ಬೆಂಗಳೂರಲ್ಲಿ ದೇಶದ ಮೊದಲ 3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್, ಪ್ರಧಾನಿ ಮೋದಿ ಮೆಚ್ಚುಗೆ

Published : Aug 19, 2023, 03:34 PM IST

ಬೆಂಗಳೂರಿನಲ್ಲಿ ದೇಶದ ಮೊದಲ 3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್ ಉದ್ಘಾಟನೆಗೊಂಡಿದೆ. ಕೇಂಬ್ರಿಡ್ಜ್ ಲೇಔಟ್‌ನಲ್ಲಿರುವ ಭಾರತದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿಯ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಟೋಸ್ ಶೇರ್ ಮಾಡಿದ್ದಾರೆ.

PREV
16
ಬೆಂಗಳೂರಲ್ಲಿ ದೇಶದ ಮೊದಲ 3ಡಿ ಪ್ರಿಂಟೆಡ್ ಪೋಸ್ಟ್ ಆಫೀಸ್, ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರಿನ ಅಲಸೂರಿನ ಕೆಂಬ್ರಿಡ್ಜ್ ಲೇಔಟ್ ಬಳಿ ಹೊಸದೊಂದು ಅಂಚೆ ಕಚೇರಿ ನಿರ್ಮಾಣವಾಗಿದೆ. ಪೋಸ್ಟ್ ಆಫೀಸ್ ನಿರ್ಮಾಣ ಮಾಡೋದ್ರಲ್ಲೇನು ವಿಶೇಷತೆ ಅಂತೀರಾ? ಯಾಕೆಂದರೆ ಇದು 3ಡಿ ಮುದ್ರಿತ ಅಂಚೆ ಕಚೇರಿ. ಅಷ್ಟೇ ಅಲ್ಲ ಇದು ದೇಶದ ಮೊದಲ ತ್ರಿಡಿ ಮುದ್ರಿತ ಅಂಚೆ ಕಚೇರಿ ಎಂಬ ಗೌರವಕ್ಕೂ ಪಾತ್ರವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

26

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇದು ನಮ್ಮ ರಾಷ್ಟ್ರದ ನಾವೀನ್ಯತೆ ಮತ್ತು ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಕರೆದಿದ್ದಾರೆ. ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿಯನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಇದು ಸ್ವಾವಲಂಬಿ ಭಾರತದ ಆತ್ಮವನ್ನು ಸಹ ಒಳಗೊಂಡಿದೆ. ಅಂಚೆ ಇಲಾಖೆಯನ್ನು ಪೂರ್ಣಗೊಳಿಸುವಲ್ಲಿ ಶ್ರಮಿಸಿದವರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

36

ಬೆಂಗಳೂರಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ಉದ್ಘಾಟಿಸಿದ ಬೆನ್ನಲ್ಲೇ ಪ್ರಧಾನಿ ಮೋದಿಯವರ ಪ್ರತಿಕ್ರಿಯಿಸಿದ್ದಾರೆ. ಅಂಚೆ ಅಧಿಕಾರಿಗಳ ಪ್ರಕಾರ, ಈ ಪೋಸ್ಟ್ ಆಫೀಸ್ ಕಟ್ಟಡದ ನಿರ್ಮಾಣವನ್ನು ನಿರ್ಮಾಣ ಕಂಪನಿ ಲಾರ್ಸೆನ್ ಮತ್ತು ಟೂಬ್ರೊ ಲಿಮಿಟೆಡ್ ನಡೆಸಿದೆ. ಐಐಟಿ ಮದ್ರಾಸ್ ಇದಕ್ಕೆ ತಾಂತ್ರಿಕ ಮಾರ್ಗದರ್ಶನವನ್ನು ನೀಡಿದೆ.

46

ಉದ್ಘಾಟನೆಯ ನಂತರ, ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವ ಅಶ್ವಿನಿ ವೈಷ್ಣವ್ ಈ ಸಂದರ್ಭದಲ್ಲಿ ಮಾತನಾಡಿ, 'ಅಭಿವೃದ್ಧಿಯ ಮನೋಭಾವ, ನಮ್ಮದೇ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮನೋಭಾವ, ಹಿಂದಿನ ಕಾಲದಲ್ಲಿ ಅಸಾಧ್ಯವೆಂದು ಪರಿಗಣಿಸಲಾದ ಏನನ್ನಾದರೂ ಮಾಡುವ ಮನೋಭಾವ. ಈ ಸಮಯದ ವೈಶಿಷ್ಟ್ಯವನ್ನು ವಿವರಿಸುತ್ತದೆ' ಎಂದು ಹೇಳಿದರು.

56

ವರದಿಗಳ ಪ್ರಕಾರ 1,100 ಚದರಡಿ ಅಂಗಳದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡಕ್ಕೆ ತೆರಿಗೆ ಸೇರಿ 26 ಲಕ್ಷ ರೂ ವೆಚ್ಚವಾಗಿದೆ. ನೀರು, ಒಳಚರಂಡಿ ಇತ್ಯಾದಿಗಳಿಗೆ ಹೆಚ್ಚುವರಿ 40 ಲಕ್ಷ ರೂ ವೆಚ್ಚವಾಗಿರುವುದಾಗಿ ತಿಳಿದುಬಂದಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ಇಟ್ಟಿಗೆ ಮತ್ತಿತರ ಕಚ್ಚಾವಸ್ತುಗಳ ಬದಲಾಗಿ ರೊಬೋಟಿಕ್‌ ತಂತ್ರಜ್ಞಾನದಿಂದ ನಿರ್ಮಾಣವಾದ ಅತ್ಯಾಧುನಿಕ 3ಡಿ ಪ್ರಿಂಟೆಂಡ್‌ ಅಂಚೆ ಕಚೇರಿ ಇದಾಗಿದೆ. 

66

ಯಾಂತ್ರಿಕ ಪ್ರಿಂಟರ್‌ ಅನುಮೋದಿತ ವಿನ್ಯಾಸದ ಪ್ರಕಾರ ಎರಕ ಹೊಯ್ದ ಮಾದರಿಯಲ್ಲಿ ಕಾಂಕ್ರಿಟ್‌ ಪದರವನ್ನು ಪದರದಿಂದ ಹಂತ ಹಂತವಾಗಿ ಜೋಡಿಸುತ್ತ ಕಟ್ಟಡ ನಿರ್ಮಿಸಲಾಗಿದೆ. ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದರೆ ಸಾಮಾನ್ಯವಾಗಿ ಈ ಕಟ್ಟಡ ನಿರ್ಮಾಣಕ್ಕೆ 6 ರಿಂದ 8 ತಿಂಗಳ ಕಾಲಾವಕಾಶ ಬೇಕು. ಆದರೆ, ಕೇವಲ 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ.

Read more Photos on
click me!

Recommended Stories