ಕುಣಿಗಲ್-ಬೆಂಗಳೂರು ಪ್ರಯಾಣಿಕರಿಗೆ ವೋಲ್ವೋ ಬಸ್; ಟಿಕೆಟ್ ದರ ಎಷ್ಟು? ನಿಲುಗಡೆ ಎಲ್ಲೆಲ್ಲಿ?

Published : Sep 17, 2026, 10:30 AM IST

ಬಿಎಂಟಿಸಿ ಬೆಂಗಳೂರು ಮತ್ತು ಕುಣಿಗಲ್ ಮಾರ್ಗದಲ್ಲಿ 10 ಹೊಸ 'ವಜ್ರ ವಿಸ್ತಾರ' ಎಸಿ ಬಸ್ ಸೇವೆಯನ್ನು ಆರಂಭಿಸಿದೆ. ಮೆಜೆಸ್ಟಿಕ್‌ನಿಂದ ಹೊರಡುವ ಈ ಬಸ್‌ಗಳಿಗೆ 120 ರೂ. ದರ ನಿಗದಿಪಡಿಸಲಾಗಿದ್ದು, ದಿನಕ್ಕೆ 40 ಟ್ರಿಪ್‌ಗಳು ಇರಲಿವೆ.

PREV
15
ಕುಣಿಗಲ್ ಮಾರ್ಗದಿಂದ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು: ಬಿಎಂಟಿಸಿ ಬೆಂಗಳೂರು ಮತ್ತು ಕುಣಿಗಲ್ ಮಾರ್ಗದಲ್ಲಿ ಹತ್ತು ‘ವಜ್ರ ವಿಸ್ತಾರ’ ಎಸಿ ಬಸ್ ಸೇವೆ ಆರಂಭಿಸಿದೆ. ಈ 10 ಬಸ್‌ಗಳಿಂದ ಕುಣಿಗಲ್ ಮಾರ್ಗದಿಂದ ಬೆಂಗಳೂರಿಗೆ ಬರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ಈ ಬಸ್ ಸೇವೆ ಆರಂಭವಾಗಲಿದೆ.

25
ಬಸ್‌ ಸಂಖ್ಯೆ & ಟ್ರಿಪ್‌ಗಳು, ಪ್ರಯಾಣ ದರ

10 ಎಸಿ ವಜ್ರ ಬಸ್‌ಗಳು, ಪ್ರತಿ 40-45 ನಿಮಿಷಕ್ಕೊಮ್ಮೆ ದಿನಕ್ಕೆ ಒಟ್ಟು 40 ಟ್ರಿಪ್‌ಗಳು ಇರಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಬಸ್ ರೂಟ್ ನಂಬರ್ V-EX-KGL-1 ಆಗಿದೆ. 73 ಕಿ.ಮೀ. ಮಾರ್ಗದ ಬೆಂಗಳೂರು ಮತ್ತು ಕುಣಿಗಲ್ ಪ್ರಯಾಣಕ್ಕೆ ₹120 (ಜಿಎಸ್‌ಟಿ ಮತ್ತು ಟೋಲ್ ಸೇರಿ) ನಿಗದಿಪಡಿಸಲಾಗಿದೆ.

35
ಪ್ರಮುಖ ನಿಲುಗಡೆಗಳು

ನವರಂಗ, ಗೋವರ್ಧನ್ ಟಾಕೀಸ್, ಗೊರಗುಂಟೆಪಾಳ್ಯ, ವಿಡಿಯಾ, ನೆಲಮಂಗಲ ಬೈಪಾಸ್, ಗುಡೇಮಾರನಹಳ್ಳಿ ಎಚ್‌ಪಿ, ಸೋಲೂರು, ಮತ್ತು ಮರೂರು ಹ್ಯಾಂಡ್ ಪೋಸ್ಟ್. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಬಿಎಂಟಿಸಿ ತನ್ನ ಕಾರ್ಯಾಚರಣೆಯ ಮಿತಿಯನ್ನು 40 ಕಿ.ಮೀ.ಗೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಈ ಹೊಸ ಸೇವೆಯನ್ನು ಆರಂಭಿಸಲಾಗಿದೆ.

45
ವ್ಯಾಪ್ತಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವ ಬಿಎಂಟಿಸಿ

ಪ್ರಯಾಣಿಕರ ಬೇಡಿಕೆ, ಸಂಚಾರ ಸಾಂದ್ರತೆ ಮತ್ತು ಮೂಲಸೌಕರ್ಯ ಲಭ್ಯತೆಯ ಆಧಾರದ ಮೇಲೆ ಹೊಸ ಸೇವೆಯನ್ನು ಪರಿಚಯಿಸಲಾಗಿದೆ ಎಂದು ನಿಗಮ ತಿಳಿಸಿದೆ. ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಮತ್ತು ತುಮಕೂರಿಗೆ ಬಿಎಂಟಿಸಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ನಾಲ್ಕು ವಜ್ರ ವಿಸ್ತಾರಾ ಮಾರ್ಗಗಳಲ್ಲಿ 34 ವೇಳಾಪಟ್ಟಿಗಳು ಮತ್ತು 174 ದೈನಂದಿನ ಟ್ರಿಪ್‌ಗಳನ್ನು ಹೊಂದಿದೆ, ಜೊತೆಗೆ ವಿಸ್ತಾರಾ ಎಕ್ಸ್‌ಪ್ರೆಸ್ ಮತ್ತು ಜನರಲ್ ವಿಸ್ತಾರಾ ಸೇವೆಗಳನ್ನು ಹೊಂದಿದೆ.

55
ಸಾರಿಗೆ ಸಚಿವರ ಹೇಳಿಕೆ

ಬೆಂಗಳೂರಿನಿಂದ ಸುತ್ತಮುತ್ತಲಿನ ನಗರಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪ್ರಾರಂಭಗೊಂಡ ಯೋಜನೆ ಪ್ರಥಮ ಬಾರಿಗೆ ಕುಣಿಗಲ್ ನಿಂದ ಪ್ರಾರಂಭವಾಗುತ್ತಿದೆ ಈ ಯೋಜನೆ ಕುಣಿಗಲ್‌ ಗೆ ಬರಲು ಮಾಜಿ ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕ ಡಾ. ರಂಗನಾಥ್ ಕಾರಣ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

Read more Photos on
click me!

Recommended Stories