Maruti Swift vs Hyundai i20 Car: ಮಾರುತಿ, ಹುಂಡೈ ಕಾರ್‌ ನಡುವೆ ರಿಸೇಲ್‌ ಮಾಡಲು ಯಾವುದು ಬೆಸ್ಟ್?

Published : Jul 06, 2026, 03:32 PM IST

Maruti and Hyundai cars resale value:  ಯಾವುದೇ ಕಾರ್‌ ಖರೀದಿ ಮಾಡಿದರೂ ಕೂಡ ಅದು ಶಾಶ್ವತ ಅಲ್ಲ. ಭಾರತದಲ್ಲಿ ಕಾರು ಖರೀದಿಸುವಾಗ ಕೆಲವು ವರ್ಷಗಳ ನಂತರ ಮಾರಿದರೆ ಎಷ್ಟು ಹಣ ಸಿಗಬಹುದು? ಎಂಬ ಆಲೋಚನೆ ಬಂದಿರುತ್ತದೆ. ಹಾಗಾದರೆ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ i20 ಕಾರುಗಳು ಹೇಗೆ?

PREV
13
ಮಾರುತಿ ಸ್ವಿಫ್ಟ್

ಬಜೆಟ್, ಮೈಲೇಜ್ ಮತ್ತು ಕಡಿಮೆ ಖರ್ಚು ಬಯಸುವವರಿಗೆ ಈ ಕಾರ್‌ ಸೂಕ್ತ. ಮಾರುತಿ ಕಾರುಗಳ ಬಿಡಿಭಾಗಗಳು ಸುಲಭವಾಗಿ, ಕಡಿಮೆ ಬೆಲೆಗೆ ಸಿಗುತ್ತವೆ. ದೇಶದ ಮೂಲೆ ಮೂಲೆಯಲ್ಲೂ ಇದರ ಸರ್ವಿಸ್ ಸೆಂಟರ್‌ಗಳಿವೆ. ಹಾಗಾಗಿ, ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಸ್ವಿಫ್ಟ್ ಕಾರನ್ನು ಖರೀದಿಸಲು ಗ್ರಾಹಕರು ಯಾವಾಗಲೂ ಸಿದ್ಧರಿರುತ್ತಾರೆ. 3 ವರ್ಷಗಳ ನಂತರ ಮಾರಿದರೂ ನಿಮಗೆ ಉತ್ತಮ ಬೆಲೆ ಸಿಗುತ್ತದೆ.

23
ಹ್ಯುಂಡೈ i20

ಸನ್‌ರೂಫ್, ದೊಡ್ಡ ಸ್ಕ್ರೀನ್, ಐಷಾರಾಮಿ ಲುಕ್ ಬಯಸುವವರಿಗೆ ಈ ಕಾರ್‌ ಇಷ್ಟವಾಗುತ್ತದೆ. ಈ ಕಾರಿನ ಆರಂಭಿಕ ಬೆಲೆ, ನಿರ್ವಹಣಾ ವೆಚ್ಚ (Maintenance) ಸ್ವಿಫ್ಟ್‌ಗಿಂತ ಸ್ವಲ್ಪ ಹೆಚ್ಚು ಇರುತ್ತದೆ.. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರು ಬಜೆಟ್ ಬಗ್ಗೆ ಹೆಚ್ಚು ಯೋಚಿಸುವುದರಿಂದ, 3 ವರ್ಷಗಳ ನಂತರ ಇದರ ಮೌಲ್ಯ ಸ್ವಿಫ್ಟ್‌ಗಿಂತ ಸ್ವಲ್ಪ ವೇಗವಾಗಿ ಕುಸಿಯುತ್ತದೆ. ಇದರ ಟಾಪ್-ಎಂಡ್ ಮಾಡೆಲ್‌ಗಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ.

33
ಯಾವುದನ್ನು ಖರೀದಿ ಮಾಡಬೇಕು?

ಮರುಮಾರಾಟದ ಮೌಲ್ಯವೇ ಮುಖ್ಯ, ಹಣ ನಷ್ಟವಾಗಬಾರದು ಎನ್ನುವುದಾದರೆ ಮಾರುತಿ ಸ್ವಿಫ್ಟ್ ಅತ್ಯುತ್ತಮ ಆಯ್ಕೆ. ಹಣ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ, ನನಗೆ ಐಷಾರಾಮಿ ಸೌಕರ್ಯಗಳು ಮತ್ತು ಫೀಚರ್‌ಗಳು ಬೇಕು ಎನ್ನುವುದಾದರೆ ಹ್ಯುಂಡೈ i20 ಉತ್ತಮ ಆಯ್ಕೆ

Read more Photos on
click me!

Recommended Stories