ಬೆಂಗಳೂರೇ ಬೆಚ್ಚಿ ಬೀಳಿಸುವಂತ ದೃಶ್ಯ : ನಡುರಸ್ತೆಯಲೇ ಯುವತಿಗೆ ಲೈಂ*ಗಿಕ ದೌರ್ಜನ್ಯ

Published : Dec 24, 2025, 10:52 AM IST

ಬೆಂಗಳೂರಿನ ಜ್ಞಾನಜ್ಯೋತಿನಗರದಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ, ನಡುರಸ್ತೆಯಲ್ಲಿ ಆಕೆಯ ಬಟ್ಟೆ ಎಳೆದು ದೌರ್ಜನ್ಯ ಎಸಗಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

PREV
15
ಬೆಚ್ಚಿ ಬೀಳಿಸುವ ದೃಶ್ಯ

ರಾಜಧಾನಿ ಬೆಂಗಳೂರು ಬೆಚ್ಚಿ ಬೀಳಿಸುವ ದೃಶ್ಯವೊಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ನಡುರಸ್ತೆಯಲ್ಲಿಯೇ ಯುವತಿಯ ಬಟ್ಟೆ ಎಳೆದಾಡಿ ಲೈಂ*ಗಿಕ ದೌರ್ಜನ್ಯ ಎಸಗಲಾಗಿದೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿಮ ಸೆರೆಯಾಗಿವೆ.

25
ಜ್ಞಾನಜ್ಯೋತಿನಗರ

ಬೆಂಗಳೂರಿನ ಉಲ್ಲಾಳ ಮುಖ್ಯರಸ್ತೆಯಲ್ಲಿ ಜ್ಞಾನಜ್ಯೋತಿನಗರದಲ್ಲಿ ಈ ಘಟನೆ ನಡೆದಿದೆ. 2024 ರ ಸೆಪ್ಟಂಬರ್ 30 ರಂದು ಇನ್‌ಸ್ಟಾಗ್ರಾಂನಲ್ಲಿ ರಕ್ಷಿತಾಗೆ (ಹೆಸರು ಬದಲಾಯಿಸಲಾಗಿದೆ) ನವೀನ್ ಎಂಬಾತ ಪರಿಚಯವಾಗಿದ್ದನು. ಇಬ್ಬರ ನಡುವೆ ಒಳ್ಳೆಯ ಸ್ನೇಹ ಇತ್ತು. ಆಗಾಗ ರಕ್ಷಿತಾ ಮತ್ತು ನವೀನ್ ನಾಗರಭಾವಿ ಬಳಿ ಭೇಟಿ ಆಗುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ತನ್ನನ್ನು ಪ್ರೀತಿಸುವಂತೆ ರಕ್ಷಿತಾಗೆ ನವೀನ್ ಪೀಡಿಸುತ್ತಿದ್ದನು.

35
ನಡುರಸ್ತೆಯಲ್ಲಿಯೇ ಎಳೆದಾಡಿದ್ದಾನೆ

ರಕ್ಷಿತಾ ಟೆಲಿಕಾಲರ್ ಕೆಲಸ ಬಿಟ್ಟು ಪಿಜಿಯಲ್ಲಿಯೇ ಉಳಿದುಕೊಂಡಿದ್ದಳು. ಆದರೂ ತನ್ನ ಪ್ರೀತಿಸುವಂತೆ ಕಿರುಕುಳ ನೀಡಲು ಆರಂಭಿಸಿದ್ದನು. ಡಿಸೆಂಬರ್ 22ರಂದು ಮಧ್ಯಾಹ್ನ 3.20ಕ್ಕೆ ಕಾರ್‌ನಲ್ಲಿ ಬಂದ ನವೀನ್, ಗೆಳತಿಯ ಬಟ್ಟೆ ಹಿಡಿದು ಎಳೆದಾಡಿದ್ದಾನೆ. ರಕ್ಷಿತಾ ಕಿರುಚಾಡಿಕೊಂಡರೂ ಬಿಡದೇ ನಡುರಸ್ತೆಯಲ್ಲಿಯೇ ಎಳೆದಾಡಿದ್ದಾನೆ.

45
ಕಿರುಕುಳ

ರಕ್ಷಿತಾಳಿಗೆ ಕಿರುಕುಳ ನೀಡಿದ ಬಳಿಕ ನವೀನ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ರಕ್ಷಿತಾ ಜೊತೆಯಲ್ಲಿ ಆಕೆಯ ಗೆಳತಿ ಇರೋದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ. ಈ ಘಟನೆ ಸಂಬಂಧ ರಕ್ಷಿತಾ, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ದೂರು ದಾಖಲಿದ್ದಾಳೆ.

ಇದನ್ನೂ ಓದಿ: ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜು ಬಂಧನ ಸನ್ನಿಹಿತ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

55
ನವೀನ್‌ ಬಂಧನ

ರಕ್ಷಿತಾ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ನವೀನ್‌ನನ್ನು ಬಂಧಿಸಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾಗಿರುವ ಅನಾಮಿಕ ಜೊತೆ ಸ್ನೇಹ ಬೆಳೆಸುವ ಮುನ್ನ ಯುವತಿಯರು ಎಚ್ಚರದಿಂದಿರಬೇಕು.

ಇದನ್ನೂ ಓದಿ: ವೀಕ್ ಡೇಸಲ್ಲಿ ಫ್ರೊಫೆಸರ್, ವೀಕೆಂಡ್‌ನಲ್ಲಿ ಖತರ್ನಾಕ್ ಕಳ್ಳಿ! ಮದುವೆ ಮನೆಗಳಲ್ಲಿ ಕನ್ನ ಹಾಕುತ್ತಿದ್ದ ಶಿಕ್ಷಕಿ!

Read more Photos on
click me!

Recommended Stories