Wife Rituals : ಗಂಡ ಕೆಲ್ಸಕ್ಕೆ ಹೋಗ್ತಿದ್ದಂತೆ ಹೆಂಡ್ತಿಯಾದವಳು ಈ ಕೆಲ್ಸ ಮಾಡ್ಬಾರದು

Published : Jun 02, 2026, 06:25 PM IST

Wife Rituals : ಹಿಂದೂ ಧರ್ಮದಲ್ಲಿ ಕೆಲ ನಂಬಿಕೆ ಇದೆ. ಅದು ಬರೀ ನಂಬಿಕೆ ಅಲ್ಲ, ಜೀವನದಲ್ಲಿ ನಡೆಯುವ ಶುಭ- ಅಶುಭ ಘಟನೆ ಜೊತೆ ಸಂಬಂಧ ಹೊಂದಿದೆ. ಪತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಪತ್ನಿ ಕೆಲ ಕೆಲ್ಸ ಮಾಡ್ಬಾರದು. ಅದು ಯಾವ್ದು? ಯಾಕೆ? 

PREV
16
ಕೂದಲು ಬಾಚಬೇಡಿ

ಪತಿ ಕೆಲಸಕ್ಕೆ ಹೋದ ತಕ್ಷಣ ಪತ್ನಿಯಾದವಳು ಕೂದಲು ಬಿಚ್ಚಬಾರದು ಇಲ್ಲ ಬಾಚಬಾರದು. ಇದನ್ನು ಶಾಸ್ತ್ರಗಳಲ್ಲಿ ಅಶುಭ ಅಂತ ಪರಿಗಣಿಸಲಾಗುತ್ತೆ. ಇದು ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ. ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಕೂದಲು ಬಾಚಿದ್ರೆ ಇಲ್ಲ ಬಿಚ್ಚಿದ್ರೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಕುಟುಂಬದಲ್ಲಿ ಉದ್ವಿಗ್ನ ವಾತಾವರಣ ಮನೆ ಮಾಡುತ್ತೆ.

26
ಸ್ನಾನ ಬೇಡ

ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಸ್ನಾನ ಮಾಡುವುದು ಶುಭವಲ್ಲ. ಕೆಲ್ಸ ಮುಗಿಸಿ ಸ್ನಾನ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ನೀವೂ ಪತಿ ಕೆಲ್ಸಕ್ಕೆ ಹೋದ ತಕ್ಷಣ ಸ್ನಾನಕ್ಕೆ ಹೋಗೋರಾಗಿದ್ರೆ ಇಂದೇ ಈ ಅಭ್ಯಾಸ ಬಿಡಿ. ನಂಬಿಕೆ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ನಂತ್ರ ಶವವನ್ನು ಮನೆಯಿಂದ ಹೊರ ಹಾಕಿದಾಗ ಜನರು ಸ್ನಾನ ಮಾಡ್ತಾರೆ.

36
ಮನೆ ಕ್ಲೀನಿಂಗ್

ಪತಿ ಮನೆಯಿಂದ ಹೊರಗೆ ಹೋದ ತಕ್ಷಣ ಕೆಲ ಮಹಿಳೆಯರು ಪೊರಕೆ ಹಿಡಿದು ಮನೆ ಕ್ಲೀನಿಂಗ್ ಶುರು ಮಾಡ್ತಾರೆ. ಶಾಸ್ತ್ರದ ಪ್ರಕಾರ ಇದು ಒಳ್ಳೆಯ ಕೆಲ್ಸವಲ್ಲ. ಕುಟುಂಬದ ಯಾವುದೇ ವ್ಯಕ್ತಿ ಮನೆಯಿಂದ ಹೊರಗೆ ಹೋದ್ರೂ ಈ ಕೆಲ್ಸ ಮಾಡಬಾರದು. ಇದ್ರಿಂದ ಲಕ್ಷ್ಮಿ ಕೋಪಗೊಳ್ತಾಳೆ. ಪತಿಯ ಕೆಲ್ಸದಲ್ಲಿ ಅಡೆತಡೆಯುಂಟಾಗುತ್ತದೆ.

46
ಮನೆ ಹೊರಗೆ ನೀರು

ಗಂಡ ಮನೆಯಲ್ಲಿದ್ರೆ ಕ್ಲೀನಿಂಗ್ ಕೆಲ್ಸ ಆಗೋದಿಲ್ಲ ಎನ್ನುವ ಮಹಿಳೆಯರು ಆತ ಮನೆಯಿಂದ ಹೋಗ್ತಿದ್ದಂತೆ ಕೆಲ್ಸ ಶುರು ಮಾಡ್ತಾರೆ. ಮನೆ ಹೊರಗೆ ನೀರು ಹಾಕಿ, ಕ್ಲೀನಿಂಗ್ ಮಾಡ್ತಾರೆ. ಶಾಸ್ತ್ರದ ಪ್ರಕಾರ ಇದು ಅಶುಭವೆಂದು ಪರಿಗಣಿಸಲಾಗುತ್ತದೆ. ನೀವು ಹೀಗೆ ಮಾಡಿದ್ರೆ ಕುಟುಂಬದ ಸಂಪತ್ತು ಮನೆಯಲ್ಲಿ ನಿಲ್ಲೋದಿಲ್ಲ. ಆರ್ಥಿಕ ನಷ್ಟವುಂಟಾಗುತ್ತದೆ. ವೈವಾಹಿಕ ಜೀವನಕ್ಕೂ ಅಶುಭವೆಂದು ಪರಿಗಣಿಸಲಾಗುತ್ತದೆ.

56
ಮೇಕಪ್ ತೆಗೆಯಬೇಡಿ

ಪತಿ ಮನೆಯಿಂದ ಹೊರಗೆ ಹೋಗ್ತಿದ್ದಂತೆ ಕನ್ನಡಿ ಮುಂದೆ ನಿಂತು ನಿಮ್ಮ ಮೇಕಪ್ ತೆಗೆಯಬೇಡಿ. ಇಲ್ಲ ಮೇಕಪ್ ಮಾಡಿಕೊಳ್ಬೇಡಿ. ವಿವಾಹಿತ ಮಹಿಳೆಯರು ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಪತಿ ಕೆಲ್ಸಕ್ಕೆ ಹೋದ ಸ್ವಲ್ಪ ಸಮಯದ ನಂತ್ರ ನೀವು ಮೇಕಪ್ ಬದಲಿಸಿ ಇಲ್ಲ ಆಭರಣವನ್ನು ತೆಗೆಯಿರಿ.

66
ಇದು ನೆನಪಿರಲಿ

ಪತಿ ಮನೆಯಿಂದ ಹೊರಡುವಾಗ ಯಾವುದೇ ನೀರಿನ ಪಾತ್ರೆಗಳು, ಬಕೆಟ್ಗಳು ಅಥವಾ ಇತರ ಪಾತ್ರೆಗಳನ್ನು ಖಾಲಿ ಬಿಡಬಾರದು. ಯಾವುದೇ ನೀರಿನ ಪಾತ್ರೆ ಖಾಲಿಯಾಗಿದ್ದರೆ, ಅದನ್ನು ತಲೆಕೆಳಗಾಗಿ ಇಡಬೇಕು,. ಏಕೆಂದರೆ ಮನೆಯಿಂದ ಹೊರಡುವಾಗ ಖಾಲಿ ಪಾತ್ರೆಯನ್ನು ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.

Read more Photos on
click me!

Recommended Stories