ಪತ್ನಿ ವಜ್ರದೋಲೆ ಕಳೆದಾಗ ಹುಡುಕಿ ಕೊಟ್ಟಿದ್ದ ಕೊರಗಜ್ಜ: ರೋಚಕ ಘಟನೆ ನೆನೆದ ವಿಜಯ ರಾಘವೇಂದ್ರ

Published : May 05, 2026, 08:19 PM IST

ತುಳುನಾಡಿನ ಪ್ರಸಿದ್ಧ ದೈವ ಕೊರಗಜ್ಜನ ಮಹಿಮೆ ಅಪಾರ. ನಟ ವಿಜಯ ರಾಘವೇಂದ್ರ ಅವರು ತಮ್ಮ ಪತ್ನಿ ಸ್ಪಂದನಾ ಅವರ ಕಳೆದುಹೋದ ವಜ್ರದ ಓಲೆಯು, ಕೊರಗಜ್ಜನನ್ನು ಬೇಡಿಕೊಂಡ ಕೆಲವೇ ನಿಮಿಷಗಳಲ್ಲಿ ಪವಾಡಸದೃಶವಾಗಿ ಸಿಕ್ಕ ಘಟನೆಯನ್ನು ಹಂಚಿಕೊಂಡಿದ್ದಾರೆ.

PREV
16
ಕೊರಗಜ್ಜನ ಮಹಿಮೆ

ಕೊರಗಜ್ಜ ಮತ್ತು ಕೊರಗಜ್ಜನ ದೇವಸ್ಥಾನವು ತುಳುನಾಡು ಪ್ರದೇಶದಲ್ಲಿ ಅತ್ಯಂತ ಪವಿತ್ರವಾದ ಮತ್ತು ಬೇಡಿಕೆಯಿರುವ ಸ್ಥಳಗಳಲ್ಲಿ ಒಂದಾಗಿದೆ. ದಕ್ಷಿಣದಿಂದ ಉತ್ತರದವರೆಗೆ ಕೊರಗಜ್ಜನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಮಂಗಳೂರು ಸೇರಿದಂತೆ ದಕ್ಷಿಣದ ಹಲವು ಭಾಗಗಳಲ್ಲಿ ಇವರನ್ನು ಕೊರಗಜ್ಜ ಎಂದೇ ಕರೆಯುತ್ತಾರೆ.

26
ಹೆಚ್ಚು ಪೂಜಿಸುವ ದೈವ

ತುಳುನಾಡಿನಾದ್ಯಂತ ಹೆಚ್ಚು ಪೂಜಿಸುವ ದೈವವೆಂದರೆ ಕೊರಗಜ್ಜ . ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳು ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ.

36
ಕೊರಗಜ್ಜನ ಮಹಿಮೆ

ಈ ಕೊರಗಜ್ಜನ ಮಹಿಮೆ ಹಾಗೂ ತಮ್ಮ ಜೀವನದಲ್ಲಿ ಆದ ವಿಚಿತ್ರ ಘಟನೆಯನ್ನು ನಟ ವಿಜಯ ರಾಘವೇಂದ್ರ ಅವರು chilling_with_chilimbi ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

46
ಪತ್ನಿ ಜೊತೆ ಕೊರಗಜ್ಜನ ಭೇಟಿ

ಅಂದು ನಾನು ಮತ್ತು ಪತ್ನಿ ಸ್ಪಂದನಾ ಕೊರಗಜ್ಜನ ಭೇಟಿಯಾಗಿ ಒಂದು ಮನೆಗೆ ಹೋಗಿದ್ದೆವು. ಆ ಸಂದರ್ಭದಲ್ಲಿ ಸ್ಪಂದನಾಳ ಒಂದು ವಜ್ರದ ಓಲೆ ಬಿದ್ದೋಯಿತು. ಅದನ್ನು ಗಮನಿಸಿ ಆಕೆ ಸಿಕ್ಕಾಪಟ್ಟೆ ಗಾಬರಿಗೊಂಡಳು ಎಂದು ನೆನಪಿಸಿಕೊಂಡಿದ್ದಾರೆ.

56
ಎಲ್ಲಿ ಹುಡುಕಿದರೂ ಸಿಗಲಿಲ್ಲ

ಎಲ್ಲಿ ಹುಡುಕಿದರೂ ಸಿಗಲಿಲ್ಲ. ಕಾರಿನಲ್ಲಿ, ಎಲ್ಲಾ ಜಾಗದಲ್ಲಿ ಹುಡುಕಿದರೂ ಸಿಗಲಿಲ್ಲ. ಆಕೆಗೆ ಅದೇನು ಎನ್ನಿಸಿತೋ ಗೊತ್ತಿಲ್ಲ. ಕೊರಗಜ್ಜನನ್ನು ನೆನಪಿಸಿಕೊಂಡು ಒಂದು ಕ್ಷಣ ಕೊರಗಜ್ಜಾ ನನ್ನ ಓಲೆ ವಾಪಸ್ ಕೊಡಿಸು ಎಂದು ಬೇಡಿಕೊಂಡಳು ಎಂದಿರುವ ನಟ, ಆ ಕ್ಷಣ ಆದ ಅದ್ಭುತವನ್ನು ನೆನಪಿಸಿಕೊಂಡಿದ್ದಾರೆ.

66
ನಡೆಯಿತು ಪವಾಡ

ಏನಾಶ್ಚರ್ಯವೋ ಗೊತ್ತಿಲ್ಲ. ಅವಳು ಹೀಗೆ ಬೇಡಿಕೊಂಡು ಹತ್ತೇ ನಿಮಿಷ. ನನಗೆ ಅದ್ಯಾಕೆ ಹಾಗೆ ಅನ್ನಿಸಿತೋ ಗೊತ್ತಿಲ್ಲ. ಅಲ್ಲೊಂದು ಡ್ರೈನೇಜ್‌ ಇತ್ತು. ಅದು ಒಣಗಿತ್ತು. ಅಪ್ಪಿ ತಪ್ಪಿಯೂ ಅಲ್ಲಿ ನೋಡಲು ಹೋಗುತ್ತಲೇ ಇರಲಿಲ್ಲ. ಆದರೆ ಅದ್ಯಾಕೆ ಆ ಸಮಯದಲ್ಲಿ ಹಾಗೆ ಬುದ್ಧಿ ಬಂತೋ ಗೊತ್ತಿಲ್ಲ. ಅಲ್ಲಿ ನೋಡಿದಾಗ, ಅವಳ ಓಲೆ ಅಲ್ಲಿಯೇ ಹೊಳೆಯುತ್ತಿತ್ತು. ಇದು ಅಂದು ನಡೆದ ಪವಾಡ ಎಂದಿದ್ದಾರೆ.

Read more Photos on
click me!

Recommended Stories