IMD: ಪ್ರವಾಹ Vs ಬರದ ಮುನ್ಸೂಚನೆ; ರಾಜ್ಯದಲ್ಲಿ ದಿಢೀರ್ ಬದಲಾಗಲಿದೆ ಹವಾಮಾನ ಚಿತ್ರಣ! ತಜ್ಞರು ಹೇಳಿದ್ದೇನು?

Published : Sep 17, 2026, 05:53 PM IST

ಭಾರತದಲ್ಲಿ ಮಾನ್ಸೂನ್ ಹವಾಮಾನವು ದಿಢೀರ್ ಬದಲಾಗುತ್ತಿದ್ದು, ಒಂದೆಡೆ ಭಾರಿ ಪ್ರವಾಹ ಮತ್ತು ಇನ್ನೊಂದೆಡೆ ತೀವ್ರ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ರಾಜ್ಯದ ಹವಮಾನದ ಕುರಿತು ಸಮಗ್ರವಾಗಿ ತಂತ್ರಜ್ಞವೇನು? ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

PREV
16
ದಿಢೀರ್‌ ಬದಲಾವಣೆ!

ಭಾರತಕ್ಕೆ ಮಾನ್ಸೂನ್ ಹಿಂತಿರುಗುವ ಸಮಯ ಹತ್ತಿರವಾಗುತ್ತಿದ್ದಂತೆಯೇ ದೇಶಾದ್ಯಂತ ಹವಾಮಾನದ ಚಿತ್ರಣ ದಿಢೀರ್ ಬದಲಾಗುತ್ತಿದೆ. ಇಂದು, ಸೆಪ್ಟೆಂಬರ್ 17 ರಂದು ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಆಲಿಕಲ್ಲು ಮಳೆಯಾಗಿದ್ದರೆ, ಉತ್ತರಾಖಂಡದಲ್ಲಿ ಭಾರಿ ಮಳೆ ಮತ್ತು ಭೂಕುಸಿತಗಳು ಸಂಭವಿಸಿವೆ. ಬಿಹಾರದಲ್ಲಿ ಪ್ರವಾಹದ ಭೀಕರತೆಗೆ 100 ಕ್ಕೂ ಹೆಚ್ಚು ರಸ್ತೆಗಳು ಕೊಚ್ಚಿಹೋಗಿವೆ. ಇನ್ನೊಂದೆಡೆ, ಕೆಲವೇ ದಿನಗಳ ಹಿಂದೆ ಕೇರಳವು ತೀವ್ರ ಬಿಸಿಲಿನ ಅಲೆಯಿಂದ ಕಂಗಾಲಾಗಿತ್ತು. ದೇಶದ ಒಂದು ಭಾಗದಲ್ಲಿ ಜಲಪ್ರಳಯದ ವಾತಾವರಣವಿದ್ದರೆ, ಮತ್ತೊಂದೆಡೆ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

26
ಬೆದರಿಸುತ್ತಿದೆ 15% ಮಳೆ ಕೊರತೆ!

ಹವಾಮಾನ ಇಲಾಖೆಯ (IMD) 2026 ರ ಇತ್ತೀಚಿನ ದತ್ತಾಂಶಗಳ ಪ್ರಕಾರ, ಈ ವರ್ಷ ಮಾನ್ಸೂನ್ ಶೇ. 15 ರಷ್ಟು ಕೊರತೆಯನ್ನು ದಾಖಲಿಸಿದೆ. ಜೂನ್ 1 ರಿಂದ ಸೆಪ್ಟೆಂಬರ್ 16 ರವರೆಗೆ ಸಾಮಾನ್ಯ ಮಳೆಯಾದ 801.5 ಮಿಮೀಗೆ ಪ್ರತಿಯಾಗಿ ಕೇವಲ 682 ಮಿಮೀ ಮಳೆಯಾಗಿದೆ. ಕೇಂದ್ರ ಜಲ ಆಯೋಗದ (CWC) ವರದಿಯಂತೆ, ದೇಶದ 200 ಕ್ಕೂ ಹೆಚ್ಚು ಜಿಲ್ಲೆಗಳು ತೀವ್ರ ಬರದಂತಹ ಸ್ಥಿತಿಯಲ್ಲಿದ್ದರೆ, 100 ಕ್ಕೂ ಹೆಚ್ಚು ಜಿಲ್ಲೆಗಳು ಭಾರಿ ಪ್ರವಾಹಕ್ಕೆ ತುತ್ತಾಗಿವೆ.

36
4 ತಿಂಗಳ ‘ಝಾಡಿ’ ಮಳೆ ಈಗ 10-15 ದಿನಕ್ಕೆ ಇಳಿಕೆ!

ಹಿಂದೆ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ‘ಝಾಡಿ’ (ಸತತ ಹಗುರ ಮಳೆ) ಬೀಳುತ್ತಿತ್ತು. ನಿಧಾನವಾಗಿ ಸುರಿಯುತ್ತಿದ್ದ ಈ ಮಳೆಯನ್ನು ಮಣ್ಣು ಇಂಗಿಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಾಗುತ್ತಿತ್ತು. ಆದರೆ ಜಾಗತಿಕ ತಾಪಮಾನ ಏರಿಕೆಯಿಂದಾಗಿ ವಾತಾವರಣದಲ್ಲಿ 1°C ಉಷ್ಣತೆ ಹೆಚ್ಚಿದಾಗ, ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ 7% ರಷ್ಟು ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ, ಮುಂಚೆ 120 ದಿನಗಳಲ್ಲಿ ಹಂಚಿ ಹೋಗುತ್ತಿದ್ದ ಮಳೆ ಈಗ ಕೇವಲ 10 ರಿಂದ 15 ದಿನಗಳ ತೀವ್ರ, ಧಾರಾಕಾರ ಸ್ಫೋಟವಾಗಿ ಪರಿಣಮಿಸುತ್ತಿದೆ. 24 ರಿಂದ 48 ಗಂಟೆಗಳಲ್ಲಿ 150-200 ಮಿಮೀ ಮಳೆ ಬಿದ್ದಾಗ ನೀರು ಇಂಗಲು ಸಮಯ ಸಿಗದೆ ಹಠಾತ್ ಪ್ರವಾಹ ಉಂಟಾಗುತ್ತಿದೆ.

46
ಕಡಿಮೆ ಮಳೆಯಿದ್ದರೂ ಪ್ರವಾಹ ಏಕೆ?

ಪೂರ್ವ ಉತ್ತರ ಪ್ರದೇಶ, ಬಿಹಾರ ಮತ್ತು ಅಸ್ಸಾಂನಲ್ಲಿ ನದಿಪಾತ್ರಗಳಲ್ಲಿ ಹೂಳು ತುಂಬಿರುವುದರಿಂದ, ನದಿಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕುಸಿದಿದೆ. ನೇಪಾಳ ಮತ್ತು ಹಿಮಾಲಯನ್ ಬೆಟ್ಟಗಳಲ್ಲಿ ಭಾರಿ ಮಳೆಯಾಗಿ ಅಣೆಕಟ್ಟುಗಳಿಂದ ನೀರು ಹರಿಬಿಟ್ಟಾಗ, ಕೆಳಭಾಗದ ಬಯಲು ಪ್ರದೇಶಗಳಲ್ಲಿ ಮಳೆಯಿಲ್ಲದಿದ್ದರೂ ‘ಮಳೆ ಕೊರತೆಯ ಪ್ರವಾಹ’ ಎದುರಾಗುತ್ತಿದೆ.

56
ನಗರ ಪ್ರವಾಹ ಹಾಗೂ ಅರ್ಬನ್ ಹೀಟ್ ಐಲ್ಯಾಂಡ್!

ನಗರಗಳಲ್ಲಿ ಕಾಂಕ್ರೀಟ್, ಡಾಂಬರು ಮತ್ತು ಹವಾನಿಯಂತ್ರಣಗಳಿಂದಾಗಿ ತಾಪಮಾನ 2°C ಯಿಂದ 5°C ವರೆಗೆ ಹೆಚ್ಚುತ್ತಿದೆ. ತೇವಾಂಶವುಳ್ಳ ಗಾಳಿ ಈ ಬಿಸಿ ವಾತಾವರಣವನ್ನು ತಲುಪಿದಾಗ ನಗರಗಳ ಮೇಲೆ ದಟ್ಟ ಮೋಡಗಳು ಸೃಷ್ಟಿಯಾಗಿ ಕೇವಲ 2 ಗಂಟೆಗಳಲ್ಲಿ 100 ಮಿಮೀ ಮಳೆ ಸುರಿಯುತ್ತದೆ. ನೀರು ಇಂಗಲು ಜಾಗವಿಲ್ಲದೆ ನಗರಗಳು ಮುಳುಗಿದರೆ, ಕೇವಲ 15 ಕಿ.ಮೀ ದೂರದಲ್ಲಿರುವ ಹಳ್ಳಿಗಳು ಬಿಸಿಲಿನಿಂದ ಒಣಗುತ್ತಿರುತ್ತವೆ.

66
ಪರಿಹಾರವೇನು?

ಹವಾಮಾನದ ಈ ಅಪಾಯಕಾರಿ ಆಟವನ್ನು ಎದುರಿಸಲು ನಾವು AI ಮತ್ತು ಉಪಗ್ರಹ ಆಧಾರಿತ ‘ಹೈಪರ್-ಲೋಕಲ್’ (ಅತಿ ಸ್ಥಳೀಯ) ಮುನ್ಸೂಚನಾ ತಂತ್ರಜ್ಞಾನವನ್ನು ಬಳಸಬೇಕಿದೆ. ಇದರ ಜೊತೆಗೆ, ನಮ್ಮ ಪೂರ್ವಜರ ಸಾಂಪ್ರದಾಯಿಕ ಜಲಸಂಪನ್ಮೂಲ ವ್ಯವಸ್ಥೆಗಳಾದ ಬಿಹಾರದ ‘ಅಹರ್-ಪೈನ್’, ರಾಜಸ್ಥಾನದ ‘ಜೋಹಾದ್’ ಮತ್ತು ದಕ್ಷಿಣ ಭಾರತದ ‘ಸರಣಿ ಕೆರೆಗಳ’ (ಟ್ಯಾಂಕ್) ಮಾದರಿಯನ್ನು ಮರುಜೀವಗೊಳಿಸಬೇಕಿದೆ. ಬದಲಾಗುತ್ತಿರುವ ಮಾನ್ಸೂನ್ ಕೇವಲ ಹವಾಮಾನ ಸಮಸ್ಯೆಯಾಗಿರದೆ, ಭಾರತದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಸವಾಲಾಗಿದೆ.

Read more Photos on
click me!

Recommended Stories