ ಹುಡುಕುತ್ತಿದ್ದೀರಾ? ಕಡಿಮೆ ಬೆಲೆ, ಹೆಚ್ಚು ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚದ ಬೈಕ್‌ಗಳಿಗೆ ಭಾರತದಲ್ಲಿ ಬೇಡಿಕೆಯಿದೆ. ರೂ.60,000-70,000 ಬೆಲೆಯ ಕೆಲವು ಬೈಕ್‌ಗಳು 65-75 ಕಿ.ಮೀ. ಮೈಲೇಜ್ ನೀಡುತ್ತವೆ.

25
ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೂ ಸೂಕ್ತ

ಈ ಮೈಲೇಜ್ ಬೈಕ್‌ಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಳಕೆಗೆ ಸೂಕ್ತವಾಗಿವೆ. ಕಚೇರಿ, ವ್ಯಾಪಾರ, ಕೃಷಿ ಕೆಲಸಗಳಿಗೆ ಹೊಂದಿಕೊಳ್ಳುತ್ತವೆ. ಕೆಲವು ಮಾಡೆಲ್‌ಗಳು ಫುಲ್ ಟ್ಯಾಂಕ್‌ನಲ್ಲಿ 700-800 ಕಿ.ಮೀ. ವರೆಗೆ ಚಲಿಸುತ್ತವೆ.

35
ಹೀರೋ ಎಚ್‌ಎಫ್ ಡೀಲಕ್ಸ್

ಈ ಪಟ್ಟಿಯಲ್ಲಿ ಹೀರೋ ಎಚ್‌ಎಫ್ ಡೀಲಕ್ಸ್ ಪ್ರಮುಖವಾಗಿದೆ. 97.2cc ಎಂಜಿನ್‌ನ ಈ ಬೈಕ್, ಸರಾಸರಿ 65 ಕಿ.ಮೀ/ಲೀ ಮೈಲೇಜ್ ನೀಡುತ್ತದೆ. ಇದರ ಸರಳ ನಿರ್ವಹಣೆಯಿಂದಾಗಿ ನಗರ ಮತ್ತು ಹಳ್ಳಿಗಳಲ್ಲಿ ಇದು ಹೆಚ್ಚು ಜನಪ್ರಿಯವಾಗಿದೆ.

45
ಟಿವಿಎಸ್ ಸ್ಪೋರ್ಟ್

ಟಿವಿಎಸ್ ಸ್ಪೋರ್ಟ್ ಬೈಕ್ ಕೂಡ ಯುವಕರಲ್ಲಿ ಜನಪ್ರಿಯವಾಗಿದೆ. ಕಡಿಮೆ ತೂಕದ ಈ ಬೈಕ್, ನಗರದ ದಟ್ಟಣೆಯಲ್ಲಿ ಓಡಿಸಲು ಸುಲಭ. ಇದು ಪ್ರತಿ ಲೀಟರ್‌ಗೆ ಸುಮಾರು 70 ಕಿ.ಮೀ. ಮೈಲೇಜ್ ನೀಡುತ್ತದೆ. ಫುಲ್ ಟ್ಯಾಂಕ್‌ನಲ್ಲಿ 800 ಕಿ.ಮೀ. ಚಲಿಸುತ್ತದೆ.

55
ಹೀರೋ ಸ್ಪ್ಲೆಂಡರ್ ಪ್ಲಸ್

ಹೀರೋ ಸ್ಪ್ಲೆಂಡರ್ ಪ್ಲಸ್ ಗರಿಷ್ಠ ಮೈಲೇಜ್ ಮತ್ತು ಕಡಿಮೆ ನಿರ್ವಹಣೆಗೆ ಹೆಸರುವಾಸಿ. ಇದು 70 ಕಿ.ಮೀ/ಲೀ ಮೈಲೇಜ್ ನೀಡುತ್ತದೆ. ಹೋಂಡಾ ಶೈನ್ 100 ಮತ್ತು ಬಜಾಜ್ ಪ್ಲಾಟಿನಾ 100 ಕೂಡ ಉತ್ತಮ ಆಯ್ಕೆಗಳಾಗಿವೆ. ಪ್ಲಾಟಿನಾ 75 ಕಿ.ಮೀ/ಲೀ ಮೈಲೇಜ್ ನೀಡುತ್ತದೆ.

Read more Photos on
click me!

Recommended Stories