ಈ 5 ರಾಶಿಯ ಪುರುಷರಿಗೆ ಸುಂದರ ಹೆಂಡತಿಯಿದ್ರೂ ಅನೈತಿಕ ಸಂಬಂಧದ ಆಸೆ!

First Published | Nov 14, 2024, 1:16 PM IST

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ, ಧನಸ್ಸು, ಸಿಂಹ, ಮೇಷ ಹಾಗೂ ವೃಶ್ಚಿಕ ರಾಶಿಯ ಪುರುಷರು ತಮಗೆ ಸುಂದರ, ಸುಕೋಮಲ, ಸುಗುಣ, ಶೀಲ, ಸಂಪನ್ನ ಹೆಂಡತಿ ಇದ್ದರೂ ಅನ್ಯ ಮಹಿಳೆಯರೊಂದಿಗೆ ಸಂಬಂಧ ಹೊಂದಲು ಹಾತೊರೆಯುತ್ತಾರೆ. ಈ ರಾಶಿಯವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಅರ್ಥೈಸಿಕೊಳ್ಳಿ.

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ, ಧನಸ್ಸು, ಸಿಂಹ, ಮೇಷ ಹಾಗೂ ವೃಶ್ಚಿಕ ರಾಶಿಯ ಪುರುಷರು ತಮಗೆ ಸುಂದರ, ಸುಕೋಮಲ, ಸುಗುಣ, ಶೀಲ, ಸಂಪನ್ನ ಹೆಂಡತಿ ಇದ್ದರೂ ತಾವು ಇನ್ನೊಂದು ಮಹಿಳೆಯ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಾರೆ. ಕೆಲವು ಸಂದರ್ಭದಲ್ಲಿ ಈ ರಾಶಿಯವರು ಅನ್ಯ ಮಹಿಳೆಯರೊಂದಿಗೆ ಸಂಬಂಧವನ್ನೂ ಹೊಂದುತ್ತಾರೆ ಎಂದು ಹೇಳಲಾಗಿದೆ. ಆದರೆ, ಇದನ್ನು ತಪ್ಪಿಸಲು ನೀವು ಹೇಗೆ ನಡೆದುಕೊಳ್ಳಬೇಕು ಎಂದು ಅರ್ಥೈಸಿಕೊಳ್ಳಿ..

ಮಿಥುನ ರಾಶಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರ ಸ್ವಭಾವ ಹೊಸ ವಿಚಾರವನ್ನು ತಿಳಿದುಕೊಳ್ಳುವುದಕ್ಕೆ ಹಾಗೂ ಅನುಭವಿಸುವುದಕ್ಕೆ ಸಾಕಷ್ಟು ಕಾತುರರಾಗಿರುತ್ತಾರೆ. ಇವರು ಈಗಾಗಲೇ ಇರುವ ಸಂಬಂಧಗಳಾದ ಹೆಂಡತಿ ಅಥವಾ ಪ್ರೀತಿಸುತ್ತಿರುವ ಹುಡುಗಿ ಇದ್ದರೂ ಅದನ್ನು ಹೊರತುಪಡಿಸಿ ಬೇರೆಯವರೊಂದಿಗೂ ಕೂಡ ಪ್ರೀತಿಯಿಂದ ಭಾವನಾತ್ಮಕವಾಗಿ ಬೆರೆಯುವಂತಹ ಪ್ರಯತ್ನ ಮಾಡುತ್ತಾರೆ. ಈ ರೀತಿಯ ಸಣ್ಣ ಸಣ್ಣ ಪ್ರಯತ್ನಗಳು ಮುಂದಿನ ದಿನಗಳಲ್ಲಿ ಅವರಿಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ಕಾರಣವಾಗುತ್ತದೆ. ಯಾವಾಗಲೂ ಈ ಮಿಥುನ ರಾಶಿಯವರು ತಮಗೆ ಈಗಾಘಲೇ ಒಂದು ಸಂಬಂಧ ಇದ್ದರೂ ಮತ್ತೊಂದು ಸಂಬಂಧಕ್ಕೆ ಹಾತೊರೆಯುವುದೇ ಇದಕ್ಕೆ ಕಾರಣವಾಗುತ್ತದೆ.

Latest Videos


ಧನಸ್ಸು ರಾಶಿ

ಈ ರಾಶಿಯ ಚಿತ್ರವೇ ತೋರಿಸುವಂತೆ ಧನು ರಾಶಿಯವರು ಸಾಹಸಮಯ ಜೀವನದ ಪ್ರವೃತ್ತಿ ಹೊಂದಿರುತ್ತಾರೆ. ಜೊತೆಗೆ, ಆದಷ್ಟು ಅವರು ಸ್ವಾತಂತ್ರ್ಯವನ್ನು ಹೆಚ್ಚಾಗಿ ಬಯಸುತ್ತಾರೆ. ತಮಗೆ ಇಷ್ಟಬಂದಂತೆಯೇ ಜೀವನದಲ್ಲಿ ಇರವುದಕ್ಕೆ ಹೆಚ್ಚಾಗಿ ಇಷ್ಟಪಡುತ್ತಾರೆ. ಜೊತೆಗೆ ತಮ್ಮ ಸ್ವಾತಂತ್ರ್ಯವನ್ನು ಹೆಂಡತಿ, ಮಕ್ಕಳು ಅಥವಾ ಹಿರಿಯರು ಯಾರೂ ಕಿತ್ತುಕೊಳ್ಳುವುದಕ್ಕೆ ಅವರು ಇಷ್ಟಪಡುವುದಿಲ್ಲ. ಮುಖ್ಯವಾಗಿ ಇವರು ತಮಗೆ ಈಗಾಗಲೇ ಇರುವ ಸಂಬಂಧಗಳು ತಮ್ಮ ಸ್ವಾತಂತ್ರ್ಯಕ್ಕೆ ಅಡ್ಡಿಬರುತ್ತವೆ ಎಂದು ತಿಳಿದರೆ ಅವರು ಬೇರೆಯದೇ ಸಂಬಂಧವನ್ನು ಬೆಳೆಸುವುದಕ್ಕೂ ಹಿಂಜರಿಯುವುದಿಲ್ಲ. ಅವರಿಗೆ ಸ್ವಾತಂತ್ರ್ಯಕ್ಕೆ ಎಲ್ಲಿ ಧಕ್ಕೆ ಬರುತ್ತದೆಯೋ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ವೈದಿಕ ಜ್ಯೋತಿಷ್ಯ ಶಾಸ್ತ್ರದ ಅಂಶಗಳು ತಿಳಿಸುತ್ತವೆ.

ಸಿಂಹ ರಾಶಿ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಿಂಹ ರಾಶಿಯ ವ್ಯಕ್ತಿಗಳು ಉತ್ತಮ ವ್ಯಕ್ತಿತ್ವ ಹಾಗೂ ಅತಿಯಾದ ಆತ್ಮವಿಶ್ವಾಸ ಹೊಂದಿದವರು ಆಗಿರುತ್ತಾರೆ. ಹೀಗಾಗಿ, ಎಲ್ಲೆಡೆ ತಾವು ಒಬ್ಬ ನಾಯಕನಂತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಇವರ ಈ ಗುಣದಿಂದಲೇ ಸಮಾಜದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಸಂಬಂಧಗಳ ವಿಚಾರದಲ್ಲಿ ತಮ್ಮ ಸಂಗಾತಿಯಿಂದ ತಾವು ಕೊಡುಷ್ಟು ಪ್ರೀತಿಯನ್ನು ಸಮನಾಗಿ ವಾಪಸ್ ಪಡೆಯುವುದಕ್ಕೆ ನಿರೀಕ್ಷೆ ಮಾಡುತ್ತಾರೆ. ಒಂದು ವೇಳೆ ತಾವು ಕೊಟ್ಟ ಪ್ರೀತಿ ತಮಗೆ ವಾಪಸ್ ಸಿಗದಿದ್ದರೆ, ತಮಗೆ ಹೆಚ್ಚಾಗಿ ಪ್ರೀತಿ ಕೊಡುವಂತಹವರ ಕಡೆಗೆ ಆಕರ್ಷಿತರಾಗುತ್ತಾರೆ. ಆದ್ದರಿಂದ, ಸಿಂಹ ರಾಶಿಯವರು ಕೂಡ ಈಗಿರುವ ಸಂಬಂಧಗಳ ಜೊತೆಗೆ ಬೇರೊಂದು ಸಂಬಂಧ ಬೆಳೆಸಿಕೊಳ್ಳಲೂ ಮುಂದಾಗುತ್ತಾರೆ.

ಮೇಷ ರಾಶಿ

ಸಮಾಜದಲ್ಲಿ ಮೇಷ ರಾಶಿಯವರು ಪ್ರತಿಯೊಂದು ವಿಚಾರಗಳನ್ನು ತುರ್ತಾಗಿ ಮಾಡಿ ಮುಗಿಸುವ ಗುಣ ಹೊಂದಿರುತ್ತಾರೆ. ಅವರಿಗೆ ಕೆಲಸದಿಂದ ಸಿಗುವಂತಹ ತೃಪ್ತಿ ಅಥವಾ ಯಾವುದೇ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗಲೇ ಅದನ್ನು ತಡ ಮಾಡದೇ ದಿಢೀರನೇ ನಿರ್ಧಾರ ಕೈಗೊಳ್ಳುತ್ತಾರೆ. ಇದೇ ರೀತಿ ತಮ್ಮ ಹೆಂಡತಿ ಅಥವಾ ಸಂಗಾತಿಯಿಂದಲೂ ಬಯಸುತ್ತಾರೆ. ತಮ್ಮ ಸಂಬಂಧಗಳಲ್ಲಿ ತಾವು ಬಯಸಿದ್ದು ಸಿಗದೇ ಹೋದಲ್ಲಿ ಕೂಡಲೇ ಅದನ್ನು ಕಡಿದುಕೊಂಡು ಬೇರೊಂದು ಸಂಬಂಧ ಬೆಳೆಸಲು ಮುಂದಾಗುತ್ತಾರೆ. ಹೀಗಾಗಿ, ತಮ್ಮ ಸಂಗಾತಿಯಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೆ ಹೊಸ ಪ್ರೀತಿಯನ್ನು ಹುಡುಕಿಕೊಂಡು ಹೋಗುವುದು ಈ ಮೇಷ ರಾಶಿ ಪುರುಷರ ಗುಣಗಳಾಗಿವೆ.

ವೇಶ್ಚಿಕ ರಾಶಿ

ಇನ್ನು ವೃಶ್ಚಿಕ ರಾಶಿಯವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ತಮ್ಮ ಹೆಂಡತಿ ಅಥವಾ ಸಂಗಾತಿಯೊಂದಿಗೆ ಆಳವಾದ ಸಂಬಂಧ ಹೊಂದಿದ್ದು, ಕೆಲವೊಮ್ಮೆ ನಂಬಿಕೆ ಹಾಗೂ ಅತಿಯಾದ ಕಾಳಜಿಯನ್ನೂ ತೋರಿಸುತ್ತಾರೆ. ಆದರೆ, ಅವರ ಸಂಗಾತಿಯಿಂದ ತಮ್ಮ ನಂಬಿಕೆ ಅಥವಾ ಕಾಳಜಿಗೆ ಮೋಸವಾದಲ್ಲಿ ಅವರು ಕೂಡ ಬೆರೆ ಸಂಬಂಧವನ್ನು ಹುಡುಕಿಕೊಂಡು ಹೋಗುತ್ತಾರೆ. ಇಷ್ಟು ಮಾತ್ರವಲ್ಲದೇ ತಮ್ಮ ಸಂಗಾತಿ ಭಾವನಾತ್ಮಕವಾಗಿ ತಮ್ಮೊಂದಿಗೆ ಹೊಂದಾಣಿಕ ಆಗದಿದ್ದರೆ ಆಗಲೂ ಬೇರೊಂದು ಸಂಬಂಧವನ್ನು ಇಟ್ಟುಕೊಳ್ಳಲು ಮುಂದಾಗುತ್ತಾರೆ. ನಂತರ, ಮೊದಲಿದ್ದ ಸಂಗಾತಿಗಳನ್ನು ಶಾಶ್ವತವಾಗಿ ಬಿಟ್ಟು ಹೋಗುತ್ತಾರೆ.

click me!