Wife Harassing Husband Case: ಪತ್ನಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಮಲಗಿದ್ದ ಉದ್ಯೋಗಿಯ ಮೇಲೆ ಆತನ ಪತ್ನಿ, ಸಾಕು ತಾಯಿ ಮತ್ತು ರೌಡಿಗಳು ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡ ಪತಿ, ಪತ್ನಿ ಮತ್ತು ಇತರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮನೆಯಲ್ಲಿದ್ರೆ ಪತ್ನಿಯ ಕಿರುಕುಳ ಎಂದು ವ್ಯಕ್ತಿಯೋರ್ವ ರಾತ್ರಿ ಕೆಲಸ ಮಾಡುವ ಸ್ಥಳದಲ್ಲಿಯೇ ಮಲಗಿದ್ದನು. ಈ ವಿಷಯ ತಿಳಿದು ಸಾಕು ತಾಯಿ ಜೊತೆ ಬಂದ ಮಹಿಳೆ, ಗಂಡನಿಗೆ ಥಳಿಸಿದ್ದಾಳೆ. ಇದೀಗ ಈ ಸಂಬಂಧ ಪತ್ನಿ ವಿರುದ್ಧ ಗಂಡ ದೂರು ದಾಖಲಿಸಿದ್ದಾರೆ.
25
ಮೊಹಮ್ಮದ್ ಯೂಸೂಫ್
36 ವರ್ಷದ ಮೊಹಮ್ಮದ್ ಯೂಸೂಫ್ ಎಂಬವರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ದಿನಾಂಕ 28.09.2025 ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ. ರಾತ್ರಿ ಕೆಲಸ ಮಾಡಿಕೊಂಡು ಕಚೇರಿಯಲ್ಲಿದ್ದೆ. ಮುಂಜಾನೆ ಸುಮಾರು 03.30 ಗಂಟೆಯಿಂದ 04.00 ಗಂಟೆಯ ನಡುವೆ ನನ್ನ ಹೆಂಡತಿ ಆಯೀಷಾ ಮತ್ತು ಆಕೆಯ ಸಾಕು ತಾಯಿ ನಗೀನಾ ರವರು ಹಾಗೂ ಅವರೊಂದಿಗೆ ನಾಲ್ಕು ಜನ ರೌಡಿಗಳೊಂದಿಗೆ ಬಂದಿದ್ದರು ಎಂದು ಮೊಹಮ್ಮದ್ ಯೂಸೂಫ್ ಹೇಳಿದ್ದಾರೆ.
35
ರೌಡಿಗಳಿಂದ ಹಲ್ಲೆ
ನನ್ನ ಹೆಂಡತಿ ಮತ್ತು ಆಕೆಯ ಸಾಕು ತಾಯಿಯು ನನಗೆ ಕೈಗಳಿಂದ ಹೊಡೆದಿದ್ದು, 4 ಜನ ರೌಡಿ ಆಸಾಮಿಗಳೂ ಸಹ ನನಗೆ ಕೈಗಳಿಂದ ಮತ್ತು ಮರದ ಕಟ್ಟಿಗೆಯಿಂದ ಹೊಡೆದಿದ್ದಾರೆ. ಕಚೇರಿಯಲ್ಲಿ ಟೇಬಲ್, ಪ್ರಿಂಟರ್ ಮತ್ತು ಇತರೆ ಎಲೆಕ್ನಿಕಲ್ ವಸ್ತುಗಳನ್ನು ಡಾಮೇಜ್ ಮಾಡಿದ್ದಾರೆ ಎಂದು ಮೊಹಮ್ಮದ್ ಯೂಸೂಫ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಾನು ನನ್ನನ್ನು ಕಾಪಾಡಿಕೊಳ್ಳಲು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದೆ, ಆದ್ರೆ ಅವರು ನನ್ನನ್ನು ಕಾರಿಡಾರ್ ನಲ್ಲಿ ಹಿಡಿದುಕೊಂಡು ಕೈಗಳಿಂದ ನನ್ನ ಮುಖಕ್ಕೆ ಹಾಗೂ ಮರದ ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದು ಹಲ್ಲೆ ಮಾಡಿರುತ್ತಾರೆ ಎಂದು ಮೊಹಮ್ಮದ್ ಯೂಸೂಫ್ ಹೇಳಿಕೊಂಡಿದ್ದಾರೆ.
ಹಲ್ಲೆಗೊಳಗಾದ ಮೊಹಮ್ಮದ್ ಯೂಸೂಫ್ ಬೌರಿಂಗ್ ಆಸ್ಪತ್ರೆಗೆ ಹೋಗಿ ಸಿಟಿ ಸ್ಯಾಟಿನ್ ಮತ್ತು ಇತರೆ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಠಾಣೆಗೆ ಬಂದು ಪತ್ನಿ ಆಯೇಷಾ, ಸಾಕು ತಾಯಿ ನಗೀನಾ ಮತ್ತು ಇಬ್ಬರು ಅಪರಿಚಿತರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.