ಡಿಕೆ ಶಿವಕುಮಾರ್ ನೂತನ ಗೃಹಪ್ರವೇಶದಲ್ಲಿ ಅಜ್ಜಯ್ಯನಿಗೆ ಪೂಜೆ, ಕಾರ್ಮಿಕರ ಜೊತೆ ಊಟ, ಮನೆ ಫೋಟೋಸ್

Published : Nov 16, 2026, 04:14 PM IST

ಡಿಕೆ ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ನಿವಾಸದ ಗೃಹ ಪ್ರವೇಶ ನಡೆದಿದೆ. ನೂತನ ಮನೆಗೆ ಗಂಗಾ ಎಂದು ಹೆಸರಿಡಲಾಗಿದೆ. ಡಿಕೆಶಿ ಹೊಸ ನಿವಾಸ ಹೇಗಿದೆ? ಗೃಹಪ್ರವೇಶದಲ್ಲಿ ಗಮನಸೆಳೆದ ಪೂಜೆ, ಕಾರ್ಮಿಕರ ಜೊತೆಗಿನ ಊಟ, ಗ್ಯಾಸ್ ಸಿಲಿಂಡರ್ ಸೇರಿದಂತೆ ರೋಚಕ ಫೋಟೋಸ್ ಇಲ್ಲಿದೆ.

PREV
16
ಗಂಗಾ ನಿವಾಸದ ಗೃಹ ಪ್ರವೇಶ

ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವುಕುಮಾರ್ ಸರ್ಕಾರಿ ನಿವಾಸದ ಗೃಹ ಪ್ರವೇಶ ನಡೆದಿದೆ. ಮುಖ್ಯಮಂತ್ರಿಗ ಅಧಿಕೃತ ಸರ್ಕಾರಿ ನಿವಾಸಕ್ಕೆ ಗಂಗಾ ಎಂದು ಹೆಸರಿಡಲಾಗಿದೆ. ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಿ ಇದೀಗ ಗೃಹ ಪ್ರವೇಶ ನಡೆದಿದೆ. ನದಿಗಳಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನ ಹಾಗೂ ಗೌರವವಿದೆ. ಹೀಗಾಗಿ ಗಂಗಾ ಎಂದು ಹೆಸರಿಡಲಾಗಿದೆ. ಇನ್ನು ಪ್ರತಿ ಕೊಠಡಿಗೆ ರಾಜ್ಯದ ನದಿಗಳ ಹೆಸರು ಇಡಲಾಗಿದೆ. ಕಬಿನಿ, ಹೇಮಾವತಿ, ಶಿಂಷಾ ಹಾಗೂ ತುಂಗಭದ್ರಾ ನದಿಗಳ ಹೆಸರು ಪ್ರತಿ ಕೊಠಡಿಗೆ ಇಡಲಾಗಿದೆ.ಗೃಹ ಪ್ರವೇಶದಲ್ಲಿ ಹಲವು ವಿಚಾರಗಳು ಗಮನಸೆಳೆದಿದೆ.

26
ಅಜ್ಜಯ್ಯನ ಫೋಟೋಗೆ ಪೂಜೆ ಸಲ್ಲಿಸಿದ ಡಿಕೆಶಿ

ನೂತನ ಮನೆ ಗೃಹಪ್ರವೇಶ ಪೂಜೆ ವೇಳೆ ಅಜ್ಜಯ್ಯನ ಪೋಟೋಗೂ ಪೂಜೆ ಸಲ್ಲಿಕೆ ಮಾಡಲಾಗಿದೆ. ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ವಾಸ್ತವ್ಯ ಹೂಡಿದ್ದ ಈ ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಲಾದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು, ಸ್ವೀಕರಿಸುವ ದಾಖಲೆಗಳನ್ನು ನಿರ್ವಹಿಸಲು ಹಾಗೂ ಸಭೆ-ಸಮಾರಂಭಗಳ ಆಯೋಜನೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದೇ ವೇಳೆ ನಿಮಗಾಗಿ, ನಿಮ್ಮ ಸೇವೆಗಾಗಿ ʻಗಂಗಾʼ ಬಾಗಿಲು ಸದಾ ತೆರದಿರುತ್ತದೆ ಎಂದಿದ್ದಾರೆ.

36
ಕೆಲಸಗಾರರ ಜೊತೆ ಊಟ

ಮುಖ್ಯಮಂತ್ರಿಗಳ ಅಧಿಕೃತ ಸರ್ಕಾರಿ ನಿವಾಸದ ಕಾಮಗಾರಿಯಲ್ಲಿ ಹಲವರು ದುಡಿದಿದ್ದಾರೆ. ಗೃಹ ಪ್ರವೇಶ ದಿನ ಎಲ್ಲಾ ಕಾರ್ಮಿಕರು, ಕೆಲಸಗಾರರಿಗೆ ಆಹ್ವಾನ ನೀಡಲಾಗಿತ್ತು. ಇದರಂತೆ ಗೃಹ ಪ್ರವೇಶದ ಪೂಜೆ ಬಳಿಕ ನಿವಾಸ ನವೀಕರಣ ಕಾಮಗಾರಿ ಕೆಲಸ ಮಾಡಿದ್ದ ಕೆಲಸಗಾರರ ಜೊತೆ ಡಿಕೆ ಶಿವಕುಮಾರ್ ಊಟ ಸವಿದಿದ್ದಾರೆ.

46
ನವೀಕರಣಕ್ಕೆ ಎಷ್ಟು ಖರ್ಚು

ಎಷ್ಟು ಖರ್ಚಾಗಿರಹುದು ಎಂದು ಕೆಲವರು ಗಾಬರಿ ಆಗಿರಬಹುದು. ಸೆಕ್ಯೂರಿಟಿಗಾಗಿ ಸ್ವಲ್ಪ ಖರ್ಚಾಗಿರಬಹುದು ಅಷ್ಟೇ. ಖರ್ಚಿನ ಬಗ್ಗೆ ಸಂಪೂರ್ಣ ಮಾಹಿತಿ ಬಂದಿಲ್ಲ. ಮನೆಗೆ ಹಾಕಿರುವ ಕೋಟಾಸ್ ಕಲ್ಲು 50 ರೂಪಾಯಿ ಅಷ್ಟೇ. ಮನೆಗೆ ಬಳಕೆ ಮಾಡಿರುವ ಗ್ಯ್ರಾನೇಟ್ ಕಲ್ಲು 80 ರೂಪಾಯಿದು ಹಾಕಿದ್ದೇನೆ ಅಷ್ಟೇ. ಕಡಿವೆ ವೆಚ್ಚದ ಕಲ್ಲನ್ನು ಬಳಕೆ ಮಾಡಿದ್ದೇನೆ. ನನಗೆ ಹಣದ ಬೆಲೆ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

56
ಗುರುವಾರದಿಂದ ಇದೇ ಮನೆಯಿಂದ ಎಲ್ಲರ ಭೇಟಿ

ಡಿಕೆ ಶಿವಕುಮಾರ್ ಖಾಸಗಿ ನಿವಾಸ ಬಿಟ್ಟು ಇದೀಗ ನೂತನವಾಗಿ ಗೃಹ ಪ್ರವೇಶ ಮಾಡಿರುವ ಗಂಗಾ ನಿವಾಸಕ್ಕೆ ಸ್ಥಳಾಂತರಗೊಂಡಿದ್ದಾರೆ. ಕುಮಾ ಕೃಪಾ ದಲ್ಲಿ ಶೇಕಾ 10ರಷ್ಟು ರಿನೋವೇಷನ್ ಮಾಡಿದ್ದೇನೆ. ಆದರೆ ಹೆರಿಟೇಜ್ ಹಾಗೆ ಉಳಿಸಿಕೊಂಡಿದ್ದೇವೆ. ಇಂದು ಯಾರನ್ನು ಆಹ್ವಾನಿಸಿಲ್ಲ. ಗುರುವಾರ 224 ಶಾಸಕರು ಸಚಿವರು,ಸಂಸದರಿಗೆ ಆಹ್ವಾನಿಸುತ್ತೇನೆ . ಇದೇ ಮನೆಯಲ್ಲಿ ಗುರುವಾರದಿಂದ ಎಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

66
ಮನೆಯ ಫರ್ನೀಚರ್ ರಹಸ್ಯ ಬಿಚ್ಚಿಟ್ಟ ಡಿಕೆಶಿ

90 % ನನ್ನ ಖಾಸಗಿ ಖರ್ಚಿನಿಂದ ಪರ್ನಿಚರ್ ತಂದಿದ್ದೇನೆ. ನನ್ನ ಹಳೆ ಮನೆಯಲ್ಲಿನ ಪರ್ನಿಚರ್ ಬಳಕೆ ಮಾಡಿದ್ದೇನೆ. ಕುಮಾರ ಕೃಪದಲ್ಲೇ ಇದ್ದ ಪರ್ನಿಚರ್ ಗಳನ್ನ‌ ಕೂಡ ಬಳಕೆ ಮಾಡಿದ್ದೇನೆ. ವಿಪಕ್ಷ ಇರೋದೆ ವಿರೋದ ಮಾಡೋದಕ್ಕೆ. ಅವರನ್ನೂ ಕರೆಯುತ್ತೇನೆ. ಸಾರ್ವಜನಿಕರ ಭೇಟಿಗೆ ಕೃಷ್ಣ ಇದೆ. ಈ ನಿವಾಸ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವರಿಗೆ. ನಾವು ಯಾರೂ ಇಲ್ಲ ಖಾಯಂ ಅಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Read more Photos on
click me!

Recommended Stories