ಬೆಂಗಳೂರಿನ ಈ ಭಾಗದಲ್ಲಿ ಮಳೆಯಿಂದ ಉಂಟಾಗುವ ಪ್ರವಾಹ ನಿಯಂತ್ರಣಕ್ಕೆ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. ಗೆದ್ದಲಹಳ್ಳಿ ರೈಲ್ವೆ ಹಳಿಗಳ ಕೆಳಗೆ 16.12 ಕೋಟಿ ರೂ. ವೆಚ್ಚದಲ್ಲಿ ಎರಡು ಹೊಸ ವೆಂಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಮಳೆ ನೀರು ಸರಾಗವಾಗಿ ಹರಿದು ಸಂಚಾರ ಸಮಸ್ಯೆ ಬಗೆಹರಿಯಲಿದೆ.
ಬೆಂಗಳೂರಿನಲ್ಲಿ ಮಳೆ ಬಂದ್ರೆ ಪ್ರಮುಖವಾಗಿ ಸಾಯಿ ಲೇಔಟ್, ಮಾನ್ಯತಾ ಟೆಕ್ ಪಾರ್ಕ್ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗುತ್ತದೆ. ರಸ್ತೆಗಳು ಜಲಾವೃತಗೊಳ್ಳೋದರಿಂದ ಸಂಪರ್ಕ ಕಡಿತಗೊಳ್ಳುತ್ತದೆ.
25
2 ಮೀಟರ್ ಉದ್ದ, 6 ಮೀಟರ್ ಅಗಲದ 2 ವೆಂಟ್
ಈ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಂಡಿದ್ದು, ಪ್ರವಾಹದಿಂದ ಬಾಧಿತ ಪ್ರದೇಶಗಳಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗಲು ಕ್ರಮಗಳನ್ನು ಕೈಗೊಂಡಿದೆ. ಗೆದ್ದಲಹಳ್ಳಿ ರೈಲ್ವೆ ಹಳಿಗಳ ಕೆಳಭಾಗದಲ್ಲಿ ತಲಾ 32 ಮೀಟರ್ ಉದ್ದ, 6 ಮೀಟರ್ ಅಗಲದ 2 ವೆಂಟ್‌ಗಳನ್ನು ಅಳವಡಿಸಲಾಗಿದೆ.
35
16 ಕೋಟಿ 12 ಲಕ್ಷ ರೂ. ಖರ್ಚು
ಈಗಾಗಲೇ ಈ ಸ್ಥಳದಲ್ಲಿ ಎರಡು ವೆಂಟ್‌ಗಳಿದ್ದು, ಇದೀಗ ಹೆಚ್ಚುವರಿಯಾಗಿ ರೈಲ್ವೆ ಮಾರ್ಗದ ಕೆಳಗೆ ಎರಡು ವೆಂಟ್‌ಗಳನ್ನು ಅಳವಡಿಸಲಾಗಿದೆ. ಈ ಎರಡು ವೆಂಟ್‌ಗಳ ಅಳವಡಿಕೆಗೆ ಸರ್ಕಾರ 16 ಕೋಟಿ 12 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ.
ಹೆಬ್ಬಾಳ ಕೆರೆ, ಯಲಹಂಕ ಕೆರೆ, ಸರ್ವಜ್ಞ ನಗರ ಮತ್ತು ಮಾನ್ಯತಾ ಟೆಕ್ ಪಾರ್ಕ್‌ನಿಂದ ಹರಿದು ಬರುವ ಮಳೆ ನೀರು ಸುಲಭವಾಗಿ ಹರಿಯಲು ಈ ಯೋಜನೆ ಸಹಾಯ ಮಾಡುತ್ತದೆ. ಈ ಯೋಜನೆಯಿಂದ ಸಾಯಿ ಲೇಔಟ್, ಗೆದ್ದಲಹಳ್ಳಿ ಸುತ್ತಮುತ್ತ ಉಂಟಾಗುವ ಮಳೆಗಾಲದ ಪ್ರವಾಹ ನಿಯಂತ್ರಣಕ್ಕೆ ಬರಲಿದೆ ಎಂದು ಸರ್ಕಾರ ಹೇಳಿಕೊಂಡಿದೆ.
55
ನಗರದ ರಸ್ತೆಗಳ ಜಲಾವೃತ ಹಾಗೂ ಸಂಚಾರ ತೊಂದರೆ
ಮಳೆಗಾಲದಲ್ಲಿ ತೀವ್ರ ಪ್ರವಾಹದಿಂದ ನಗರದ ರಸ್ತೆಗಳ ಜಲಾವೃತ ಹಾಗೂ ಸಂಚಾರ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಪ್ರವಾಹದ ಸಮಸ್ಯೆಗಳು ಕಡಿಮೆಯಾಗುತ್ತವೆ ಮತ್ತು ಸುರಕ್ಷಿತ ಪರಿಸರ ಇಲ್ಲಿಯ ಜನರಿಗೆ ಸಿಗಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.