ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಪ್ರಯಾಣಿಕರಿಗೆ ಗುಡ್ ನ್ಯೂಸ್

Published : Jan 13, 2026, 10:55 PM IST

ಸಂಕ್ರಾಂತಿ ದಿನ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರ್ಪಡೆ, ಮೆಟ್ರೋ ಪ್ರಯಾಣಕ್ಕೆ ಕಾಯಬೇಕಿಲ್ಲ. ಒಂದರ ಹಿಂದೆ ಒಂದರಂತೆ ಮೆಟ್ರೋ ರೈಲುಗಳು ಪ್ರಯಾಣಕರಿಗೆ ಸೇವೆ ನೀಡಲಿದೆ. ಯಾವ ಮಾರ್ಗದಲ್ಲಿ ಹೊಸ ರೈಲು ಸೇರ್ಪಡೆ? 

PREV
16
ನಮ್ಮ ಮೆಟ್ರೋಗೆ ಮತ್ತೊಂದು ರೈಲು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ದರ ಏರಿಕೆ ಶಾಕ್ ನೀಡಿದ ನಡುವೆ ಹಲವು ಗುಡ್ ನ್ಯೂಸ್ ನೀಡಿದೆ. ಬೆಂಗಳೂರು ಜನ ಇದೀಗ ಮೆಟ್ರೋ ಅವಲಂಬಿಸಿದ್ದಾರೆ.ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಜನದಟ್ಟಣೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ನಮ್ಮ ಮೆಟ್ರೋಗೆ ಮತ್ತೊಂದು ರೈಲು ಸೇರಿಕೊಳ್ಳುತ್ತಿದೆ.

26
ಹಳದಿ ಮಾರ್ಗ ಪ್ರಯಾಣಿಕರಿಗೆ ಗುಡ್ ನ್ಯೂಸ್

ನಮ್ಮ ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸಂಕ್ರಾಂತಿ ಹಬ್ಬದ ದಿನ ನಮ್ಮ ಮೆಟ್ರೋ ಬಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸೇರಿಕೊಳ್ಳುತ್ತಿದೆ. ಇದರಿಂದ ಪ್ರಯಾಣಕರು ಯೆಲ್ಲೈ ಲೈನ್‌ನಲ್ಲಿ ಮೆಟ್ರೋಗೆ ಕಾಯುವಿಕೆ ಸಮಯ ಮತ್ತಷ್ಟು ಇಳಿಕೆಯಾಗಿದೆ.

36
ಜನವರಿ 15ಕ್ಕೆ 7ನೇ ರೈಲು

ಜನವರಿ 15ಕ್ಕೆ ನಮ್ಮ ಮೆಟ್ರೋ ಯೆಲ್ಲೋ ಲೈನ್ ಮಾರ್ಗದಲ್ಲಿ 7ನೇ ರೈಲು ಸೇವೆ ಆರಂಭಿಸುತ್ತಿದೆ. ಇದರಿಂದ ಪೀಕ್ ಸಮಯದಲ್ಲಿ ಮೆಟ್ರೋ ಪ್ರತಿ ರೈಲು ಸೇವೆ ನಡುವಿನ ಸಮಯ 13 ರಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ. ಪ್ರಯಾಣಿಕರಿಗೆ ಪ್ರತಿ 10 ನಿಮಿಷಕ್ಕೊಂದು ಯೆಲ್ಲೋ ಲೈನ್ ಮೆಟ್ರೋ ಸೇವೆ ಲಭ್ಯವಾಗಲಿದೆ.

46
ಭಾನುವಾರ 15ರಿಂದ 14ನಿಮಿಷಕ್ಕೆ ಇಳಿಕೆ

ಸದ್ಯ ಯೆಲ್ಲೋ ಲೈನ್ ಮಾರ್ಗದಲ್ಲಿ 6 ರೈಲುಗಳು ಪೀಕ್ ಹವರ್‌ನಲ್ಲಿ 13 ನಿಮಿಷಕ್ಕೊಂದು ರೈಲು ಸೇವೆ ನೀಡುತ್ತಿದೆ. ಇದು 10 ನಿಮಿಷಕ್ಕೆ ಇಳಿಕೆಯಲಿದೆ.ಭಾನುವಾರ 15 ನಿಮಿಷಕ್ಕೊಂದು ರೈಲು ಸಮಯ 14 ನಿಮಿಷಕ್ಕೆ ಇಳಿಕೆಯಾಗಲಿದೆ. ಪ್ರಯಾಣಿಕರಿಗೆ ಇದು ಅತ್ಯಂತ ಅನುಕೂಲವಾಗಿದೆ.

56
ಮೆಟ್ರೋದಿಂದ ಅನಿಯಮಿತ ಪಾಸ್

ಮೊಬೈಲ್ ಕ್ಯೂಆರ್ ಕೋಡ್ ಆಧಾರಿತ ಪಾಸ್ ನೀಡಲು ಮೆಟ್ರೋ ಮುಂಜಾಗಿದೆ. ಒಂದು ದಿನ, 3 ದಿನ, 5 ದಿನಗಳ ಪಾಸ್ ವಿತರಿಸಲು ಮೆಟ್ರೋ ಮುಂದಾಗಿದೆ. ಸರದಿ ಸಾಲಿನಲ್ಲಿ ನಿಂತು ಪಾಸ್ ಖರೀದಿ ಮಾಡುವ ಕಿರಿಕಿರಿ ಇರುವುದಿಲ್ಲ. ಇದೀಗ ಕ್ಯೂಆರ್ ಕೋಡ್ ಆಧಾರಿತ ಪಾಸ್ ನೀಡಲು ಮೆಟ್ರೋ ಮುಂದಾಗಿದೆ.

ಮೆಟ್ರೋದಿಂದ ಅನಿಯಮಿತ ಪಾಸ್

66
ಮೊಬೈಲ್ ಮೂಲಕ ಪಾಸ್ ಖರೀದಿ

ಜನವರಿ 15 ರಿಂದ ಮೊಬೈಲ್ ಮೂಲಕ ನಮ್ಮ ಮೆಟ್ರೋ ಪಾಸ್ ಖರೀದಿ ಮಾಡಲು ಸಾಧ್ಯವಿದೆ. 50 ರೂಪಾಯಿ ಠೇವಣಿ ಇಡುವ ಸಮಸ್ಯೆಯೂ ಇಲ್ಲಿ ಇಲ್ಲ. ಪಾಸ್ ಬಳಿಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪ್ರಯಾಣ ಮಾಡಬಹುದು.

ಹೊಸ ದರ ಹೇಗಿದೆ

1 ದಿನಕ್ಕೆ 250ರೂ

3 ದಿನಕ್ಕೆ 550 ರೂ.

5ದಿನಕ್ಕೆ 850 ರೂ ನಿಗದಿ

Read more Photos on
click me!

Recommended Stories