Bengaluru: ತಬ್ಬಿಕೊ, ಕಿಸ್ ಮಾಡುವಂತೆ ಮೆಸೇಜ್; ಮನೆಗೆ ಬಂದು ಗಂಡ ಇದಾನಾ ಅಂತ ಕೇಳ್ತಾನೆ!

Published : Jan 13, 2026, 09:35 AM IST

ಬೆಂಗಳೂರಿನಲ್ಲಿ ಬಾಡಿಗೆದಾರ ಗೃಹಿಣಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕ ಮಧು ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.

PREV
15
ಲೈಂ*ಗಿಕ ಕಿರುಕುಳದ ಆರೋಪ

ಬೆಂಗಳೂರು:ತನ್ನ ಮನೆಯಲ್ಲಿ ಬಾಡಿಗೆಗೆ ಇರುವ ಗೃಹಿಣಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕನನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧು ಬಂಧಿತ ಮನೆಯ ಮಾಲೀಕನಾಗಿದ್ದಾನೆ.

25
ಮಾಲೀಕನ ವಿರುದ್ದ ದೂರು

ಹೊಸಪಾಳ್ಯದ ನಿವಾಸಿಯಾದ 22 ವರ್ಷದ ಗೃಹಿಣಿ ನೀಡಿದ ದೂರಿನನ್ವಯ ಮನೆಯ ಮಾಲೀಕ ಮಧು ಎಂಬಾತನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

35
ಪ್ರಕರಣದ ವಿವರ

ಮನೆಯನ್ನು ಬಾಡಿಗೆಗೆ ಪಡೆಯಲು 2025 ರ ಸೆ.24 ರಂದು ಮನೆಯ ಮಾಲೀಕ ಮಧು ಅವರಿಗೆ ಗೃಹಿಣಿ ಕರೆ ಮಾಡಿದ್ದು, ಅಂದಿನಿಂದ ಮಾಲೀಕ ಅವರ ನಂಬರ್ ಅನ್ನು ಸೇವ್ ಮಾಡಿಕೊಂಡು ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಅಲ್ಲದೇ ಕಳೆದ 15-20 ದಿನಗಳಿಂದ ಅಸಭ್ಯವಾಗಿ ಮೆಸೇಜ್ ಮಾಡಲು ಪ್ರಾರಂಭಿಸಿದ್ದ. ಇದರಿಂದ ನೊಂದ ಗೃಹಿಣಿ ತನ್ನ ಪತಿಗೆ ಈ ವಿಷಯವನ್ನು ತಿಳಿಸಿ, ಅವರ ಸಲಹೆಯಂತೆ ಮಧು ಅವರ ನಂಬರ್ ಅನ್ನು ಬ್ಲಾಕ್ ಮಾಡಿದ್ದರು.

45
ಬಾಡಿಗೆ ಕೇಳುವ ನೆಪದಲಿ ಕಿರುಕುಳ

ಜ.8ರಂದು ಗೃಹಿಣಿಯ ಪತಿ ಇಲ್ಲದಿರುವ ವೇಳೆಯಲ್ಲಿ ಮಧು, ಬಾಡಿಗೆ ಕೇಳುವ ನೆಪದಲಿ ಮನೆಗೆ ಬಂದು ನಿನ್ನ ಗಂಡ ಮನೆಯಲ್ಲಿ ಇದ್ದಾರೋ? ಇಲ್ಲವೋ? ಎಂದು ಕೇಳಿದ್ದು, ಅದಕ್ಕೆ ಗೃಹಿಣಿ ನನ್ನ ಗಂಡ ಕೆಲಸಕ್ಕೆ ಹೋಗಿದ್ದು, ಸಾಯಂಕಾಲ ಬರುತ್ತಾರೆ ಎಂದು ತಿಳಿಸಿದ್ದಾರೆ. ಆಗ ಮಧು ಅವರ ಕೈಯನ್ನು ಬಲವಾಗಿ ಹಿಡಿದುಕೊಂಡು, ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಭಯಗೊಂಡು ಬಾಗಿಲು ಹಾಕಿಕೊಂಡಿಕೊಂಡಿದ್ದರು.

ಇದನ್ನೂ ಓದಿ: CCTV ಯಲ್ಲಿ ಸೆರೆಯಾಯ್ತು ಅಂಕಲ್ ಕಳ್ಳಾಟ: ಕಾಂಪೌಂಡ್ ಹಾರಿ ಬ್ರಾಂಡೆಡ್ ಶೂ ಕದಿಯುವ ವೀಡಿಯೋ ವೈರಲ್!

55
ತಬ್ಬಿಕೊ ಮಾಡು ಹಾಗೂ ಕಿಸ್ ಮಾಡು

ಬಳಿಕ ಅವರ ಪತಿಗೆ ವಿಷಯವನ್ನು ಹೇಳಿದ್ದಾರೆ. ಮಧು ನನಗೆ ಮೆಸೇಜ್‌ನಲ್ಲೂ ಸಹ ತಬ್ಬಿಕೊ ಮಾಡು ಹಾಗೂ ಕಿಸ್ ಮಾಡು ಎಂದು ಇತ್ಯಾದಿ ಮೆಸೇಜ್‌ಗಳನ್ನು ಮಾಡುತ್ತಿದ್ದರು. ಆದ್ದರಿಂದ ಮಧು ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗೃಹಿಣಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಧಾರವಾಡ ಕಿಡ್ನ್ಯಾಪ್ ಕೇಸ್ ಸುಖಾಂತ್ಯ: ಜೋಯಿಡಾದಲ್ಲಿ ಪತ್ತೆಯಾದ್ರು ಶಾಲಾ ಮಕ್ಕಳು! ಅಪಹರಣಕಾರ ಸಿಕ್ಕಿಬಿದ್ದಿದ್ದೇ ರೋಚಕ!

Read more Photos on
click me!

Recommended Stories