ರಾಮಮೂರ್ತಿನಗರ ಠಾಣಾಧಿಕಾರಿ ಸತೀಶ್ ಅವರಿಗೆ ಸಂಜನಾ ಎಂಬ ಮಹಿಳೆ ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದಳು. ರಾಜಕೀಯ ನಾಯಕರ ಹೆಸರು ಬಳಸಿ, ಆತ್ಮ*ಹತ್ಯೆ ಬೆದರಿಕೆ ಹಾಕಿ ಕಿರುಕುಳ ನೀಡಿದ ಆಕೆಯನ್ನು ಪೊಲೀಸರು ಬಂಧಿಸಿದ್ದು, ಈ ಹಿಂದೆಯೂ ಆಕೆ ಇದೇ ರೀತಿ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಸತೀಶ್ ಎಂಬವರು ಮೂರು ತಿಂಗಳ ಹಿಂದೆ ರಾಮಮೂರ್ತಿನಗರದಲ್ಲಿ ಠಾಣಾಧಿಕಾರಿಯಾಗಿ ನೇಮಕವಾಗಿದ್ದರು. ಇದೇ ವರ್ಷ ಅಕ್ಟೋಬರ್ 30ರಂದು ಮೊದಲ ಬಾರಿ ಸತೀಶ್ ಅವರನ್ನು ಮಹಿಳೆ ವಾಟ್ಸಪ್ ಮೂಲಕ ಸಂಪರ್ಕ ಮಾಡಿದ್ದಳು. ದೂರುದಾರರು ಇರಬಹುದು ಎಂದು ಸತೀಶ್ ಕಾಲ್ ರಿಸೀವ್ ಮಾಡಿ ಮಾತನಾಡಿದ್ದರು. ಈ ವೇಳೆ ತನ್ನನ್ನು ಸಂಜನಾ @ ವನಜಾ ಎಂದು ಪರಿಚಯ ಮಾಡಿಕೊಂಡಿದ್ದಳು.
26
11 ಬೇರೆ ನಂಬರ್‌ಗಳಿಂದ ಕಾಲ್
ಈ ವೇಳೆ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಗೆಳೆಯರಲ್ಲಿ ಯಾರಾದ್ರು ತಮಾಷೆ ಮಾಡಿರಬಹುದು ಎಂದು ತಿಳಿದುಕೊಂಡಿದ್ದರು. ನಂತರ ಪದೇ ಪದೇ ಸುಮಾರು 11 ಬೇರೆ ಸಂಖ್ಯೆಯಿಂದ ಕರೆ ಮಾಡಿ ತನ್ನನ್ನು ಪ್ರೀತಿಸುವಂತೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಇದರಿಂದ ಸತೀಶ್ ಮಹಿಳೆಯ ಎಲ್ಲಾ ಮೊಬೈಲ್ ನಂಬರ್‌ಗಳನ್ನೇ ಬ್ಲಾಕ್ ಮಾಡಿದ್ದರು.
36
ಕಾಂಗ್ರೆಸ್ ನಾಯಕರ ಜೊತೆಗಿನ ಫೋಟೋ
ನಾನು ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದು, ಗೃಹಸಚಿವರು, ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಗಳು ಗೊತ್ತು. ಬೇಕಿದ್ರೆ ಇವರಿಂದ ಶಿಫಾರಸು ಮಾಡಿಸುವೆ ಎಂದು ಹೇಳಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಗೃಹಸಚಿವ ಪರಮೇಶ್ವರ್, ಡಿಸಿಎಂ ಡಿಕೆ ಶಿವಕುಮಾರ್, ಮೋಟಮ್ಮ , ಲಕ್ಷ್ಮಿ ಹೆಬ್ಬಾಳ್ಕರ್ ಜೊತೆಗಿನ ಪೋಟೋ ಕಳುಹಿಸಿದ್ದಾಳೆ. ಒಟ್ಟಿನಲ್ಲಿ ನನ್ನನ್ನು ಪ್ರೀತಿಸಬೇಕು ಎಂದು ಸತೀಶ್ ಅವರಿಗೆ ಪೀಡಿಸುತ್ತಿದ್ದಳು.
ಒಮ್ಮೆ ಇನ್‌ಸ್ಪೆಕ್ಟರ್ ಸತೀಶ್‌ಗೆ ಗೃಹ ಸಚಿವರ ಮತ್ತು ಡಿಸಿಎಂ ಕಚೇರಿಯಿಂದ ಕರೆ ಬಂದಿದೆ. ಸಂಜನಾ ಎಂಬ ಮಹಿಳೆಯಿಂದ ನೀವು ಏಕೆ ದೂರನ್ನು ಸ್ವೀಕರಿಸುತ್ತಿಲ್ಲ ಎಂದು ವಿಚಾರಿಸಿದ್ದಾರೆ. ಈ ವೇಳೆ ಸಂಜನಾ ಹೆಸರಿನ ಯಾವ ಮಹಿಳೆಯೂ ಠಾಣೆಗೆ ಬಂದಿಲ್ಲ ಮತ್ತು ದೂರು ಸಹ ನೀಡಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮಹಿಳೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಸತೀಶ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
56
ಠಾಣೆಗೆ ಬಂದು ಪ್ರೀತಿಸುವಂತೆ ಪೀಡಿಸುತ್ತಿದ್ಳು!
ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಸಂಬಂಧಿ ಹೆಸರಿನಲ್ಲಿ ಪೊಲೀಸ್ ಠಾಣೆಗೆ ಹೂಗುಚ್ಛ ಸಹ ಕಳುಹಿಸಿದ್ದಾಳೆ. ನವೆಂಬರ್ 7ರಂದು ಪೊಲೀಸ್ ಠಾಣೆಗೆ ಬಂದ ಸಂಜನಾ, ಮೂರು ಲವ್ ಲೆಟರ್ ಹಾಗೂ ಆತ್ಮ*ಹತ್ಯೆಗೆ ಮಾಡಿಕೊಳ್ಳಲು ತಂದಿದ್ದ 20 ಮಾತ್ರೆಗಳನ್ನು ನೀಡಿದ್ದಾಳೆ. ಆತ್ಮ*ಹತ್ಯೆ ಮಾಡಿಕೊಳ್ಳುತ್ತೇನೆ.
ತನ್ನ ಸಾವಿಗೆ ನೀವೇ (ಇನ್‌ಸ್ಪೆಕ್ಟರ್ ಸತೀಶ್) ಕಾರಣ ಎಂದು ಬರೆಯಲಾಗಿತ್ತು. ಲವ್ ಲೆಟರ್‌ನಲ್ಲಿ ಹೃದಯದ ಚಿಹ್ನೆ ತೆಗೆದು CHINI LOVE you, you love me ಎಂದು ಬರೆಯಲಾಗಿತ್ತು. ಈ ವೇಳೆ ಠಾಣೆಯ ಸಿಬ್ಬಂದಿ ಎಷ್ಟೇ ತಿಳಿಸಿ ಹೇಳಿದ್ರೂ ಮಹಿಳೆ ಮಾತ್ರ ಪ್ರೀತಿಸುತ್ತೇನೆ ನೀನು ನನ್ನನ್ನು ಪ್ರೀತಿಸಬೇಕೆಂದು ಹೇಳುತ್ತಿದ್ದಳು.
ಈ ಎಲ್ಲಾ ಘಟನೆ ನಡೆದ್ಮೇಲೆ ಮಹಿಳೆ ಹಿನ್ನೆಲೆಯನ್ನು ಕೆದಕಿದಾಗ ಈ ಹಿಂದೆಯೂ ಪೊಲೀಸ್ ಅಧಿಕಾರಿಯೊಬ್ಬರಿಗೆ ಇದೇ ರೀತಿಯಾಗಿ ಕಿರುಕುಳು ನೀಡಿರೋದು ಬೆಳಕಿಗೆ ಬಂದಿದೆ. ಇದೀಗ ಸಂಜನಾ ಉರ್ಫ್ ವನಜಾ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ಬಂಧಿಸಲಾಗಿದೆ.