Ambari Double-Decker: ಹೇಗಿದೆ ಬೆಂಗಳೂರಿಗೆ ಬಂದಿರೋ ಅಂಬಾರಿ ಡಬಲ್ ಡೆಕ್ಕರ್ ಬಸ್?

Published : Jan 21, 2026, 02:07 PM IST

ಬೆಂಗಳೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕೆಎಸ್‌ಟಿಡಿಸಿ ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪರಿಚಯಿಸಿದೆ. ಈ ಬಸ್ಸುಗಳು ತೆರೆದ ಮೇಲ್ಛಾವಣಿ ಹೊಂದಿದ್ದು, ನಗರದ ಪ್ರಮುಖ ಸ್ಥಳಗಳ ಮೂಲಕ ಸಂಚರಿಸಲಿವೆ. ಪ್ರಯಾಣಿಕರು ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

PREV
15
ರಾಜಧಾನಿಗೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಆಗಮನ

ಬೆಂಗಳೂರು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಿನ್ನೆಲೆ ರಾಜಧಾನಿಗೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಆಗಮನವಾಗಿದೆ. ಕೆಎಸ್‌ಟಿಡಿಸಿಯ ಬಸ್‌ಗಳಿಗೆ ಇಂದು ಚಾಲನೆ ನೀಡಲಾಗಿದೆ. ಈ ಅಂಬಾರಿ ಬಸ್‌ನೊಳಗೆ ಏನೆಲ್ಲಾ ಇದೆ ಎಂಬುದರ ಮಾಹಿತಿ ಇಲ್ಲಿದೆ.

25
20+20 ಆಸನ

ಅಂಬಾರಿ ಡಬಲ್ ಡೆಕ್ಕರ್ ಬಸ್‌ನೊಳಗೆ 20+20 ಆಸನಗಳನ್ನು ಹೊಂದಿದೆ. ಕೆಳಭಾಗದಲ್ಲಿ 20 ಮತ್ತು ಮೇಲ್ಭಾಗದಲ್ಲಿ ನಿಮಗೆ 20 ಆಸನಗಳಿವೆ. ಕೆಳಭಾಗ ಸಂಪೂರ್ಣ ಹವಾನಿಯಂತ್ರಿತವಾಗಿದೆ. ಮೇಲ್ಭಾಗದಲ್ಲಿ 20 ಆಸನಗಳನ್ನು ಅಳವಡಿಸಲಾಗಿದ್ದು, ಇಲ್ಲಿ ಛಾವಣಿ ಇಲ್ಲ. ಹಾಗಾಗಿ ತೆರೆದ ವಾಹನದಲ್ಲಿ ಕುಳಿತು ಬೆಂಗಳೂರಿನ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

35
ಇಂದು ಬಸ್‌ಗಳಿಗೆ ಚಾಲನೆ

ಈ ಹಿಂದೆ ಮೈಸೂರಿನಲ್ಲಿ ಆರು ಅಂಬಾರಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಇದೀಗ ಆರರಲ್ಲಿ ಮೂರು ಬಸ್‌ಗಳನ್ನು ರಾಜಧಾನಿ ಬೆಂಗಳೂರಿಗೆ ತೆಗೆದುಕೊಂಡು ಬರಲಾಗಿದೆ. ಈ ಮೊದಲು ದಿನನಿತ್ಯದ ಒಡಾಟಕ್ಕಾಗಿಯೇ ಬೆಂಗಳೂರು ಡಬಲ್ ಡೆಕ್ಕರ್‌ ಬಸ್‌ಗಳನ್ನು ಹೊಂದಿತ್ತು. ಆರ್ಥಿಕ ನಷ್ಟದ ಹಿನ್ನೆಲೆ ಡಬಲ್ ಡೆಕ್ಕರ್ ಬಸ್ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು

45
ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್

ಇದಾದ ಬಳಿಕ ವಿಶೇಷ ಸಂದರ್ಭಗಳಲ್ಲಿಯೂ ಡಬಲ್ ಡೆಕ್ಕರ್ ಬಸ್ ಬಳಕೆಯಾಗಿತ್ತು. ಇದೀಗ ದಿನನಿತ್ಯ ಡಬಲ್ ಡೆಕ್ಕರ್ ಬಸ್‌ಗಳು ಬೆಂಗಳೂರಿನಲ್ಲಿ ಸಂಚರಿಸಲಿವೆ. ಈ ಬಸ್‌ಗಳಲ್ಲಿ ನೀವು ಪ್ರಯಾಣಿಸಬೇಕಾದ್ರೆ ಕೆಎಸ್‌ಟಿಡಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ.

55
ಬಸ್ ಪ್ರಯಾಣ ದರ 180 ರೂಪಾಯಿ

ಬಸ್ ಪ್ರಯಾಣ ದರ 180 ರೂಪಾಯಿ ನಿಗದಿಪಡಿಸಲಾಗಿದೆ. ರವೀಂದ್ರ ಕಲಾಕ್ಷೇತ್ರದಿಂದ ಆರಂಭವಾಗುವ ಪ್ರಯಾಣ ಹಡ್ಸನ್ ಸರ್ಕಲ್ , ಕ್ವೀನ್ಸ್ ರೋಡ್, ವಿಶ್ವೇಶರ ಮ್ಯೂಸಿಯಂ, ವಿಧಾನಸೌಧ ಮುಂಭಾಗದ ರಸ್ತೆ, ಕೆಆರ್ ಸರ್ಕಲ್ ಮೂಲಕ ಬಂದು ಕಾರ್ಪೋರೇಷನ್ ಸಿಗ್ನಲ್‌ನಲ್ಲಿ ಮುಕ್ತಾಯವಾಗುತ್ತದೆ. ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ಈ ಸೇವೆ ಲಭ್ಯವಿರುತ್ತದೆ.

Read more Photos on
click me!

Recommended Stories