ಗೆಳೆಯನೊಂದಿಗೆ ಹೊಡೆದಾಡಿಕೊಂಡ ASI ಪುತ್ರ: ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯ ವಿಚಾರವಾಗಿ ಎಎಸ್‌ಐ ಪುತ್ರ ಅರ್ಮಾನ್ ಮತ್ತು ಸೈಯದ್ ಅಜರುದ್ದೀನ್ ನಡುವೆ ನಡೆದ ಈ ಗಲಾಟೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ ಹುಡುಗಿಯ ವಿಚಾರಕ್ಕಾಗಿ ಯುವಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ
24
ಅಂಜಿನಪ್ಪ ಬಡಾವಣೆಯ ಬೇಕರಿ ಬಳಿ ಘಟನೆ
ಶನಿವಾರ ಮಧ್ಯಾಹ್ನ ASI ಪುತ್ರ ಅರ್ಮಾನ್ ಮತ್ತು ಸೈಯದ್ ಅಜರುದ್ದೀನ್ ಇಬ್ಬರು ಜೊತೆಯಾಗಿ ಒಂದೇ ಬೈಕ್‌ನಲ್ಲಿ ಅಂಜಿನಪ್ಪ ಬಡಾವಣೆಯ ಬೇಕರಿ ಬಳಿ ಬಂದಿದ್ದಾರೆ. ಈ ವೇಳೆ ಹುಡುಗಿಯ ವಿಷಯಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ನೋಡ ನೋಡುತ್ತಿದ್ದಂತೆ ಅರ್ಮಾನ್ ಮತ್ತು ಸೈಯದ್ ಅಜರುದ್ಧೀನ್ ರಕ್ತ ಬರುವಂತೆ ಹೊಡೆದಾಡಿಕೊಂಡಿದ್ದಾರೆ.
34
ಯುವತಿ ವಿಚಾರಕ್ಕೆ ಜಗಳ
ಅರ್ಮಾನ್ ಸಂಬಂಧಿಯಾಗಿರುವ ಯುವತಿಯೊಂದಿಗೆ ಸೈಯದ್ ಅಜರುದ್ದೀನ್ ಮಾತನಾಡುತ್ತಿದ್ದನು. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನಡುರಸ್ತೆಯಲ್ಲಿ ಯುವಕರಿಬ್ಬರು ಹೊಡೆದಾಡಿಕೊಳ್ಳುತ್ತಿದ್ರೂ ಜನರು ಮಾತ್ರ ನೋಡುತ್ತಾ ನಿಂತಿದ್ರೆ, ಕೆಲವರು ಈ ಎಲ್ಲಾ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಸ್ಥಳಕ್ಕೆ ಬಂದು ಯುವಕರಿಬ್ಬರನ್ನು ಕರೆದುಕೊಂಡು ಹೋಗಿದ್ದಾರೆ. ಇಬ್ಬರ ಕಡೆಯಿಂದಲೂ ದೂರು ದಾಖಲಾಗಿದೆ. ಅರ್ಮಾನ್ ಎಂಬ ಯುವಕ ಹೆಚ್‌ಎಎಲ್ ಪೊಲೀಸ್ ಠಾಣೆಯ ಎಎಸ್‌ಐ ಅವರ ಪುತ್ರ ಎಂದು ತಿಳಿದು ಬಂದಿದೆ.