ಬಿಗ್ಬಾಸ್ ರಿಯಾಲಿಟಿ ಶೋನ ಹೆಸರಿನಲ್ಲಿರುವ ಹೆಚ್ಚುವರಿ 'G' ಯ ರಹಸ್ಯವನ್ನು ಖ್ಯಾತ ಸಂಖ್ಯಾಶಾಸ್ತ್ರಜ್ಞರು ಬಹಿರಂಗಪಡಿಸಿದ್ದಾರೆ. ಟಿಆರ್ಪಿ ಹೆಚ್ಚಿಸಲು ಸಂಖ್ಯಾಶಾಸ್ತ್ರದ ಪ್ರಕಾರ ಹೆಚ್ಚುವರಿ 'G' ಅನ್ನು ಸೇರಿಸಲಾಗಿದೆ ಎಂಬುದು ಅವರ ವಿವರಣೆ.
ಬಿಗ್ಬಾಸ್ ಪ್ರೇಮಿಗಳು ಲಕ್ಷಾಂತರ ಮಂದಿ ಇದ್ದಾರೆ. ಇನ್ನು ಬೇರೆ ಬೇರೆ ಭಾಷೆಗಳ ಬಿಗ್ಬಾಸ್ಅನ್ನು ಒಟ್ಟಾರೆ ತೆಗೆದುಕೊಂಡರೆ ಕೋಟ್ಯಂತರ ಮಂದಿ ಅಭಿಮಾನಿಗಳು ಆಗುತ್ತಾರೆ. ಆದರೆ ಬಹುಶಃ ಹೆಚ್ಚಿನವರು ಈ Bigg Boss ಶಬ್ದಕ್ಕೆ ಹೆಚ್ಚುವರಿ 'G' ಯಾಕೆ ಸೇರಿದೆ ಎಂದು ತಲೆಕೆಡಿಸಿಕೊಂಡಿರಲಿಕ್ಕಿಲ್ಲ. ಎಲ್ಲರಿಗೂ ತಿಳಿದಿರುವಂತೆ ಬಿಗ್ ಸ್ಪೆಲ್ಲಿಂಗ್ Big. ಆದರೆ ಅದು Bigg ಆಗಿದ್ಯಾಕೆ ಎಂದು ಯೋಚನೆ ಮಾಡಿದ್ದೀರಾ?
27
ಬಿಗ್ಬಾಸ್ಗೆ ಹೆಚ್ಚುವ ಟಿಆರ್ಪಿ
ಈ ಪರಿಯಲ್ಲಿ ಟಿಆರ್ಪಿ ಪಡೆಯುವ, ಎಲ್ಲಾ ರಿಯಾಲಿಟಿ ಷೋಗಳನ್ನೂ ಹಿಂದಿಕ್ಕುವ ತಾಕತ್ತು ಇರುವ ಈ ರಿಯಾಲಿಟಿ ಷೋನಲ್ಲಿ ಈ ಎಕ್ಸ್ಟ್ರಾ ಜಿ ಮಹತ್ವದ ಪಾತ್ರ ವಹಿಸಿದೆ ಎನ್ನುವುದು ಗೊತ್ತಾ?
37
ಸಂಖ್ಯಾಶಾಸ್ತ್ರದ ಮ್ಯಾಜಿಕ್
ಇದರ ಹಿಂದಿರೋದು ಸಂಖ್ಯಾಶಾಸ್ತ್ರ (Numerology). ಅಷ್ಟಕ್ಕೂ ಸಿನಿಮಾ, ರಾಜಕೀಯದವರು ನಂಬುವಷ್ಟು, ಅವರು ಅನುಸರಿಸುವಷ್ಟು ಜ್ಯೋತಿಷ, ಸಂಖ್ಯಾಶಾಸ್ತ್ರವನ್ನು ಯಾರೂ ನಂಬುವುದಿಲ್ಲ ಎನ್ನಬಹುದೇನೋ. ಹಲವು ಬಾರಿ ಅವರ ಯಶಸ್ಸಿನ ಗುಟ್ಟು ಕೂಡ ಇದೇ ಆಗಿರುತ್ತದೆ. ಎಷ್ಟೋ ಮಂದಿ ಸಂಖ್ಯಾಶಾಸ್ತ್ರ ಎಂದರೆ ಅಸಡ್ಡೆ ಮಾಡುವುದು ಇದೆ. ಆದರೆ ಇದನ್ನು science ಎಂದೂ ಹೇಳಲಾಗುತ್ತದೆ.
ಅದೇನೇ ಇದ್ದರೂ ಬಿಗ್ಬಾಸ್ನ ಎಕ್ಸ್ಟ್ರಾ ಜಿ ಬಗ್ಗೆ ಇದೀಗ ಖ್ಯಾತ ಸಂಖ್ಯಾಶಾಸ್ತ್ರಜ್ಞ ಹಾಗೂ ಖಗೋಳಶಾಸ್ತ್ರಜ್ಞ ಸಂಜಯ್ ಬಿ. ಜುಮಾನಿ ಅವರು ಈ ಬಗ್ಗೆ ರಿವೀಲ್ ಮಾಡಿದ್ದಾರೆ. ‘ಬಿಗ್ ಬಾಸ್ ಹಿಂದಿ ಸೀಸನ್ 13’ರ ಸ್ಪರ್ಧಿ ಪರಸ್ ಛಬ್ರಾ ಅವರ ‘ಆಬ್ರಾ ಕಾ ಡಾಬ್ರಾ ಶೋ’ ಪಾಡ್ಕಾಸ್ಟ್ನಲ್ಲಿ ಈ ಕುತೂಹಲದ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ.
57
ಸಂಖ್ಯಾಶಾಸ್ತ್ರದ ಮಹಿಮೆ!
ಸಂಖ್ಯಾಶಾಸ್ತ್ರದಲ್ಲಿ ಒಂದೊಂದು ಅಕ್ಷರ ಅಂದರೆ A, B, C,D... ಹೀಗೆ. ಇವುಗಳಿಗೆ ಒಂದೊಂದು ಸಂಖ್ಯೆ ನೀಡಲಾಗಿದೆ. ಈ ಸಂಖ್ಯೆಗೆ ಅನುಗುಣವಾಗಿ Big Boss ಅನ್ನು ಕೂಡಿಸಿದಾಗ ಅದು 21 ಸಂಖ್ಯೆ ಆಗುತ್ತಿತ್ತು. ಆದರೆ ಇದು ರಿಯಾಲಿಟಿ ಷೋಗೆ ಅಷ್ಟೊಂದು ಒಳ್ಳೆಯದಲ್ಲ. ಟಿಆರ್ಪಿ ಹೆಚ್ಚು ಬೇಕು ಎಂದರೆ 24 ಸಂಖ್ಯೆ ಆಗಬೇಕಿತ್ತು. ಅದಕ್ಕಾಗಿಯೇ ನಾವು ಹೆಚ್ಚುವರಿ G ಸೇರಿಸಲು ಸೂಚಿಸಿರುವುದಾಗಿ ಅವರು ರಿವೀಲ್ ಮಾಡಿದ್ದಾರೆ.
67
24 ಲಕ್ಕಿ ನಂಬರ್
24 ಎನ್ನುವುದು, ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುವ ಶುಕ್ರ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಶುಕ್ರನು ಪ್ರೀತಿ, ಸೌಂದರ್ಯ, ಆಕರ್ಷಣೆ, ಸಂತೋಷ, ಸಂಪತ್ತು ಮತ್ತು ಕಲೆಯನ್ನು ನೀಡುತ್ತಾನೆ. ಶುಕ್ರನ ಕೃಪೆಯಿಂದ, ಒಬ್ಬ ವ್ಯಕ್ತಿಯು ಸಮಾಜದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತಾನೆ. ಅಲ್ಲದೆ, ಈ ಸಂಖ್ಯೆಯು ಐಷಾರಾಮಿ, ಹಣ ಮತ್ತು ಖ್ಯಾತಿಯನ್ನು ಆಕರ್ಷಿಸುತ್ತದೆ. ಇದೇ ಕಾರಣಕ್ಕೆ ಇದೀಗ ಎಲ್ಲಾ ಭಾಷೆಗಳ ಬಿಗ್ಬಾಸ್ ಈ ಪರಿಯಲ್ಲಿ ಟಿಆರ್ಪಿ ಹೊಂದಿದೆ ಎನ್ನುವುದು ಸಂಜಯ್ ಬಿ. ಜುಮಾನಿ ಮಾತು.
77
ನ್ಯೂಮರೋಲಾಜಿ ಏನು ಹೇಳುತ್ತದೆ?
ಹಾಗಿದ್ದರೆ ಸಂಖ್ಯಾಶಾಸ್ತ್ರದಲ್ಲಿ ಏನಿದೆ?
ಇದಾಗಲೇ ಹೇಳಿದಂತೆ ಇಂಗ್ಲಿಷ್ನ ಒಂದೊಂದು Alphabetಗೂ ಒಂದೊಂದು ಸಂಖ್ಯೆ ಇದೆ. ಅದನ್ನು ನೋಡುವುದಾದರೆ,