ವಿಶ್ವದ ಟ್ರಾಫಿಕ್ ಕಿರಿಕಿರಿ ನಗರಗಳ ಪಟ್ಟಿ ಪ್ರಕಟ, ಬೆಂಗಳೂರಿಗೆ ಎಷ್ಟನೇ ಸ್ಥಾನ?

Published : Jan 22, 2026, 04:04 PM IST

ವಿಶ್ವದ ಟ್ರಾಫಿಕ್ ಕಿರಿಕಿರಿ ನಗರಗಳ ಪಟ್ಟಿ ಪ್ರಕಟ, ಬ್ರ್ಯಾಂಡ್ ಬೆಂಗಳೂರು ಎಂದು ಸರ್ಕಾರ ಸಿಲಿಕಾನ್ ಸಿಟಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ನೀಡುತ್ತಿದೆ. ಆದರೆ ಟ್ರಾಫಿಕ್ ಸಮಸ್ಯೆಯಿಂದ ಬೆಂಗಳೂರು ಅಂತಾರಾಷ್ಟ್ರೀಯ ಮಟದಲ್ಲಿ ಕುಖ್ಯಾತಿ ಪಡೆದಿದೆ. 

PREV
15
ಟಾಮ್ ಟಾಮ್ ಇಂಡೆಕ್ಸ್ ಟ್ರಾಫಿಕ್ ನಗರ ಪಟ್ಟಿ

ಪ್ರತಿ ನಗರಗಳು ವೇಗವಾಗಿ ವೇಳೆಯುತ್ತಿದೆ . ಅದರಲ್ಲೂ ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಲಂಡನ್, ನ್ಯೂಯಾರ್ಕ್, ವಾಶಿಂಗ್ಟನ್, ಮುಂಬೈ, ಸಿಂಗಾಪೂರ್ ಸೇರಿದಂತೆ ಹಲವು ನಗರಗಳು ಕೂಡ ಅತೀ ದೊಡ್ಡ ನಗರ ಅನ್ನೋ ಜನಪ್ರಿಯತೆ ಪಡೆದುಕೊಂಡಿದೆ. ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಸಾಮಾನ್ಯ. ಆದರೆ ನಗರದಲ್ಲೇ ಟ್ರಾಫಿಕ್ ಕಿರಿಕಿರಿಯಿಂದ ಜನರು ರೋಸಿ ಹೋಗುತ್ತಿರುವ ಘಟನೆಗಳು ಹೆಚ್ಚುತ್ತಿದೆ. ಇದರ ನಡುವೆ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಇದೀಗ ಅತೀ ಹೆಚ್ಚು ಟ್ರಾಫಿಕ್ ನಗರಗಳ ಪಟ್ಟಿ ಪ್ರಕಟಿಸಿದೆ.

25
ಬೆಂಗಳೂರಿಗೆ ಎಷ್ಟನೇ ಸ್ಥಾನ

ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ವಿಶ್ವದಲ್ಲೇ ಅತೀ ಗರಿಷ್ಠ ಟ್ರಾಫಿಕ್ ಕಿರಿಕಿರಿ ಇರುವ ನಗರಗಳ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನಲ್ಲೇ ಬೆಂಗಳೂರು ಟ್ರಾಫಿಕ್ ಸಮಸ್ಯೆಯಿಂದ ಜನರ ತೆಲೆನೋವಿಗೆ ಕಾರಣವಾಗುತ್ತಿದೆ. ಬೆಂಗಳೂರು 2ನೇ ಸ್ಥಾನದಲ್ಲಿದ್ದರೆ ಮೊದಲ ಸ್ಥಾನದಲ್ಲಿರುವ ನಗರ ಯಾವುದು?

35
ಮೊದಲ ಸ್ಥಾನದಲ್ಲಿರುವ ನಗರ ಯಾವುದು

ಬೆಂಗಳೂರು ಟ್ರಾಫಿಕ್ ಸಮಸ್ಯೆ ಅನುಭವಿಸಿದವರಿಗೆ ನಮಗಿಂತಲೂ ತಲೆನೋವಿನಲ್ಲಿರುವ ಜನ ಯಾರು ಅನ್ನೋ ಕುತೂಹಲಕ್ಕೆ ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಉತ್ತರ ನೀಡಿದೆ. ವಿಶ್ವದಲ್ಲೇ ಅತೀ ಗರಿಷ್ಠ ಟ್ರಾಫಿಕ್ ನಗರ ಮೆಕ್ಸಿಕೋದ ರಾಜಧಾನಿ ಮೆಕ್ಸಿಕೋ ಸಿಟಿ. ಇಲ್ಲಿನ ಜನರು ಟ್ರಾಫಿಕ್ ಲೈಫ್‌ನಿಂದ ಕಂಗಾಲಾಗಿದ್ದಾರೆ.

45
2023ರಲ್ಲಿ 6ನೇ ಸ್ಥಾದನಲ್ಲಿದ್ದ ಬೆಂಗಳೂರು

2023ರಲ್ಲಿ ಬೆಂಗಳೂರು ವಿಶ್ವದ ಟ್ರಾಫಿಕ್ ನಗರಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿತ್ತು. 2024ರ ಸಾಲಿಗೆ ಬೆಂಗಳೂರು ಏಕಾಏಕಿ 3ನೇ ಸ್ಥಾನಕ್ಕೆ ಜಿಗಿದಿತ್ತು. 2025ರ ವೇಳೆಗೆ ಬೆಂಗಳೂರು 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸರಾಸರಿ ವೇಗ ಪ್ರತಿ ಗಂಟೆಗೆ 13.9 ಕಿಲೋಮೀಟರ್ ಎಂದು ಸರ್ವೆ ಹೇಳಿದೆ.

55
ಬೆಂಗಳೂರಿಗರು 168 ಗಂಟೆ ಟ್ರಾಫಿಕ್‌ನಲ್ಲಿ

ಪ್ರತಿ ದಿನ 10 ಕಿಲೋಮೀಟರ್ ಪ್ರಯಾಣ ಮಾಡುವ ಬೆಂಗಳೂರಿಗರೂ ಸರಾಸರಿ ವರ್ಷದಲ್ಲಿ 168 ಗಂಟೆ ಟ್ರಾಫಿಕ್‌ನಲ್ಲಿ ಕಳೆಯುತ್ತಾರೆ. ಅಂದರೆ ವರ್ಷದಲ್ಲಿ 7 ದಿನ ಬೆಂಗಳೂರಿಗರು ಕೇವಲ ಟ್ರಾಫಿಕ್ ಕಿರಿಕಿರಿಯಲ್ಲಿ ಕಳೆಯುತ್ತಾರೆ ಎಂದು ಟಾಮ್ ಟಾಮ್ ಇಂಡೆಕ್ಸ್ ಸರ್ವೆ ವರದಿ ಹೇಳುತ್ತಿದೆ.

ಬೆಂಗಳೂರಿಗರು 168 ಗಂಟೆ ಟ್ರಾಫಿಕ್‌ನಲ್ಲಿ

Read more Photos on
click me!

Recommended Stories