ಇವರು ಯಾರು ಅಂತ ಗೊತ್ತಾಯ್ತಾ? ಮದುವೆ, ಹೆಂಡ್ತಿ ಬಗ್ಗೆ ಅಜ್ಜನ ಹೃದಯ ಸ್ಪರ್ಶಿ ಮಾತು

Published : Jul 12, 2026, 12:35 PM IST

ಬೆಂಗಳೂರಿನ 68 ವರ್ಷದ ಮೆಕ್ಯಾನಿಕಲ್ ಇಂಜಿನಿಯರ್, ಭಾರತೀಯ ರೈಲ್ವೆಯ ಮಾಜಿ ಉದ್ಯೋಗಿಯಾಗಿದ್ದು, ಸದ್ಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡುತ್ತಾ ಸರಳ ಜೀವನ ನಡೆಸುತ್ತಿದ್ದಾರೆ. ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಇವರ ಹೃದಯಸ್ಪರ್ಶಿ ಕಥೆ ವೈರಲ್ ಆಗಿದೆ.

PREV
15
ಬೆಂಗಳೂರಿನ 68 ವರ್ಷದ ವ್ಯಕ್ತಿ

ಬೆಂಗಳೂರಿನ ಮತ್ತಿಕೆರೆ ಮತ್ತು ಔಡೇಶ್ವರಿ ಭಾಗದಲ್ಲಿ ಈ ವ್ಯಕ್ತಿಯನ್ನು ನೋಡಿರುತ್ತೀರಿ. ಸುಮಾರು 68 ವರ್ಷದ ಈ ವ್ಯಕ್ತಿ ಸದ್ಯ ಹಳೆಯ ಪ್ರಿಡ್ಜ್, ವಾಷಿಂಗ್ ಮಷೀನ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ರಿಪೇರಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ಸದ್ಯ 89-90 ವರ್ಷದ ತಾಯಿ ಜೊತೆಯಲ್ಲಿ ವಾಸವಾಗಿದ್ದಾರೆ. ಇಲ್ಲವೂ ಇದ್ದು, ಏನು ಇಲ್ಲದಂತೆ ಸರಳ ಜೀವನವನ್ನು ಮೈಗೂಡಿಸಿಕೊಂಡಿದ್ದಾರೆ.

25
ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿಧರ ಮತ್ತು ರೈಲ್ವೆಯ ಮಾಜಿ ಉದ್ಯೋಗಿ

ವೈರಲ್ ವಿಡಿಯೋದಲ್ಲಿ ವ್ಯಕ್ತಿಯ ಹೆಸರು ಏನು ಎಂಬುದನ್ನು ಬಹಿರಂಗಪಡಿಸಿಲ್ಲ. ಆದ್ರೆ ಎಲ್ಲಿಯೂ ನಾನು ಬಡವ ಸಹಾಯ ಮಾಡಿ ಎಂದು ಈ ವ್ಯಕ್ತಿ ಹೇಳಿಕೊಂಡಿಲ್ಲ. ಬೆಂಗಳೂರಿನ ನಿವಾಸಿಯಾಗಿರುವ ಇವರು ಮೆಕ್ಯಾನಿಕಲ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡು ಭಾರತೀಯ ರೈಲ್ವೆಯಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ.

35
ನಾಲ್ಕು ಅಂತಸ್ತಿನ ಮನೆಯ ಮಾಲೀಕ ಇವರು

ನಿವೃತ್ತಿ ಬಳಿಕ ಬಂದ ಹಣದಿಂದ ನಾಲ್ಕು ಅಂತಸ್ತಿನ ಕಟ್ಟಡ ತೆಗೆದುಕೊಂಡಿದ್ದೇನೆ. ಅಲ್ಲಿ ನನ್ನ ಸೋದರ ವಾಸವಾಗಿದ್ದಾನೆ. ತಾಯಿಯೊಂದಿಗೆ ನಾನು ಚಿಕ್ಕ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ನನಗೆ ಬೇಕಿರೋದು ಒಂದು ಹಾಲ್ ಮತ್ತು ಕಿಚನ್. ಸ್ವಂತ ಮನೆಯಿಂದ ಇಲ್ಲಿಗೆ ಬರಲು ಆಗಲ್ಲ. ನಾನೋರ್ವ ಅಂಗವಿಕಲನಾಗಿದ್ದರಿಂದ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.

45
ಎಲೆಕ್ಟ್ರಾನಿಕ್ ಉತ್ಪನ್ನ ರಿಪೇರಿ ಮಾಡುವ ಕೆಲಸ

ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ರಿಪೇರಿ ಮಾಡಲು 1000 ರೂಪಾಯಿ ಚಾರ್ಜ್ ಮಾಡುತ್ತೇನೆ. ಇದನ್ನೇ ರಿಪೇರಿ ಮಾಡೋದಾಗಿ ಹೇಳಿ ಜನರು 1800 ರೂ. ತೆಗೆದುಕೊಳ್ಳುತ್ತಾರೆ. ನನ್ನಿಂದ ರಿಪೇರಿ ಮಾಡಿಸಿ, ನನಗೆ ಸಾವಿರ ರೂ. ಕೊಟ್ರೆ, ಇನ್ನುಳಿದ 800 ರೂಪಾಯಿ ತಾವು ತೆಗೆದುಕೊಳ್ಳುತ್ತಾರೆ ಎಂಬ ವಿಷಯವನ್ನು ಹಂಚಿಕೊಂಡರು.

ಇದನ್ನೂ ಓದಿ: ಹಳೆಯ ಮೊಬೈಲ್ ಫೋನ್‌ಗಳ ಹಿಂದೆ ಅಡಗಿದೆ ಭಾರಿ ಮೌಲ್ಯ; ಖರೀದಿದಾರರು ಇವುಗಳನ್ನು ಏನು ಮಾಡ್ತಾರೆ ಗೊತ್ತಾ?

55
ಎರಡನೇ ಮದುವೆ ಆಗಲಿಲ್ಲ ಯಾಕೆ?

ನಿಮಗೆ ಮಕ್ಕಳಿಲ್ಲವಾ ಎಂದು ವ್ಲಾಗರ್ ಕೇಳಿದಾಗ, ಈ ವ್ಯಕ್ತಿ ಹೇಳೋ ಒಂದೊಂದು ಮಾತು ಸಹ ಹೃದಯಕ್ಕೆ ಹತ್ತಿರವಾಗುತ್ತದೆ. ಮೊದಲ ಹೆರಿಗೆಯಲ್ಲಿ ನನ್ನ ಮಗಳು ಮತ್ತು ಹೆಂಡತಿ ಸಾವನ್ನಪ್ಪಿದರು. ಆನಂತರ ನಾನು ಎರಡನೇ ಮದುವೆ ಆಗಲಿಲ್ಲ ಅಂತಾರೆ. ಆ ಸಮಯದಲ್ಲಿ 2ನೇ ಮದುವೆ ಆಗಬಹುದಿತ್ತು ಅಲ್ಲವಾ ಎಂದು ಮರುಪ್ರಶ್ನೆ ಮಾಡಿದಾಗ, ಒಬ್ಬರಿಗೆ ಮಾತ್ರ ಒಮ್ಮೆ ಹೃದಯ ಕೊಡಲು ಸಾಧ್ಯ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: 5 ಲಕ್ಷ ಕೊಟ್ಟರು ನೆಮ್ಮದಿ ಇಲ್ಲ! ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಇಂಟರ್ನ್ಯಾಷನಲ್ ಶಾಲೆಯ ವಿರುದ್ಧ ಪೋಷಕರ ಗಂಭೀರ ಆರೋಪ

Read more Photos on
click me!

Recommended Stories